ಬೆಂಗಳೂರು: ಕೈ ನೋವು, ಕಾಲು ನೋವು, ಸೊಂಟ-ಮಂಡಿ ನೋವು ಅಂತ ಸಿಕ್ಕ -ಸಿಕ್ಕ ನೋವಿನ ಗುಳಿಗೆ ಸೇವಿಸುತ್ತಿದ್ದರೆ, ಒಂದು ಘಳಿಗೆ ಯೋಚನೆ ಮಾಡಿ.. ಯಾಕೆಂದರೆ ನೀವು ನುಂಗುವ ಮಾತ್ರೆ ನಿಮ್ಮ ಜೀವವನ್ನೇ ನುಂಗಿ ಹಾಕಬಹುದು..!!
ಹೌದು, ಇತ್ತೀಚೆಗೆ ಕಿಡ್ನಿ ವೈಫಲ್ಯಕ್ಕೆ ತುತ್ತಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಅತೀ ಹೆಚ್ಚು ಕಾರಣ ಕೇಳಿ ಬರುತ್ತಿರುವುದು ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುತ್ತಿರುವುದಂತೆ. ಅದರಲ್ಲೂ ಮುಖ್ಯವಾಗಿ ಮೊಣಕಾಲು ಸವಕಳಿ ಸಂಬಂಧ ಪಟ್ಟಂತೆ ನೋವಿನ ಮಾತ್ರೆ ಸೇವಿಸುವುದು ಬಹಳ ಡೇಂಜರ್ ಅಂತೆ. ಇದರಿಂದಾಗಿ ಆ ಕ್ಷಣಕ್ಕೆ ನೋವು ಮಾಯವಾದಂತೆ ಅನಿಸುವುದೇ ವಿನಃ, ಸಂಪೂರ್ಣ ಪರಿಹಾರ ಸಿಗೋದಿಲ್ಲ ಅಂತಾರೆ ತಜ್ಞರಾದ ಶರಣ್ ಶಿವರಾಜ್ ಪಾಟೀಲ್. ಇಂತಹ ಮಾತ್ರೆಗಳು ಪದೇ ಪದೆ ಸೇವನೆಯಿಂದ ಎರಡು ರೀತಿಯ ಅಡ್ಡ ಪರಿಣಾಮ ಉಂಟಾಗಲಿದೆ. ಒಂದು ಗ್ಯಾಸ್ಟ್ರಿಕ್ ಮತ್ತೊಂದು ಕಿಡ್ನಿ ವೈಫಲ್ಯ ಉಂಟಾಗಲಿದೆ ಅಂತೆ.. ಹೀಗಾಗಿ ವೈದ್ಯರು ಸೂಚಿಸಿದರೆ ಮಾತ್ರವೇ ನೋವಿನ ಮಾತ್ರೆ ಸೇವಿಸುವಂತೆ ಸಲಹೆ ನೀಡುತ್ತಾರೆ ತಜ್ಞರು..
ಒಟ್ಟಾರೆ, ಪ್ರತಿಸಲದ ನೋವಿಗೆ ನೀವೇನಾದರೂ ನೋವಿನ ಮಾತ್ರೆಗಳಿಗೆ ಗಂಟು ಬಿದ್ದರೆ, ನಿಮಗೆ ಗೊತ್ತಾಗದಂತೆ ನಿಮ್ಮ ಕಿಡ್ನಿ ಹಾಳಾಗೋದರಲ್ಲಿ ಯಾವುದೇ ಅನುಮಾನ ಇಲ್ಲ.