ETV Bharat / state

ವಿಧಾನಸಭೆ ಅಧಿವೇಶನ ಮತ್ತೆರಡು ದಿನ ಮುಂದುವರೆಸಲು ಪ್ರತಿಪಕ್ಷಗಳ ಒತ್ತಾಯ - assembly session

ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಅಧಿವೇಶನ್ನು ಮತ್ತೆರಡು ದಿನ ಮುಂದುವರೆಸುವಂತೆ ಆಗ್ರಹಿಸಿದ್ದಾರೆ.

Opposition's urge to continue assembly session till Feb 25!
ವಿಧಾನಸಭೆ ಅಧಿವೇಶನವನ್ನು ಫೆ.25ರವರೆಗೂ ಮುಂದುವರೆಸಲು ಪ್ರತಿಪಕ್ಷಗಳ ಒತ್ತಾಯ!
author img

By

Published : Feb 20, 2020, 5:13 PM IST

ಬೆಂಗಳೂರು: ವಿಧಾನಸಭೆ ಅಧಿವೇಶನವನ್ನು ಫೆ. 25ರವರೆಗೂ ಮುಂದುವರೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ.

ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಅಧಿವೇಶನ್ನು ಮತ್ತೆರಡು ದಿನ ಮುಂದುವರೆಸುವಂತೆ ಆಗ್ರಹಿಸಿದರು. ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ರಾಜ್ಯಪಾಲರ ಭಾಷಣದ ಮೇಲೆ ವ್ಯಾಪಕ ಚರ್ಚೆಯಾಗಬೇಕು ಎಂಬ ಕಾರಣದಿಂದಲೇ ಪ್ರಶ್ನೋತ್ತರ ಕಲಾಪವನ್ನೂ ರದ್ದು ಮಾಡಲಾಯ್ತು. ಆದರೆ ಮಾರ್ಚ್ 2-3ರಂದು ಸಂವಿಧಾನದ ಮೇಲೆ ವಿಶೇಷ ಚರ್ಚೆ ಎಂದು ವಿಧಾನಸಭಾಧ್ಯಕ್ಷರು ಘೋಷಣೆ ಮಾಡಿದ್ದಾರೆ‌. ಅದನ್ನು ಮುಂದೂಡಿದರೆ ಮುಜುಗರವಾಗುತ್ತದೆ. ಮಾರ್ಚ್ 5ರಂದು ಬಜೆಟ್ ಮಂಡನೆ ಆಗಬೇಕು. ಸಮಯ ಕಡಿಮೆಯಾಗುತ್ತದೆ ಎಂದರು.

ಪ್ರತಿಪಕ್ಷ ನಾಯಕರು ಮತ್ತು ಶಾಸಕರ ಮನವಿ ತಳ್ಳಿಹಾಕಿದ ಸ್ಪೀಕರ್, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಇಂದೇ ಆಗಬೇಕು. ಇಂದೇ ಸಿಎಂ ಉತ್ತರ ಕೊಡಬೇಕು. ಭೋಜನ ವಿರಾಮದ ವೇಳೆಯಲ್ಲಿ ಚರ್ಚಿಸಿ ನಿರ್ಧರಿಸೋಣ. ಸಾಧ್ಯವಾದಷ್ಟು ಎಲ್ಲಾ ಶಾಸಕರಿಗೆ ಮಾತನಾಡಲು ಸಮಯಾವಕಾಶ ಮಾಡಿಕೊಡುತ್ತೇವೆಂದು ಹೇಳಿದರು.

ವಿಧಾನಸಭೆ ಅಧಿವೇಶನವನ್ನು ಫೆ. 25ರವರೆಗೂ ಮುಂದುವರೆಸಲು ಪ್ರತಿಪಕ್ಷಗಳ ಒತ್ತಾಯ

ಆ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್‍ ಶಾಸಕ ವೆಂಕಟರಾವ್ ನಾಡಗೌಡ, ರಾಜ್ಯಾಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಮಾ. 2ರಂದು ಉತ್ತರ ಕೊಡಲಿ. ಇಂದೇ ಉತ್ತರ ಕೊಟ್ಟರೆ ಯಾರಿಗೂ ಮಾತನಾಡಲು ಅವಕಾಶ ಸಿಗುವುದಿಲ್ಲ. ಬಜೆಟ್ ಅಧಿವೇಶನದಲ್ಲಿ ಬಜೆಟ್ ಬಿಟ್ಟು ಬೇರೆ ವಿಷಯಗಳ ಚರ್ಚೆಗೆ ಅವಕಾಶವಿಲ್ಲ. ಕಡಿಮೆ ಅವಕಾಶ ಇರುವುದರಿಂದ ನಾಯಕರಿಗೆ ಮಾತನಾಡುವಷ್ಟರಲ್ಲಿ ಸಮಯ ಮುಗಿಯುತ್ತದೆ ಎಂದು ಹೇಳಿದರು. ಆಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಚಿವ ಮಾಧುಸ್ವಾಮಿ ಅವರು ರಾಜ್ಯಪಾಲರ ಭಾಷಣದ ಚರ್ಚೆಗೆ ಕಾಲ ಮಿತಿ ಹಾಕಿ ಎಂದಿದ್ದಾರೆ. ರಾಜ್ಯಪಾಲರ ಭಾಷಣ ಸರ್ಕಾರದ ಭಾಷಣವಾಗಿದ್ದು, ಅದರ ಮೇಲೆ ಚರ್ಚೆ ನಡೆಸಲು ತುಂಬಾ ಅವಕಾಶ ಇರಬೇಕು. ಇಂದು ಚರ್ಚೆ ನಡೆಯಲಿ, ಈ ಜಂಟಿ ಅಧಿವೇಶನದಲ್ಲೇ ಉತ್ತರ ಕೊಡಬೇಕೆಂದೇನಿಲ್ಲ. ಬಜೆಟ್ ಅಧಿವೇಶನದಲ್ಲಿ ಉತ್ತರ ಕೊಡಬಹುದು. ಒಂದು ದಿನದಲ್ಲೇ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಗಿಸಿ, ಉತ್ತರ ಪಡೆದುಕೊಳ್ಳಲು ಸಾಧ್ಯವಿಲ್ಲ. ಇದು ಸದಸ್ಯರ ಹಕ್ಕು ಮೊಟಕು ಮಾಡಿದಂತೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಕನಿಷ್ಠ 10 ದಿನ ನಿಗದಿ ಮಾಡಬೇಕೆಂದರು.

