ETV Bharat / state

ವೈದ್ಯೆಯಿಂದ ಲಸಿಕೆ ಕಳ್ಳತನ ಪ್ರಕರಣ : 400ಕ್ಕೂ ಹೆಚ್ಚು ಜನರಿಗೆ ವ್ಯಾಕ್ಸಿನ್ ನೀಡಿ ಹಣ ಸಂಪಾದನೆ - ಬಿಬಿಎಂಪಿ ವೆಬ್​ಸೈಟ್​​​

ಈ ರೀತಿಯ ವ್ಯಾಕ್ಸಿನ್ ಪಡೆದುಕೊಂಡರೆ ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲದೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ..

over-400-people-get-vaccinated-by-doctor-who-theft-vaccine-from-hospital
ವೈದ್ಯೆಯಿಂದ ಲಸಿಕೆ ಕಳ್ಳತನ ಪ್ರಕರಣ
author img

By

Published : May 21, 2021, 3:08 PM IST

ಬೆಂಗಳೂರು : ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ‌ ಕಳ್ಳತನ ಮಾಡಿ ಹಣ ಪಡೆದು ಲಸಿಕೆ ಹಾಕುತ್ತಿದ್ದ ವೈದ್ಯೆಯನ್ನ ಬಂಧಿಸಿದ್ದರು. ಇದೀಗ ಆ ವೈದ್ಯೆ 400ಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿರುವುದು ಪತ್ತೆಯಾಗಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಜುನಾಥ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಬಿಎಂಪಿ ಗುತ್ತಿಗೆ ಆಧಾರ ಮೇಲೆ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಪುಷ್ಪಿತಾ ಎಂಬ ವೈದ್ಯೆಯನ್ನ ಬಂಧಿಸಿದ್ದರು.

ಈಕೆ ತನ್ನ ಸ್ನೇಹಿತೆ ಪ್ರೇಮಲತಾ ಎಂಬಾಕೆಯ ಮನೆಯಲ್ಲಿ‌ ಕೋವಿಶೀಲ್ಡ್ ಲಸಿಕೆಯನ್ನು ದಾಸ್ತಾನು ಮಾಡಿ, ಸಂಜೆ ಮೇಲೆ ಬೇಕಾದವರಿಗೆ ಕರೆಯಿಸಿ ಹಣ ಪಡೆದು ಲಸಿಕೆ ನೀಡಿತ್ತಿದ್ದಳು. ಪ್ರತಿ ವ್ಯಾಕ್ಸಿನ್​ಗೆ ಸುಮಾರು 500 ರೂಪಾಯಿ ಪಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ನಿನ್ನೆ ಇಬ್ಬರನ್ನು ಬಂಧಿಸಲಾಗಿತ್ತು.

ಲಸಿಕೆ ಹಾಕಿಸಿಕೊಳ್ಳಲು ಜನರು ಮುಗಿಬಿದ್ದಿರುವುದನ್ನು ಕಂಡು ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡ ವೈದ್ಯೆ ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಯ ವೈಯಲ್ ಕದಿಯುತ್ತಿದ್ದಳು‌. ನಂತರ ಬೇಕಾದವರಿಗೆ ಲಸಿಕೆ ಹಾಕುತ್ತಿದ್ದಳು.

ಲಸಿಕೆ ನೋಂದಣಿಯನ್ನು ಪಾರದರ್ಶಕವಾಗಿ ಬಿಬಿಎಂಪಿ ವೆಬ್​ಸೈಟ್​​​ನಲ್ಲಿ ರಿಜಿಸ್ಟರ್ ಮಾಡುತ್ತಿದ್ದಳು. ಏಪ್ರಿಲ್ 23ರಿಂದ ಈ ಅಕ್ರಮ ಜಾಲದಲ್ಲಿ ತೊಡಗಿಸಿಕೊಂಡಿದ್ದಳು‌. ನಿನ್ನೆ ಒಂದೇ ದಿನ 53 ಮಂದಿ ಲಸಿಕೆ ಹಾಕಿರುವುದು ಗೊತ್ತಾಗಿದೆ‌. ಬಂಧನ ವೇಳೆ 12 ಸಾವಿರ ರೂಪಾಯಿ ಜಪ್ತಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾಟಾಚಾರಕ್ಕೆ ಲಸಿಕೆ ಹಾಕುತ್ತಿದ್ದ ವೈದ್ಯೆ ?

ಹಣ ಪಡೆದು ಕಾಟಾಚಾರಕ್ಕೆ ಲಸಿಕೆ ಹಾಕುತ್ತಿದ್ದಳಾ ಎಂಬ ಅನುಮಾನ ಶುರುವಾಗಿದೆ‌. ಒಂದು ವಯಲ್ಸ್ ಮೂಲಕ 5 ಎಂಎಲ್ ನಂತೆ 10 ಮಂದಿಗೆ ಲಸಿಕೆ ನೀಡಬಹುದಾಗಿದೆ. ಮುಂಚಿತವಾಗಿ ವಯಲ್ಸ್​ನಿಂದ ಲಸಿಕೆ ಸಿರಿಂಜ್​​ಗೆ ಹಾಕಿ ಗಂಟೆಗಟ್ಟಲೇ ತೆರೆದ ಜಾಗದಲ್ಲಿ ವಾಕ್ಸಿನ್ ಇಡುತ್ತಿದ್ದಳು.

ನಂತರ ಸಾಮೂಹಿಕವಾಗಿ ಜನರಿಗೆ ಲಸಿಕೆ ಹಾಕುತ್ತಿದ್ದಳು. ಈ ರೀತಿಯ ವ್ಯಾಕ್ಸಿನ್ ಪಡೆದುಕೊಂಡರೆ ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲದೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ಲಸಿಕೆ ಕದ್ದು ಹಣ ಸಂಪಾದನೆ ಮಾಡುತ್ತಿದ್ದ ವೈದ್ಯೆ ಸೇರಿ ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.