ETV Bharat / state

ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ-3 ಹುದ್ದೆ ಸೃಜಿಸಿ ಸರ್ಕಾರದಿಂದ ಆದೇಶ

ಬೆಂಗಳೂರಲ್ಲಿ ಈಗಾಗಲೇ ವಿಶೇಷ ಜಿಲ್ಲಾಧಿಕಾರಿ-1, ವಿಶೇಷ ಜಿಲ್ಲಾಧಿಕಾರಿ-2 ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ವಿಶೇಷ ಜಿಲ್ಲಾಧಿಕಾರಿ-3ನ್ನು ಸೃಜಿಸಲಾಗಿದೆ.

order-on-special-dc-post-creation-for-bengaluru
ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ-3 ಹುದ್ದೆ ಸೃಜಿಸಿ ಆದೇಶ
author img

By

Published : Jan 22, 2022, 8:50 PM IST

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಅವುಗಳ ವಿಲೇವಾರಿಗಾಗಿ ವಿಶೇಷ ಜಿಲ್ಲಾಧಿಕಾರಿ-3 ಹುದ್ದೆಯನ್ನು ಸೃಜಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಈಗಾಗಲೇ ಬೆಂಗಳೂರಲ್ಲಿ ವಿಶೇಷ ಜಿಲ್ಲಾಧಿಕಾರಿ-1, ವಿಶೇಷ ಜಿಲ್ಲಾಧಿಕಾರಿ-2 ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ವಿಶೇಷ ಜಿಲ್ಲಾಧಿಕಾರಿ-3ನ್ನು ಸೃಜಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಇರುವ ನ್ಯಾಯಿಕ, ಅರೆ ನ್ಯಾಯಿಕ ಪ್ರಕರಣಗಳ ಪರಿಶೀಲನೆ ಮಾಡಿದಾಗ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಅವುಗಳ ವಿಲೇವಾರಿಗಾಗಿ ಸೂಕ್ತ ವ್ಯವಸ್ಥೆ ಮಾಡಲು ಸೂಚಿಸಿದ್ದರು.

ಬೆಂಗಳೂರು ನಗರ ಜಿಲ್ಲೆಯ ಬೆಲೆ ಬಾಳುವ ಜಮೀನುಗಳ ಭೂ ಕಬಳಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವುದು, ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಅಪಾರ ಪ್ರಮಾಣದ ಅರೆ ನ್ಯಾಯಿಕ ಪ್ರಕರಣಗಳು ತೀರ್ಮಾನಕ್ಕೆ ಬಾಕಿ ಇರುವುದನ್ನು ಪರಿಗಣಿಸಿ ಈ ಪ್ರಕರಣಗಳನ್ನು ಅತಿ ಶೀಘ್ರವಾಗಿ ಇತ್ಯರ್ಥಪಡಿಸಲು ತೀರ್ಮಾನಿಸಲಾಗಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಹಿನ್ನೆಲೆಯಲ್ಲಿ 10.10.2014ರಂದು ಸೃಷ್ಟಿಸಲಾದ ಹುದ್ದೆಗಳೊಂದಿಗೆ ವಿಶೇಷ ಜಿಲ್ಲಾಧಿಕಾರಿಗಳ ಇನ್ನೊಂದು ಹುದ್ದೆ ಸೃಜಿಸಲು ಹಾಗೂ ಈ ಹುದ್ದೆಯನ್ನು ಐ.ಎ.ಎಸ್ ವೃಂದದಿಂದ ತುಂಬಲು ಸರ್ಕಾರ ತೀರ್ಮಾನಿಸಿದೆ. ವಿಶೇಷ ಜಿಲ್ಲಾಧಿಕಾರಿ-2 ಹಾಗೂ ವಿಶೇಷ ಜಿಲ್ಲಾಧಿಕಾರಿ-3 ನ್ಯಾಯಿಕ - ಅರೆನ್ಯಾಯಿಕ ಪ್ರಕರಣಗಳನ್ನು ಆಲಿಸಬೇಕು. ಆಡಳಿತಾತ್ಮಕ ಹಾಗೂ ಇತರೆ ವಿಷಯಗಳನ್ನು ವಿಶೇಷ ಜಿಲ್ಲಾಧಿಕಾರಿ-1 ನಿರ್ವಹಿಸಲು ಕಾರ್ಯ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: ಮಾರ್ಚ್​ ಕೊನೆ ವಾರದಿಂದ IPL​ ಹಬ್ಬ.. ಭಾರತದಲ್ಲೇ ಟೂರ್ನಿ ಬಹುತೇಕ ಖಚಿತ ಎಂದ ಜಯ್​ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.