ರಾಜ್ಯಪಾಲರು ಭಾಷಣ ಮಾಡೋದು, ಅವರು ಉತ್ತರ ಕೊಡೋದು ಕೊನೆಗೆ ನಾವು ಸಭಾತ್ಯಾಗ ಮಾಡೋದು ಅಷ್ಟೇ ಆಗುತ್ತದೆ. ಜಂಟಿ ಅಧಿವೇಶನವನ್ನು ಕೇವಲ 4 ದಿನ ಕರೆದಿದ್ದೀರಿ. ಒಂದೇ ದಿನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಎಲ್ಲರೂ ಚರ್ಚೆ ಮಾಡಿ ಮುಗಿಸಬೇಕು ಎಂದರೆ ಆಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಶಾಸಕರಿಗೆ ಮಾತನಾಡುವ ಅವಕಾಶ ಇರಬೇಕು. ಬಜೆಟ್ ಅಧಿವೇಶನದ ಸಂದರ್ಭದಲ್ಲೂ ಚರ್ಚೆ ಮಾಡಿ, ಉತ್ತರ ಕೊಡಬಹುದು ಎಂದು ಸಲಹೆ ನೀಡಿದರು.

ಹಿಂದಿನ ವರ್ಷ ಕೇವಲ 17 ದಿನ ಅಧಿವೇಶನ ನಡೆದಿದೆ. ನಾಳೆ ಶಿವರಾತ್ರಿ ಹಬ್ಬ ಇರುವುದರಿಂದ ಅಧಿವೇಶನ ನಡೆಸಲು ಆಗುವುದಿಲ್ಲ. ಸೋಮವಾರ ಮತ್ತು ಬುಧವಾರದವರೆಗೂ ಅಧಿವೇಶವನ್ನು ಮುಂದುವರೆಸಿ, ಎಲ್ಲರಿಗೂ ಅವಕಾಶ ಸಿಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಆಗ ಕಾನೂನು ಸಚಿವ ಮಾಧುಸ್ವಾಮಿ, ಮಾ. 2ರಿಂದ 4ರವರೆಗೆ ಸಂವಿಧಾನ ಕುರಿತ ಚರ್ಚೆ ಇದೆ. ಹಾಗಾಗಿಯೇ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಚರ್ಚೆ ಸೀಮಿತಗೊಳಿಸಲಾಗಿದೆ. ಹಿಂದೆಂದೂ ಕೂಡ ಪೂರ್ವ ನಿಗದಿಯಂತೆ ಅಧಿವೇಶನ ನಡೆದಿಲ್ಲ. ಮಾ. 5ರಂದು ಬಜೆಟ್ ಮಂಡನೆಯಾಗಲಿದ್ದು, ವ್ಯಾಪಕವಾದ ಚರ್ಚೆಗೂ ಅವಕಾಶವಿರುತ್ತದೆ ಎಂದರು.

ಸಭಾಧ್ಯಕ್ಷರು ಒಪ್ಪುವುದಾದರೆ ಮಾ. 3 ಮತ್ತು 4ರಂದು ಸಂವಿಧಾನ ಕುರಿತ ಚರ್ಚೆಯಾಗಲಿ. ಮಾ. 2ರಂದು ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ಚರ್ಚೆಗೆ ಉತ್ತರ ಕೊಡಲು ಸರ್ಕಾರದ ತಕರಾರು ಇಲ್ಲ ಎಂದರು. ಆಗ ಶಾಸಕ ರಾಮಲಿಂಗಾರೆಡ್ಡಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಹಲವು ಶಾಸಕರು ಅಧಿವೇಶನವನ್ನು ಮತ್ತೆರಡು ದಿನ ಮುಂದುವರೆಸುವಂತೆ ಆಗ್ರಹಿಸಿದರು. ಈ ಹಂತದಲ್ಲಿ ಮಾತನಾಡಿದ ಸ್ಪೀಕರ್, ಮಧ್ಯಾಹ್ನ 4 ಗಂಟೆವರೆಗೂ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮಾಡಬಹುದು. ಆ ನಂತರ ಸರ್ಕಾರ ಉತ್ತರ ಕೊಡಲಿದೆ. ಬಜೆಟ್ ಅಧಿವೇಶನದಲ್ಲಿ ಮಾ. 31ರವರೆಗೂ ಚರ್ಚೆಗೆ ಅವಕಾಶವಿದೆ. ಮಾ. 2ರಂದು ಸರ್ಕಾರ ಉತ್ತರ ಕೊಡುವ ಬಗ್ಗೆ ಕಾನೂನು ಸಚಿವರು ನೀಡಿರುವ ಸಲಹೆ ಬಗ್ಗೆ ಸಮಾಲೋಚಿಸಿ ತೀರ್ಮಾನವನ್ನು ನಂತರ ಪ್ರಕಟಿಸುವುದಾಗಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.