ಬೆಂಗಳೂರು: ಶಾಲಾ ವಾಹನ ಚಾಲಕನ ಮೇಲೆ ಮಾಲೀಕ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ಸದಾಶಿವನಗರದ ಕೆ.ವಿ.ಸ್ಕೂಲ್‌ನ ಶಾಲಾ ವಾಹನದ ಚಾಲಕ ಯೋಗೇಶ್ ಹಲ್ಲೆಗೊಳದ ಚಾಲಕ. ವಾಹನದ ಮಾಲೀಕ ಕುಮಾರ್ ಹಲ್ಲೆ ಮಾಡಿದ ವ್ಯಕ್ತಿ. ಈ ಹಿನ್ನೆಲೆಯಲ್ಲಿ ಚಾಲಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮೆಟ್ಟಿಲೇರಿದ್ದಾರೆ.
![Compiled copy](https://etvbharatimages.akamaized.net/etvbharat/prod-images/5688234_thumbn.jpg)
ಯೋಗೇಶ್ ಸುಮಾರು 14 ವರ್ಷದಿಂದ ಸದಾಶಿವನಗರದ ಕೆ.ವಿ. ಸ್ಕೂಲ್‌ನ ಶಾಲಾ ವಾಹನದ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ವಾಹನ ಮಾಲೀಕನಿಂದ ಸುಮಾರು 2 ಲಕ್ಷ ಹಣವನ್ನು ಪಡೆದಿದ್ದು,ಅದಕ್ಕೆ ಪ್ರತಿ ತಿಂಗಳು 6 ಸಾವಿರ ಬಡ್ಡಿಯಂತೆ ಹಣ ಕಟ್ಟುತ್ತಿದ್ದನು. ಅಲ್ಲದೇ ಇವನ ಮಾಲೀಕ ಒಂದು ಆಟೋವನ್ನು ಕೂಡ ಯೋಗೇಶ್ಗೆ ಕೊಡಿಸಿದ್ದು, ಅದರಿಂದ ಬಂದಂತಹ ಹಣವನ್ನೆಲ್ಲ ಮಾಲೀಕನೆ ಪಡೆದುಕೊಳ್ಳುತ್ತಿದ್ದನು.
ಜ.08ರಂದು ಕಾರ್ಮಿಕ ಸಂಘಟನೆ ಮುಷ್ಕರ ಇದ್ದ ಕಾರಣ ಯೋಗೀಶ್ ಕೆಲಸಕ್ಕೆ ಹೋಗಿರಲಿಲ್ಲ. ಆದರೆ ವಾಹನದ ಮಾಲೀಕ ಕೆಲಸಕ್ಕೆ ಬರುವಂತೆ ತಿಳಿಸಿದ್ದಾನೆ. ಆಗ ಕುಮಾರ್ ಮತ್ತು ಯೋಗೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಯೋಗೇಶ್ ಬಡ್ಡಿ ಬರುವ ಹಣ ನಿಮಗೆ ಕೊಟ್ಟರೆ ಕುಟುಂಬದ ನಿರ್ವಹಣೆ ಕಷ್ಟ ಎಂದಿದ್ದಾನೆ. ಇದಕ್ಕೆ ಕೋಪಗೊಂಡು ಕುಮಾರ್ ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ ಮಾಡಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು 3 ಬ್ಯಾಂಕ್‌ನ 15 ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದಾನೆ.
ಇನ್ನೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಏನೂ ಪ್ರಯೋಜನವಿಲ್ಲ. ನನಗೆ ಕಮಿಷನರ್ ಗೊತ್ತು ಹಾಗೂ ಭೈರತಿ ಸುರೇಶ್ ಅವರ ಬಲಗೈ ಬಂಟ ಎಂದು ಬೆದರಿಕೆ ಹಾಕಿದ್ದಾನೆಂತೆ.
ಸದ್ಯ ಆದ ಅನ್ಯಾಯದ ಬಗ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಯೋಗೇಶ್ ಕುಟುಂಬ ದೂರು ನೀಡಿದೆ.