ಬೆಂಗಳೂರು: ಬೆಂಗಳೂರಿನ ಹುಡುಗರು ಸಿಇಟಿ ಪರೀಕ್ಷೆಯಲ್ಲಿ ಭರ್ಜರಿ ಸ್ಥಾನ ಪಡೆದುಕೊಂಡಿದ್ದಾರೆ. ಎಂಜಿನಿಯರಿಂಗ್ನಿಂದ ಹಿಡಿದು ವೆಟರ್ನರಿ, ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲೂ ರಾಜ್ಯಕ್ಕೆ ಫಸ್ಟು ಬೆಂಗಳೂರಿಗರು.
ಬೆಂಗಳೂರಿನ ನಾರಾಯಣ ಇ- ಟೆಕ್ನೊ ಸ್ಕೂಲ್ ವಿದ್ಯಾರ್ಥಿ ಪಿ. ಸಾಯಿ ವಿವೇಕ್ ವೆಟರ್ನರಿ, ಬಿ ಫಾರ್ಮಾ ಮತ್ತು ಡಿ ಫಾರ್ಮಾ ನಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಾಯಿ ವಿವೇಕ್, ರ್ಯಾಂಕಿಂಗ್ ಬರಲು ಮುಖ್ಯ ಕಾರಣ ಶಿಕ್ಷಕರು. ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕೆಂಬ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುತ್ತಿದ್ದರು. ಅದರಂತೆ ನಾವು ಓದಿಕೊಂಡು ತಯಾರಿ ಮಾಡಿಕೊಳ್ಳುತ್ತಿದ್ದೆವು ಎಂದರು.
ಸಿಇಟಿ ಪರೀಕ್ಷೆಗೆ ಪೋಷಕರ ಬೆಂಬಲ, ಪ್ರೋತ್ಸಾಹವೂ ಇತ್ತು. ದಿನದಲ್ಲಿ ಮೂರು ಹಂತದಲ್ಲಿ ಪಠ್ಯಕ್ರಮವನ್ನು ಅಭ್ಯಸಿಸುತ್ತಿದ್ದೆ. ಮುಂದೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೂ ಸಲಹೆ ನೀಡಿರುವ ಸಾಯಿ ವಿವೇಕ್, ಪ್ಲಾನಿಂಗ್ನಿಂದ ನನನಗೆ ಸಾಧನೆ ಗುಟ್ಟು ಗೊತ್ತಾಗಿದ್ದು. ಹೀಗಾಗಿ ಮೊದಲು ಯೋಜನೆ ರೂಪಿಸಿ ನಂತರ ತಯಾರಾಗಿ ಅಂದಿದ್ದಾರೆ.
ಮುಂದೆ ನೀಟ್ ಪರೀಕ್ಷೆ ಇದ್ದು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿವೇಕ್, ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಆಸೆ ಹೊಂದಿದ್ದಾರೆ.