ಬೆಂಗಳೂರು: ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ವಿಧಾನಸೌಧದತ್ತ ಮುನ್ನುಗ್ಗುತ್ತಿದೆ. ಪೊಲೀಸ್ ಅನುಮತಿ ಇಲ್ಲದಿದ್ದರೂ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆ ಬಿಡಿಎ ಕಚೇರಿ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ರಸ್ತೆಗೆ ಅಡ್ಡಲಾಗಿ ನಿಂತ ಪೊಲೀಸರು, ಪ್ರತಿಭಟನಾಕಾರರು ಸಿಎಂ ನಿವಾಸದತ್ತ ಹೋಗದಂತೆ ತಡೆಯೊಡ್ಡಿದ್ದಾರೆ. ಕಾವೇರಿ ಸರ್ಕಲ್ನಿಂದ ಫ್ರೀಡಂ ಪಾರ್ಕ್ವರೆಗೆ ನಡೆಯುತ್ತಿರುವ ಪ್ರತಿಭಟನಾ ಮೆರವಣಿಗೆ ವೇಳೆ ತಳ್ಳಾಟ ನೂಕಾಟ ನಡೆದಿದ್ದು, ಬ್ಯಾರಿಕೇಡ್ ತಳ್ಳಿ ಜಾಥಾ ಮುನ್ನುಗ್ಗುತ್ತಿರುವ ದೃಶ್ಯಗಳು ಕಂಡುಬಂತು.
ಓದಿ:'ಮಾ.4 ರವರೆಗೆ ವಿಧಾನಸೌಧದ ಎದುರು ಧರಣಿ, ನಂತರ ಉಪವಾಸ ಸತ್ಯಾಗ್ರಹ'
ಈ ಸಂಬಂಧ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದು, ನಾವು ಶಾಂತಿಪ್ರಿಯರು, ಯಾವುದೇ ಕುಮ್ಮಕ್ಕಿಗೆ ಒಳಗಾಗಬಾರದು. ಶಾಂತಿ ಕಾಪಡಬೇಕು ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಫ್ರೀಡಂ ಪಾರ್ಕ್ನಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಧರಣಿ ಕೂರಲಿದ್ದಾರೆ ಎಂದು ತಿಳಿದು ಬಂದಿದೆ.