ETV Bharat / state

ಮತಪಟ್ಟಿ ಪರಿಷ್ಕರಣೆ ಅಕ್ರಮದಲ್ಲಿ ಬಿಜೆಪಿ ಪಾತ್ರ ಇಲ್ಲ: ಪಿ. ರಾಜೀವ್ - ಈಟಿವಿ ಭಾರತ ಕನ್ನಡ

ಬಿಜೆಪಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ತನ್ನ ಬದ್ಧತೆ ತೋರಿಸಿಕೊಂಡು ಬಂದಿದೆ. ಬಿಜೆಪಿ ಇಂತಹ ಸಂಸ್ಥೆಗಳ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಯಾವ ಕಾರಣಕ್ಕಾಗಿ ಅಲ್ಲಿ ಸಚಿವರ ಲೆಟರ್ ಹೆಡ್ ಬಂತು ಎಂಬ ಬಗ್ಗೆ ತನಿಖೆ ಆಗಲಿ ಎಂದು ಕುಡುಚಿ ಬಿಜೆಪಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ.

p-rajeev-reaction-about-revision-of-voter-list-is-illegal-issue
ಪಿ. ರಾಜೀವ್
author img

By

Published : Nov 21, 2022, 4:40 PM IST

ಬೆಂಗಳೂರು: ಚಿಲುಮೆ ಸಂಸ್ಥೆಯನ್ನು ಚುನಾವಣಾ ಜಾಗೃತಿ ಮೂಡಿಸಲು ನೇಮಕ ಮಾಡಿದ್ದು ಹಿಂದಿನ ಸರ್ಕಾರ. ಚುನಾವಣೆ ಹತ್ತಿರ ಬಂದಾಗ ಶಾಸಕರಿಗೆ ಹಾಗೂ ಆಕಾಂಕ್ಷಿಗಳಿಗೆ ಯಾರ್ಯಾರೋ ಫೋನ್ ಕರೆ ಮಾಡಿ ನಮ್ಮತ್ರ ಬೇರೆ ಬೇರೆ ದಾಖಲೆ ಇದೆ ಎನ್ನುತ್ತಾರೆ. ನನಗೂ ಇಂತಹ ಕಾಲ್ ಬರುತ್ತಿರುತ್ತವೆ. ಮತದಾರರ ಸೇರ್ಪಡೆ ಹಾಗೂ ಡಿಲೀಟ್ ಮಾಡುವ ಅಧಿಕಾರ ಇರುವುದು ಚುನಾವಣಾ ಆಯೋಗಕ್ಕೆ ಮಾತ್ರ. ಇವರು ಹೇಗೆ ಸೇರ್ಪಡೆ ಮಾಡುತ್ತಾರೆ ಡಿಲೀಟ್ ಮಾಡುತ್ತಾರೆ? ಎಂದು ಕುಡುಚಿ ಬಿಜೆಪಿ ಶಾಸಕ ಪಿ.ರಾಜೀವ್ ಪ್ರಶ್ನಿಸಿದರು.

ಶಾಸಕರ ಭವನದಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ತನ್ನ ಬದ್ಧತೆ ತೋರಿಸಿಕೊಂಡು ಬಂದಿದೆ. ಬಿಜೆಪಿ ಇಂತಹ ಸಂಸ್ಥೆಗಳ ಜೊತೆ ಕೈಜೋಡಿಸುವ ಪ್ರಶ್ನೆ ಇಲ್ಲ. ಯಾವ ಕಾರಣಕ್ಕಾಗಿ ಅಲ್ಲಿ ಸಚಿವರ ಲೆಟರ್ ಹೆಡ್ ಬಂತು ಎಂಬ ಬಗ್ಗೆ ತನಿಖೆ ಆಗಲಿ. ಚುನಾವಣಾ ಆಯೋಗ ಇಂತಹ ಸಂಸ್ಥೆಗಳಿಗೆ ಅಧಿಕಾರ ಕೊಟ್ಟಿರುವುದಿಲ್ಲ ಎಂದು ಅನ್ನಿಸುತ್ತೆ. ಚುನಾವಣಾ ಆಯೋಗ ಇಂತಹ ಆರೋಪ ಬಂದಾಗ ತನಿಖೆ ನಡೆಸಲಿ. ತಪ್ಪಿತಸ್ಥರು ಇದ್ದರೆ ಶಿಕ್ಷೆ ಆಗಲಿ. ಚುನಾವಣಾ ಆಯೋಗವನ್ನು ಗಟ್ಟಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಎಸ್​ಸಿ, ಎಸ್​ಟಿಗಳಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ಬಳಕೆ ಮಾಡಿದ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸುಳ್ಳು ಅಂಕಿ - ಅಂಶ ಕೊಡುವಲ್ಲಿ ಎಕ್ಸ್ ಪರ್ಟ್. ಅವರ ಅನುಕೂಲಕ್ಕೆ ತಕ್ಕಂತೆ ಬಳಸುತ್ತಾರೆ ಎಂದು ಕಿಡಿ ಕಾರಿದರು.

