ETV Bharat / state

ನಮ್ಮ ಹೋರಾಟಕ್ಕೆ ನೈತಿಕ ಶಕ್ತಿ ಸಿಕ್ಕಿದೆ: ಜಯಮೃತ್ಯುಂಜಯ ಸ್ವಾಮೀಜಿ - jayamruthyunjaya swamiji talk about jatha

ನಾಳೆಯಿಂದ ಲಿಂಗಾಯತ ಪಂಚಮಸಾಲಿ ಮಹಾಪೀಠ ಕೂಡಲ ಸಂಗಮದ ವತಿಯಿಂದ ಜಾಥಾ ಆಯೋಜನೆ ಮಾಡಲಾಗಿದ್ದು, ಬೆಂಗಳೂರಿನಿಂದ ಬಾಗಲಕೋಟೆಯವರೆಗೆ ಜಾಥಾ ನಡೆಸುತ್ತಿದ್ದೇವೆ. ಪಾದಯಾತ್ರೆಯಲ್ಲಿ ಭಾಗಿಯಾದವರಿಗೆ ಧನ್ಯವಾದ ಹೇಳುತ್ತಾ ಸಾಗುತ್ತೇವೆ.‌ ಇದರಲ್ಲಿ ಸಮಾಜದವರು ಯಾರೂ ಬೇಕಾದ್ರೂ ಭಾಗವಹಿಸಬಹುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

jayamruthyunjaya-swamiji
ಜಯಮೃತ್ಯುಂಜಯ ಸ್ವಾಮೀಜಿ..
author img

By

Published : Mar 22, 2021, 4:54 PM IST

ಬೆಂಗಳೂರು: ಮೊದಲ ಬಾರಿಗೆ ಹಿಂದುಳಿದ ಆಯೋಗದಿಂದ ಬಹಿರಂಗ ವಿಚಾರಣೆಗೆ ಕರೆದಿದ್ದು, ನಮ್ಮ ನಿರಂತರ ಹೋರಾಟಕ್ಕೆ ನೈತಿಕ ಶಕ್ತಿ ಸಿಕ್ಕಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದಿಂದ ಇಂದು ಪಂಚಮಸಾಲಿ ಮೀಸಲಾತಿ ಕುರಿತಾದ ಬಹಿರಂಗ ವಿಚಾರಣೆಯು ನಗರದ ದೇವರಾಜ್ ಅರಸ್ ಭವನದಲ್ಲಿ ನಡೆಯಿತು. ಆಯೋಗದ ಕಾಯ್ದೆಗಳ ಅನ್ವಯವೇ ವಿಚಾರಣೆಯನ್ನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಸದಸ್ಯರಾದ ರಾಜಶೇಖರ್, ಅರುಣ್ ಕುಮಾರ್, ಕಲ್ಯಾಣ್ ಕುಮಾರ್ ಸಮ್ಮುಖದಲ್ಲಿ ನಡೆಯಿತು. ಕೋರ್ಟ್​ನಲ್ಲಿ ನಡೆಯುವ ರೀತಿಯಲ್ಲೇ ನಡೆದ ಈ ವಿಚಾರಣೆಯಲ್ಲಿ ಸಂಬಂಧಿಸಿದ ಪ್ರತಿನಿಧಿಗಳು ಮಾತ್ರ ಮಾತನಾಡಬೇಕು ಎಂಬುದಾಗಿ ಅಧ್ಯಕ್ಷರು ಸೂಚನೆ ನೀಡಿದರು.

ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು

ಬಹಿರಂಗ ವಿಚಾರಣೆಯಲ್ಲಿ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ಸಮಾಜ‌ ಸಂಖ್ಯೆಯಲ್ಲಿ ದೊಡ್ಡದು. ಆದ್ರೆ ಸಾಮಾಜಿಕವಾಗಿ ನಮ್ಮ‌ ಸಮಾಜ ಹಿಂದುಳಿದಿದೆ. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು. ನಮ್ಮೊಳಗಿನ ಮೌಢ್ಯತೆ, ಅಲ್ಪತೃಪ್ತಿಯಿಂದಾಗಿ ಹಿಂದುಳಿದಿದ್ದೇವೆ. ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯ ಪ್ರಬಲವಾಗಿದೆ. ‌ಉನ್ನತ ಶಿಕ್ಷಣ ಪಡೆಯಲು ನಮ್ಮ ಸಮುದಾಯಕ್ಕೆ ಸಾಧ್ಯವಾಗಿಲ್ಲ. 26 ವರ್ಷಗಳಿಂದಲೂ ನಮ್ಮ ಮೀಸಲು ಹೋರಾಟ ನಡೆಯುತ್ತಾ ಬಂದಿದ್ದು, ಕಳೆದ 24 ವರ್ಷಗಳಿಂದ ಮನವಿ ಪತ್ರ ನೀಡಲಾಗಿದೆ. ಸಾಮಾಜಿಕ ಶೋಷಣೆಗೆ, ತುಳಿತಕ್ಕೆ ಪಂಚಮಸಾಲಿ ಸಮುದಾಯ ಒಳಗಾಗಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ ಅಂತ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿದರು.‌

