ಬೆಂಗಳೂರು: ಪಂಚಮಸಾಲಿಗಳಿಂದ 2ಎ ಮೀಸಲಾತಿ ಹೋರಾಟ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ ಎನ್ನುವಂತಾಗಿದ್ದು, ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಮೀಸಲಾತಿ ಧರಣಿ ಇಂದೂ ಮುಂದುವರೆದಿದೆ.
ಬುಧವಾರ ಕೂಡಲಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಜೊತೆ ಸಚಿವರಾದ ಬೊಮ್ಮಾಯಿ ಹಾಗೂ ಸಿ ಸಿ ಪಾಟೀಲ್ ಸಭೆ ನಡೆಸಿ ಮಾತುಕತೆ ನಡೆಸಿದ್ದರು. ಆದರೆ ನಿನ್ನೆಯ ಸಭೆ ವಿಫಲವಾದಂತೆ ಕಂಡು ಬರುತ್ತಿದೆ.
ಓದಿ: ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ತಮಿಳುನಾಡಿನಲ್ಲಿ ಸೆರೆ
ಸರ್ಕಾರ ಮನವೂಲಿಕೆ ನಂತರವೂ ಮೀಸಲಾತಿ ಪಟ್ಟು ಬಗೆಹರಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇಂದು ಸಂಜೆ ಪಂಚಮಸಾಲಿ ಮುಖಂಡರ ಮಹತ್ವದ ದುಂಡು ಮೇಜಿನ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.