ETV Bharat / state

ಅನ್​ಲಾಕ್​​ ಬಳಿಕ ಶುರುವಾದ ಅಂಗಾಂಗ ಕಸಿ: ಮುಂಜಾಗ್ರತೆಯೊಂದಿಗೆ ಶಸ್ತ್ರಚಿಕಿತ್ಸೆ..!

ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ, ಮಾರ್ಚ್​​​​​ನಲ್ಲಿ ನಿಲ್ಲಿಸಿದ್ದ ಅಂಗಾಂಶ ಕಸಿ ಶಸ್ತ್ರಚಿಕಿತ್ಸೆಯು ರಾಜ್ಯದ ಪ್ರಮುಖ ನಗರಗಳಲ್ಲಿ ಶುರುವಾಗಿದೆ.

Organ transplant that started after unlocking
ಅನ್​ಲಾಕ್​​ ಬಳಿಕ ಶುರುವಾದ ಅಂಗಾಂಗ ಕಸಿ
author img

By

Published : Nov 24, 2020, 5:24 PM IST

ಬೆಂಗಳೂರು: ಮಣ್ಣಲ್ಲಿ ಮಣ್ಣಾಗುವ ದೇಹಕ್ಕೆ ಅಂತ್ಯವಿದೆಯೇ ಹೊರತು, ದೇಹದ ಅಂಗಾಂಗಳಿಗಲ್ಲ. ಸಾವಿನ ನಂತರವೂ ಮತ್ತೊಂದು ದೇಹ ಸೇರುವ ಅಂಗವೂ ಜೀವಂತವಾಗಿರುತ್ತೆ. ಇತ್ತೀಚೆಗೆ ಅಂಗಾಂಗ ದಾನದ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದ್ದು, ದಾನಿಗಳ ಪ್ರಮಾಣವು ಕೂಡ ಹೆಚ್ಚಳವಾಗಿದೆ. ‌ಆದರೆ ಕೊರೊನಾ ಎಂಬ ಈ ಡೆಡ್ಲಿ ವೈರಸ್ ಅಂಗಾಂಗ ದಾನಕ್ಕೂ ಕೂಡ ಅಡ್ಡಗಾಲು ಹಾಕಿದೆ.

ವೈರಸ್ ಭೀತಿಯಿಂದ ಜನರು ಅಂಗಾಂಗ ದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ, ಮಾರ್ಚ್​​​​​ನಲ್ಲಿ ನಿಲ್ಲಿಸಿದ್ದ ಅಂಗಾಂಶ ಕಸಿ ಶಸ್ತ್ರಚಿಕಿತ್ಸೆಯು ರಾಜ್ಯದ ಪ್ರಮುಖ ನಗರಗಳಲ್ಲಿ ಶುರುವಾಗಿದೆ.

ಅನ್​ಲಾಕ್​​ ಬಳಿಕ ಶುರುವಾದ ಅಂಗಾಂಗ ಕಸಿ

ಲಿವರ್, ಕಿಡ್ನಿಯ ಕಸಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗೆ ಕೊರೊನಾ ಬಹಳ ಪರಿಣಾಮ ಬೀರಿತ್ತು. ಅಂದಾಜು ಶೇ. 50 ರಿಂದ 60 ರಷ್ಟು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಕಡಿಮೆ ಆಗಿತ್ತು. ಕೊರೊನಾ ಪರೀಕ್ಷೆ ಮಾಡಿಸಬೇಕೆಂಬ ಕಾರಣಕ್ಕೆ ಜನರು ಅಂಗಾಂಗ ದಾನಕ್ಕೆ ಮುಂದೆ ಬರುತ್ತಿರಲಿಲ್ಲ. ಇದೀಗ ಲಾಕ್​​ಡೌನ್​​ ಸಡಿಲಿಕೆ ಬಳಿಕ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮತ್ತೆ ಶುರುವಾಗಿದ್ದು, ಯಾರಿಗೆ ತುರ್ತು ಅನಿವಾರ್ಯತೆ ಇದೆ ಎಂಬುದನ್ನ ನೋಡಿಕೊಂಡು ಮಾಡಲಾಗುತ್ತಿದೆ. ಹೆಚ್ಚುವರಿ ಮುಂಜಾಗ್ರತಾ ಕ್ರಮವನ್ನ ತೆಗೆದುಕೊಂಡು, ದಾನಿಗಳ ಕೋವಿಡ್ ಪರೀಕ್ಷೆ, ಸಿಟಿ ಸ್ಕ್ಯಾನ್ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಂಡು, ಬಳಿಕ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.

ಕೊರೊನಾದ ಈ ಸಂದರ್ಭದಲ್ಲಿ ಅಂಗಾಗ ದಾನ ಮತ್ತು ಕಸಿ ಮಾಡುವುದು ತುಂಬಾ ಅಪಾಯಕಾರಿ. ಯಾಕಂದ್ರೆ ಅಂಗಾಗ ದಾನ ಮಾಡಿದ ಬಳಿಕ ದಾನಿಯ ರೋಗನಿರೋಧಕ ಶಕ್ತಿಯು ಶೇ. 50 ರಷ್ಟು ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಕೊರೊನಾ ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ತಾತ್ಕಾಲಿಕವಾಗಿ ಅಂಗಾಗ ಕಸಿ ಮಾಡುವುದನ್ನು, ತುರ್ತು ಇಲ್ಲದ ರೋಗಿಗಳಿಗೆ ಮಾಡುತ್ತಿಲ್ಲ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗಾಂಗ ಕಸಿಯ ಜೊತೆಗೆ ಬೇರೆ ಬೇರೆ ರೀತಿಯ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿವೆ. ರೋಗಿಗಳಿಗೆ ಅನುಕೂಲಕವಾದ ರೀತಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಕೊರೊನಾ ಆರಂಭದಲ್ಲಿ ರಾಜ್ಯದ ಬಹುತೇಕ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ‌ ಮಾಡಲಾಗಿತ್ತು. ಇದೀಗ ಎಲ್ಲವು ಮೊದಲಿನ ರೀತಿ ಆಗುತ್ತಿದ್ದು, ಎಲ್ಲಾ ರೀತಿಯ ಚಿಕಿತ್ಸೆ ಹಾಗೂ ಆಪರೇಶನ್ ನಡೆಯುತ್ತಿವೆ.

ಇನ್ನು ಲಕ್ಷಾಂತರ ಜನರು ಕಿಡ್ನಿ, ಲಿವರ್, ಹೃದಯ ಮತ್ತು ಕಣ್ಣು ಸೇರಿದಂತೆ ಅಂಗಾಂಗ ವೈಫಲ್ಯಗಳಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಇಂತವರ ಸಂಕಷ್ಟಕ್ಕೆ ಅಂಗಾಂಗ ದಾನಿಗಳು ಸ್ಪಂದಿಸಿದರೆ, ಅವರ ಬಾಳಿನಲ್ಲಿ ಬೆಳಕು ತಂದ ಪುಣ್ಯ ಸಿಗಲಿದೆ. ಆದರೆ ಕಸಿ ಮಾಡಿಸಿಕೊಳ್ಳಬೇಕೆಂಬ ಕನಸನ್ನು ಕೊರೊನಾ ಕಸಿದುಕೊಂಡಿದ್ದು, ಜನರು ಸೋಂಕಿನ ಭೀತಿ ಬಿಟ್ಟು ಅಂಗಾಂಗ ದಾನಕ್ಕೆ ಮುಂದಾಗಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.