ಬಹಿರಂಗ ಸಭೆಯ ನಂತರ ಪ್ರತಿಕ್ರಿಯಿಸಿದ ಜಯಮೃತ್ಯುಂಜಯ ಸ್ವಾಮೀಜಿ, ಮೊದಲ ಬಾರಿಗೆ ಹಿಂದುಳಿದ ಆಯೋಗದಿಂದ ಬಹಿರಂಗ ವಿಚಾರಣೆ ಕರೆದಿದ್ದು, ನಮ್ಮ ನಿರಂತರ ಹೋರಾಟಕ್ಕೆ ನೈತಿಕ ಶಕ್ತಿ ಸಿಕ್ಕಿದೆ. ನಮ್ಮ ಹಿರಿಯ ನ್ಯಾಯವಾದಿ ದಿನೇಶ್ ಪಾಟೀಲ್ ಉತ್ತಮವಾಗಿ ವಾದ ಮಂಡಿಸಿದ್ದಾರೆ. ಸರ್ಕಾರವು ಕಾನೂನು ಪ್ರಕ್ರಿಯೆ ವರದಿ ಬಂದ ಬಳಿಕ ಮಾಡುವುದಾಗಿ 6 ತಿಂಗಳ ಸಮಯಾವಕಾಶ ತೆಗೆದುಕೊಂಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸ್ಪಷ್ಟ ವರದಿ ಬರುವ ನಿರೀಕ್ಷೆ ಇದೆ ಎಂದರು.

ನಾಳೆಯಿಂದ ಲಿಂಗಾಯತ ಪಂಚಮಸಾಲಿ ಮಹಾಪೀಠ ಕೂಡಲ ಸಂಗಮದ ವತಿಯಿಂದ ಜಾಥಾ ಆಯೋಜನೆ ಮಾಡಲಾಗಿದ್ದು, ಬೆಂಗಳೂರಿನಿಂದ ಬಾಗಲಕೋಟೆಯವರೆಗೆ ಜಾಥ ನಡೆಸುತ್ತಿದ್ದೇವೆ. ಪಾದಯಾತ್ರೆಯಲ್ಲಿ ಭಾಗಿಯಾದವರಿಗೆ ಧನ್ಯವಾದ ಹೇಳುತ್ತಾ ಸಾಗುತ್ತೇವೆ.‌ ಇದರಲ್ಲಿ ಸಮಾಜದವರು ಯಾರೂ ಬೇಕಾದ್ರೂ ಭಾಗವಹಿಸಬಹುದು ಎಂದು ಕರೆ ನೀಡಿದರು.

ನಾಳೆಯ ಜಾಥಕ್ಕೆ ಆಹ್ವಾನವೂ ಇಲ್ಲ; ನಾನು ಭಾಗಿಯಾಗುವುದು ಇಲ್ಲ: ವಚನಾನಂದ ಸ್ವಾಮೀಜಿ

ಪಂಚಮಸಾಲಿಗರಿಗೆ ಸಾಮಾಜಿಕ ನ್ಯಾಯವನ್ನು ನೀಡಬೇಕೆಂದು 1990ರ ದಶಕದಲ್ಲೇ ಮನವಿ ನೀಡಲಾಗಿದೆ. ನಾವು ಸಂಖ್ಯೆಯಲ್ಲಿ ಬಹುಸಂಖ್ಯಾತರು. ಆದರೆ ನಾವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ನಮ್ಮ‌ ಹಳ್ಳಿಗಳಿಗೆ ತೆರಳಿ ಗಮನಿಸಿ, ಸಾಮಾಜಿಕವಾಗಿ ಹಿಂದುಳಿದ ಕಾರಣದಿಂದಾಗಿ ಸಂಘಗಳು ಆರಂಭವಾಗಿವೆ. ಸಾಮಾಜಿಕ ಅನ್ಯಾಯವನ್ನು ತಪ್ಪಿಸಲು ಸಂಘ ಪ್ರಯತ್ನಿಸುತ್ತಿದೆ. ಬೇರೆ ಪೀಠಗಳಿಗೆ ನಾವು ಗುರುಗಳಾಗಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿಯೇ ಪ್ರತ್ಯೇಕ ಪೀಠಗಳು ಸ್ಥಾಪನೆಯಾದವು ಅಂತ ಶ್ರೀಗಳು ಸ್ಪಷ್ಟನೆ ನೀಡಿದರು.

