ETV Bharat / state

ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ ಶುರು: ರಸ್ತೆಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ಆಕ್ರೋಶ - ಟಿಜನ್ಸ್ ಗ್ರೂಪ್ ಹಾಗೂ ಈಸ್ಟ್ ಬೆಂಗಳೂರು ಸಂಸ್ಥೆಗಳು

Outrage against BBMP for not closing Road holes: ಬೆಂಗಳೂರಿನಲ್ಲಿ ಬಿದ್ದಿರುವ ರಸ್ತೆಗುಂಡಿಗಳನ್ನು ಮುಚ್ಚುವವರೆಗೂ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸದಂತೆ ನಾಗರಿಕರಿಗೆ ಸಿಟಿಜನ್ಸ್ ಗ್ರೂಪ್ ಹಾಗೂ ಈಸ್ಟ್ ಬೆಂಗಳೂರು ಸಂಸ್ಥೆಗಳು ಕರೆ ನೀಡಿದೆ.

Road holes
ಸಂಘಟನೆಗಳ ಸದಸ್ಯರು ತಮ್ಮ ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚುತ್ತಿರುವುದು
author img

By ETV Bharat Karnataka Team

Published : Aug 22, 2023, 7:30 AM IST

ಬೆಂಗಳೂರು: ರಾಜಧಾನಿಯಲ್ಲಿ ಬಿದ್ದಿರುವ ರಸ್ತೆಗುಂಡಿಗಳನ್ನು ಮುಚ್ಚದ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ ಶುರುವಾಗಿದೆ. ರಸ್ತೆ ಗುಂಡಿಗೆ ಹಲವು ಸವಾರರು ಮೃತಪಟ್ಟಿದ್ದಾರೆ. ಮತ್ತೆ ಬಾಯ್ತೆರೆದು ಬಿದ್ದಿರುವ ರಸ್ತೆಗುಂಡಿಗಳು ವಾಹನ ಸವಾರರ ಜೀವನಕ್ಕೆ ಸಂಚಕಾರ ತಂದಿವೆ. ಹೀಗಾಗಿ, ರಸ್ತೆ ಗುಂಡಿ ಮುಚ್ಚುವವರೆಗೂ ಬಿಬಿಎಂಪಿಗೆ ತೆರಿಗೆ ಪಾವತಿಸದಂತೆ ನಾಗರಿಕರಿಗೆ ಸಿಟಿಜನ್ಸ್ ಗ್ರೂಪ್ ಹಾಗೂ ಈಸ್ಟ್ ಬೆಂಗಳೂರು ಸಂಸ್ಥೆಗಳು ಕರೆ ನೀಡಿವೆ.

ಕಳೆದ ಮುಂಗಾರು ಮತ್ತು ಹಿಂಗಾರು ಮಳೆ ಬಿದ್ದ ಪರಿಣಾಮದಿಂದ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿತ್ತು. ಸ್ಮಾರ್ಟ್‌ಸಿಟಿ, ವೈಟ್‌ಟಾಪಿಂಗ್, ಟೆಂಡರ್‌ಶ್ಯೂರ್, ರಸ್ತೆ ವಿಸ್ತರಣೆ, ಪಾದಚಾರಿ ಅಭಿವೃದ್ಧಿ, ನೆಲದಡಿ ಕೇಬಲ್ ಅಳವಡಿಕೆ, ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಸೇರಿ ಹಲವು ಗೊತ್ತು ಗುರಿಯಿಲ್ಲದ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಬೇಕಾಬಿಟ್ಟಿ ರಸ್ತೆ ಅಗೆಯಲಾಗುತ್ತಿದೆ.

ಕಾಮಗಾರಿ ಮುಗಿದರೂ ಅಗೆದ ರಸ್ತೆಗಳನ್ನು ಡಾಂಬರೀಕರಣ ನಡೆಸದೇ ವರ್ಷಗಟ್ಟಲೆ ಹಾಗೆ ಬಿಡಲಾಗುತ್ತಿದೆ. ಈಗ ನಗರದಲ್ಲಿ ಅಷ್ಟೇನೂ ಮಳೆ ಬಿದ್ದಿಲ್ಲ. ಹೀಗಾಗಿ, ಪ್ರತಿ ನಿತ್ಯ ಜನತೆಗೆ ಧೂಳಿನ ದರ್ಶನದ ಜತೆಗೆ ಭಯದಲ್ಲೇ ಸಂಚರಿಸುವಂತಾಗಿದೆ. ಇದರ ಬಗ್ಗೆ ಗಮನ ಸೆಳೆದರೂ ಸರ್ಕಾರ ಉದಾಸೀನತೆ ತೋರುತ್ತಿದೆ ಎಂದು ಸಿಟಿಜನ್ಸ್ ಗ್ರೂಪ್ ಬೇಸರ ವ್ಯಕ್ತಪಡಿಸಿದೆ.

