ಬೆಂಗಳೂರು: ಕೇಂದ್ರ ಬಜೆಟ್ನಲ್ಲಿ ನಮ್ಮ ನಿರೀಕ್ಷೆ ಈಡೇರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಬಿಎಸಿ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿ, ಕೋವಿಡ್ ಸಮಯದಲ್ಲಿ ನೀಡಿದ ಭರವಸೆ ಈಡೇರಿಲ್ಲ. ಯುವಕರ ನಿರೀಕ್ಷೆಯೂ ಕೈಗೂಡಿಲ್ಲ. ಇದು ಈವರೆಗಿನ ಮಾಹಿತಿ, ಮಿಕ್ಕಿದ್ದು ಸಂಜೆ ಹೇಳ್ತೇನೆ ಎಂದರು.
ಇವತ್ತಿನ ಸಭೆಯಲ್ಲಿ ಬಿಲ್ ಬಗ್ಗೆ ಚರ್ಚೆ ಮಾಡಿದ್ದೇವೆ. ಸಭೆಯಲ್ಲಿ ಚರ್ಚೆಯಾದ ಬಿಲ್ ಮಾತ್ರವೇ ಮಂಡನೆಯಾಗಬೇಕು, ಇದಕ್ಕೆ ಸರ್ಕಾರ ಒಪ್ಪಿದೆ. ಬೆಳಗಾವಿಯಲ್ಲಿ ಅಧಿವೇಶನ ಕರೆಯಲು ಒತ್ತಾಯ ಮಾಡಿದ್ದೇವೆ ಎಂದರು.
ಮುಂಬರುವ ಬಜೆಟ್ ಅಧಿವೇಶನ ಬೆಳಗಾವಿಯಲ್ಲೇ ಮಾಡಿ ಅಂದಿದ್ದೇವೆ. ಉತ್ತರ ಕರ್ನಾಟಕ ಜನರಿಗೆ ಅನ್ಯಾಯ ಆಗುತ್ತಿದೆ. ಅವರ ಸಮಸ್ಯೆಗಳು ಚರ್ಚೆಯಾಗಬೇಕು. ಆದ್ರೆ ಸರ್ಕಾರ ಬಜೆಟ್ ನಂತರದ ಅಧಿವೇಶನ ಮಾಡ್ತಿವಿ ಅಂತಿದ್ದಾರೆ ಎಂದರು.