ETV Bharat / state

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಜನದಟ್ಟಣೆ: ಬಸ್​ ರೈಲು ಬಿಟ್ಟು ವಿಮಾನಯಾನದತ್ತ ಪ್ರಯಾಣಿಕರ ಒಲವು - ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಹವಾಮಾನ ವೈಪರೀತ್ಯದ ಜೊತೆಗೆ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ ಮಸ್ ಹಬ್ಬ, ಹೊಸ ವರ್ಷದಾಚರಣೆ ಸಂಭ್ರಮ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಿದೆ.

Overcrowding At Kempegowda International Airport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ
author img

By

Published : Dec 15, 2022, 9:05 AM IST

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ

ದೇವನಹಳ್ಳಿ: ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ಪ್ರಯಾಣಿಕರು ಬಸ್ ಮತ್ತು ರೈಲು ಪ್ರಯಾಣ ಬಿಟ್ಟು ವಿಮಾನಯಾನದತ್ತ ಒಲವು ತೋರಿಸುತ್ತಿದ್ದಾರೆ. ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಜಾನೆಯೇ ಥೇಟ್ ಮೆಜೆಸ್ಟಿಕ್​ನಂತೆ ಪ್ರಯಾಣಿಕರು ತುಂಬಿ ತುಳುಕುತ್ತಿರುವ ದೃಶ್ಯ ಕಂಡು ಬಂದಿದೆ.

ಪ್ರತಿ ವರ್ಷ ಡಿಸೆಂಬರ್ ತಿಂಗಳು ಬೆಂಗಳೂರು ಮಂಜಿನಲ್ಲಿ ಮುಳುಗಿ ಹೋಗುತ್ತಿತ್ತು. ಆದರೆ ಈ ಬಾರಿಯ ಡಿಸೆಂಬರ್ ತಿಂಗಳು ಮಂಜು ಜೊತೆ ಮಳೆಯು ಸೇರಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಮಲೆನಾಡಿನಂತೆ ಭಾಸವಾಗುತ್ತಿದೆ.

ಇನ್ನು, ಹವಾಮಾನ ವೈಪರೀತ್ಯದ ಜೊತೆಗೆ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ ಮಸ್ ಹಬ್ಬ, ಹೊಸ ವರ್ಷದಾಚರಣೆಯ ಸಂಭ್ರಮ ಇರುವ ಹಿನ್ನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಗಿದೆ. ಏರ್​ಪೋರ್ಟ್​ನ 10 ಗೇಟ್​ಗಳಲ್ಲೂ ಜನರ ದೊಡ್ಡ ಸರದಿ ಸಾಲುಗಳು ನಿರ್ಮಾಣವಾಗುತ್ತಿವೆ.

ಇದನ್ನೂ ಓದಿ: ಕೆಐಎಎಲ್ ಇಮಿಗ್ರೇಷನ್​ಗೆ ಉದ್ದನೆಯ ಕ್ಯೂ: ಬೇಸರ ವ್ಯಕ್ತಪಡಿಸಿದ ಪ್ರಯಾಣಿಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.