ಸಂಘಟನೆಗಳ ಸದಸ್ಯರು ತಮ್ಮ ಸ್ವಂತ ಹಣದಿಂದ ಹಾಲ ನಾಯಕನಹಳ್ಳಿಯ ಮುನೇಶ್ವರ ಲೇಔಟ್ ಮತ್ತು ಚೂಡಸಂದ್ರದ 6 ಕಿ.ಮೀ. ಉದ್ದದ ರಸ್ತೆಯಲ್ಲಿ ಬಿದ್ದಿದ ಗುಂಡಿಗಳನ್ನು ಮುಚ್ಚಿಸಿದ್ದಾರೆ. ಗುಂಡಿಗಳನ್ನು ಮುಚ್ಚುವಂತೆ ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ವಿಚಾರದಲ್ಲಿ ಬಿಬಿಎಂಪಿಯು ಅಸಡ್ಡೆ ಹೊಂದಿದೆ ಎಂದು ಸಂಘಟನೆ ಸದಸ್ಯ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಕೆಪಿಸಿಸಿಯಿಂದ ಅಳವಡಿಸಿದ್ದ ಬ್ಯಾನರ್​ ತೆರವು: ಬೆಂಗಳೂರು ನಗರದಲ್ಲಿ ಅನಧಿಕೃತ ಬ್ಯಾನರ್​, ಫ್ಲೆಕ್ಸ್ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ. ಬಿಬಿಎಂಪಿ ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ (ಕೆಪಿಸಿಸಿ) ಅಳವಡಿಸಲಾಗಿದ್ದ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಿ 50 ಸಾವಿರ ದಂಡ ವಿಧಿಸಿದೆ.

ವಸಂತನಗರ ವಾರ್ಡ್-93ರ ವ್ಯಾಪ್ತಿಯ ಕ್ವೀನ್ಸ್ ರಸ್ತೆಯ ಸ್ವತ್ತಿನ ಸಂಖ್ಯೆ:12/1 ಮಿಲ್ಲರ್ ಟ್ಯಾಂಕ್ ಬೆಡ್ ಪ್ರದೇಶದಲ್ಲಿ ಬ್ಯಾನರ್ ಹಾಕಲು ಅಧಿಕೃತವಾಗಿ ಪರವಾನಗಿ, ಅನುಮತಿ ಪಡೆದಿಲ್ಲ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕಾರಣ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ 50,000 ರೂ ದಂಡ ವಿಧಿಸಿ, ಮುಖ್ಯ ಆಯುಕ್ತರ ಖಾತೆಗೆ ದಂಡ ಮೊತ್ತ ಪಾವತಿಸುವಂತೆ ಆದೇಶಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಫ್ಲೆಕ್ಸ್, ಬ್ಯಾನರ್​ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು. ನಗರದಲ್ಲಿ ಒಂದೇ ಒಂದು ಅನಧಿಕೃತ ಪ್ಲೆಕ್ಸ್ ಕಂಡು ಬಂದರೆ, ಪಾಲಿಕೆ ಹಾಗೂ ರಾಜ್ಯ ಸರಕಾರ ತಲಾ 50 ಸಾವಿರ ರೂ.ಗಳನ್ನು ಠೇವಣಿ ಇಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ಹಾಗೆ ಅನಧಿಕೃತ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ಹಾಗೂ ಎಲ್‌ಇಡಿ ಇನ್ನಿತರ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲು , ಈ ಬಗ್ಗೆ ಅಂಕಿ - ಅಂಶದ ದಾಖಲೆಗಳ ಸಮೇತ ಅನುಪಾಲನಾ ವರದಿ ಸಲ್ಲಿಸಲು ಮುಖ್ಯ ಆಯುಕ್ತರು ಸೂಚಿಸಿದ್ದರು. ಅದರಂತೆ ನಗರದಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವು ಕಾರ್ಯಾಚರಣೆ ಆರಂಭವಾಗಿದೆ.

ಇದನ್ನೂ ಓದಿ: ಷರತ್ತು ಉಲ್ಲಂಘನೆ: ಕಾಸ್ಮೋಪಾಲಿಟನ್ ಕ್ಲಬ್ ವಶಕ್ಕೆ ಪಡೆಯುವಂತೆ ಬಿಡಿಎಗೆ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.