ETV Bharat / state

ಪಂಚಮಸಾಲಿ ಸಮುದಾಯದ ನಾಯಕ ಶಂಕರ್ ಪಾಟೀಲ್ ಮುನೇನಕೊಪ್ಪಗೆ ಒಲಿದ ಸಚಿವ ಸ್ಥಾನ - Panchamasaali community leader Shanker patil Munenakoppa

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಶಂಕರ್ ಪಾಟೀಲ್ ಮುನೇನಕೊಪ್ಪ ಕುಟುಂಬಕ್ಕೆ ಧಾರವಾಡ ಭಾಗದಲ್ಲಿ ತುಂಬಾ ಉತ್ತಮ ಹೆಸರಿದೆ. ಜನರಿಗೆ ಅತ್ಯಂತ ಸುಲಭವಾಗಿ ದೊರಕುವ ರಾಜಕಾರಣಿಯಾಗಿ ಇವರು ಗುರುತಿಸಿಕೊಂಡಿದ್ದಾರೆ..

shanker-patil-munenakoppa
ಶಂಕರ್ ಪಾಟೀಲ್ ಮುನೇನಕೊಪ್ಪ
author img

By

Published : Aug 4, 2021, 9:21 PM IST

ಬೆಂಗಳೂರು : ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಶಂಕರ್ ಪಾಟೀಲ್ ಮುನೇನಕೊಪ್ಪ ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ. ಜೆಡಿಎಸ್​ನ ಎನ್ ಹೆಚ್ ಕೋನರೆಡ್ಡಿ ವಿರುದ್ಧ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿರುವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು, 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, 2013ರ ವಿಧಾನಸಭೆ ಚುನಾವಣೆಯಲ್ಲಿ ಕೋನರೆಡ್ಡಿ ವಿರುದ್ಧ ಸೋಲುಂಡಿದ್ದರು.

ಮೂಲತಃ ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ರಾಜಕೀಯವಾಗಿಯೂ ಹೊಸಬರಲ್ಲ. ಇವರ ತಾತ ಸಹ ರಾಜಕೀಯದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಆದರೆ, ಇವರ ತಂದೆ ರಾಜಕೀಯಕ್ಕೆ ಬರದೆ ಕೃಷಿ ಚಟುವಟಿಕೆಗೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡಿದ್ದರು. ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದ ಇವರು, ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿ ಕಬ್ಬಡ್ಡಿ ಕ್ರೀಡಾಪಟುವಾಗಿ ಜನಪ್ರಿಯತೆ ಪಡೆದಿದ್ದರು.

1989ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ ಶಂಕರ್ ಪಾಟೀಲ್, ಅಂದಿನ ಜನತಾದಳ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲವರ್ಷ ಕಾರ್ಯನಿರ್ವಹಿಸಿದರು. 2008 ರವರೆಗೂ ಜನತಾದಳದ ವಿವಿಧ ಹುದ್ದೆ ಅಲಂಕರಿಸಿದರು.

ಸುಲಭವಾಗಿ ದೊರಕುವ ರಾಜಕಾರಣಿ : ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಶಂಕರ್ ಪಾಟೀಲ್ ಮುನೇನಕೊಪ್ಪ ಕುಟುಂಬಕ್ಕೆ ಧಾರವಾಡ ಭಾಗದಲ್ಲಿ ತುಂಬಾ ಉತ್ತಮ ಹೆಸರಿದೆ. ಜನರಿಗೆ ಅತ್ಯಂತ ಸುಲಭವಾಗಿ ದೊರಕುವ ರಾಜಕಾರಣಿಯಾಗಿ ಇವರು ಗುರುತಿಸಿಕೊಂಡಿದ್ದಾರೆ.

ಸ್ವಕ್ಷೇತ್ರದಲ್ಲಿ ನೆಲೆ : 52 ವರ್ಷದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ತಂದೆ ಬಸವನಗೌಡ ಮುನೇನಕೊಪ್ಪ ಹಾಗೂ ತಾಯಿ ಗಂಗಮ್ಮ. ಪತ್ನಿ ಪ್ರಭಾವತಿ ಹಾಗೂ ಇಬ್ಬರು ಗಂಡು ಮಕ್ಕಳೊಂದಿಗೆ ಧಾರವಾಡದ ಸ್ವಕ್ಷೇತ್ರದಲ್ಲಿ ನೆಲೆಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರದ ಪ್ರತಿನಿಧಿಯಾಗಿರುವ ಶಂಕರ್ ಪಾಟೀಲ್ ಮುನೇನಕೊಪ್ಪಗೆ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರ ಮತ್ತೋರ್ವ ಪ್ರಬಲ ಆಕಾಂಕ್ಷಿ ಅರವಿಂದ್ ಬೆಲ್ಲದ್ ಅವರಿಗೆ ವ್ಯವಸ್ಥಿತವಾಗಿ ಸರ್ಕಾರ ಕೈಕೊಟ್ಟಿದೆ.

ಓದಿ: ಮುಖ್ಯಮಂತ್ರಿಗಳು ಯಾವುದೇ ಸ್ಥಾನ ನೀಡಿದರೂ ಅತ್ಯಂತ ನಿಷ್ಠೆಯಿಂದ ನಿರ್ವಹಿಸುವೆ.. ಸಚಿವ ಹೆಬ್ಬಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.