ಮತಪಟ್ಟಿ ಪರಿಷ್ಕರಣೆ ಅಕ್ರಮದಲ್ಲಿ ಬಿಜೆಪಿ ಪಾತ್ರ ಇಲ್ಲ: ಪಿ. ರಾಜೀವ್

ಎಸ್​ಇಪಿಟಿಎಸ್​ಪಿ ನಲ್ಲಿ 7 ಡಿ ಇರಬಾರದಿತ್ತು. ಅದನ್ನು ಸೇರ್ಪಡೆ ಮಾಡಿದ್ದು ಸಿದ್ದರಾಮಯ್ಯ. ಎಸ್​ಇಪಿಟಿಎಸ್​ಪಿ ಜನಾಂಗದ ಅಭಿವೃದ್ಧಿ ಪರವಾಗಿ ಬಿಜೆಪಿ ಬದ್ಧತೆ ತೋರಿಸುತ್ತಿದೆ. 28,000 ಕೋಟಿ ಈ ಸಮುದಾಯಕ್ಕೆ ಖರ್ಚು ಮಾಡುತ್ತಿದೆ. 7 ಡಿ ಯನ್ನು ದುರ್ಬಳಕೆ ಮಾಡಿಕೊಂಡು ಎಸ್​ಸಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಕಡೆ ಬಳಕೆ ಮಾಡಿರುವ ಅಪಕೀರ್ತಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ಅಖಿಲ ಭಾರತ ಬಂಜಾರ ಸಮ್ಮೇಳನ ಆಯೋಜನೆ : ಭಾರತದಲ್ಲಿ ಬಂಜಾರ ಸಮುದಾಯ 9 ಕೋಟಿ ಜನಸಂಖ್ಯೆ ಇದೆ. ಸಾಮರಸ್ಯ ಹಾಗೂ ಐಕ್ಯತೆ ಮೂಡಿಸುವ ನಿಟ್ಟಿನಲ್ಲಿ ಸಮ್ಮೇಳನ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಜನವರಿ 25 ರಿಂದ 30ರ ವರೆಗೂ ಧರ್ಮ ಸಮ್ಮೇಳನ ನಡೆಯುತ್ತದೆ.‌ ಮಹಾರಾಷ್ಟ್ರದಲ್ಲಿ ಧರ್ಮ ಸಮ್ಮೇಳನಕ್ಕೆ ಸಿದ್ದತೆ ಮಾಡಲಾಗಿದೆ. ಕರ್ನಾಟಕದಿಂದ 2 ಲಕ್ಷಕ್ಕೂ ಹೆಚ್ಚು ಜನರು ಈ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದು ಇದೇ ವೇಳೆ ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ಮಾಹಿತಿ ನೀಡಿದರು.

ಇದನ್ನೂ ಓದಿ : ಮತದಾರರ ಮಾಹಿತಿಗೆ ಕನ್ನ ಪ್ರಕರಣ.. ನಾಳೆ ಅಥವಾ ನಾಡಿದ್ದು ಸಿಇಸಿ ಗೆ ದೂರು: ಎಂಬಿ ಪಾಟೀಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.