ಬೆಂಗಳೂರು: ರಾಜ್ಯದಲ್ಲಿಂದು 8364 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ 5,11,346 ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ.
ಇನ್ನು ಒಂದೇ ದಿನ 10,815 ಗುಣಮುಖರಾಗಿದ್ದು, 4,04,841 ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಹಾಗೆಯೇ 24 ಗಂಟೆಯಲ್ಲಿ 114 ಸೋಂಕಿತರು ಬಲಿಯಾಗಿದ್ದು, ಈ ಮೂಲಕ 7922ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ. 19 ಸೋಂಕಿತರು ಅನ್ಯಕಾರಣಕ್ಕೆ ಮೃತರಾಗಿದ್ದಾರೆ.
ಸದ್ಯ 98,564 ಸಕ್ರಿಯ ಪ್ರಕರಣಗಳು ಇದ್ದು, 822 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 6,07,451 ಜನರು 5,51,299 ದ್ವಿತೀಯ ಸಂಪರ್ಕ ದಲ್ಲಿ ಇದ್ದಾರೆ. ಕಳೆದ 14 ದಿನಗಳಿಂದ 4,83,087 ಮಂದಿ ಹೋಂ ಕ್ವಾರೆಂಟೈನ್ ನಲ್ಲಿ ಇದ್ದಾರೆ.