ನಾಳೆಯ ಜಾಥ ಸಂಬಂಧ ಪ್ರತಿಕ್ರಿಯಿಸಿದ ಅವರು, ನನಗೆ ಯಾವ ಜಾಥದ ಆಹ್ವಾನವೂ ಇಲ್ಲ. ನಾನು ಜಾಥದಲ್ಲಿ ಭಾಗವಹಿಸುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಅಷ್ಟೇ ಅಲ್ಲದೇ ಧನ್ಯವಾದ ಯಾರಿಗೆ ಹೇಳುವುದು. ಎಲ್ಲರೂ ಹೋರಾಟಗಾರರೇ. ಅವರಿಗೆ ಧನ್ಯವಾದ ಹೇಳುವುದು ಏನಿದೆ? ಎಂದು ಜಯಮೃತ್ಯುಂಜಯ ಸ್ವಾಮೀಜಿಯ ಜಾಥದ ಕುರಿತು ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದರು.

ಸರ್ಕಾರದ ಭಾಗವಾಗಿ ನಾವು ಎಲ್ಲಿಗೆ ಹೋಗಬೇಕು, ಎಲ್ಲಿಗೆ ಬರಬೇಕು ಅನ್ನೋ ಕಾಮನ್ ಸೆನ್ಸ್ ಇದೆ: ಸಚಿವ ಮುರುಗೇಶ್ ನಿರಾಣಿ

ಆಯೋಗಕ್ಕೆ ಮೀಸಲಾತಿ ಸಂಬಂಧ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಸಭೆಗೆ ಯಾರು ಯಾರು ಬಂದರು ಅನ್ನೋದು ಮುಖ್ಯವಲ್ಲ. ಆಯೋಗ ಕರೆದಿರುವ ಬಹಿರಂಗ ವಿಚಾರಣೆಯಲ್ಲಿ ಭಾಗಿಯಾಗಿದ್ದೇನೆ. ಪಂಚಮಸಾಲಿ ಜನರ ಪರವಾಗಿದ್ದೇನೆ, ನಮಗೆ ಮೀಸಲಾತಿ ಸಿಗುವ ಭರವಸೆಯಿದೆ. ಆಯೋಗ ಸರ್ಕಾರಕ್ಕೆ ವರದಿ ಕೊಟ್ಟ ಮೇಲೆ ಸರ್ಕಾರದ ಮಟ್ಟದಲ್ಲಿ ಸೂಕ್ತ ತೀರ್ಮಾನವಾಗಲಿದೆ ಅಂದರು.

ಓದಿ: ಸಿಡಿ ಪ್ರಕರಣ - ಸಚಿವರ ಕೋರ್ಟ್​ ಮೊರೆ ವಿಚಾರ : ನಿಲುವಳಿ ಸೂಚನೆ ಮಂಡನೆಗೆ ಸಿದ್ದು ಮನವಿ

ಮೀಸಲಾತಿ ಹೋರಾಟಕ್ಕೆ ಬರಲಿಲ್ಲ, ಆದರೆ ಆಯೋಗದ ಮುಂದೆ ಬಂದಿದ್ದಾರೆ ಅಂತ ಹಲವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಾವು ಅಂತಹ ವಿಚಾರಕ್ಕೆ ತಲೆಕೆಡಿಸಿಕೊಳ್ಳಲ್ಲ. ಸರ್ಕಾರದ ಭಾಗವಾಗಿ ನಾವು ಎಲ್ಲಿಗೆ ಹೋಗಬೇಕು, ಎಲ್ಲಿಗೆ ಬರಬೇಕು ಅನ್ನೋ ಕಾಮನ್ ಸೆನ್ಸ್ ಇದೆ. 10 ಲಕ್ಷ ಜನ ಸೇರಿರುವ ಕಾರ್ಯಕ್ರಮದ ಯಶಸ್ಸಿಗೆ ಒಬ್ಬರೇ ಕಾರಣ ಅಲ್ಲ. ಪೂಜ್ಯರೀರ್ವರು ಮತ್ತೆಲ್ಲರೂ ಆ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.