ETV Bharat / state

ಸಿಎಂ ಜಿಲ್ಲೆಯಲ್ಲೇ ಹೀಗಾದ್ರೆ ಹೇಗೆ? ಕಲಾಪದಲ್ಲಿ ಗಣಿ ಸ್ಫೋಟ ಪ್ರಕರಣ ಪ್ರಸ್ತಾಪಿಸಿದ ಎಸ್​ಆರ್​ ಪಾಟೀಲ್

ಪೊಲೀಸ್ ಚೆಕ್ ಪೋಸ್ಟ್ ಅಂದರೆ ಅದು ಹಣ ವಸೂಲಿ ಮಾಡೋಕೆ ಇರೋದು ಅನ್ನುವಂತಾಗಿದೆ. ಚೆಕ್ ಪೋಸ್ಟ್ ನಲ್ಲಿ ದೊಡ್ಡ ಪ್ರಮಾಣದ ವ್ಯವಹಾರ ಇರುತ್ತದೆ. ಕಳೆದ 5 ವರ್ಷದಲ್ಲಿ 2,452 ಅಕ್ರಮ ಗಣಿಗಾರಿಕೆ ಪ್ರಕರಣಗಳು ವರದಿಯಾಗಿವೆ. ಆದರೆ ಅಕ್ರಮ ಗಣಿ ಮಾಲೀಕರ ಮೇಲೆ ಕೇಸ್ ದಾಖಲಾಗಿಯೇ ಇಲ್ಲ. ಒಬ್ಬರಿಗೂ ಶಿಕ್ಷೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಣಿ ಸ್ಫೋಟ ಪ್ರಕರಣ ಪ್ರಸ್ತಾಪಿಸಿದ ಎಸ್​ಆರ್​ ಪಾಟೀಲ್

author img

By

Published : Feb 2, 2021, 3:47 AM IST

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಇಂದು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರು ಶಿವಮೊಗ್ಗ ಸ್ಫೋಟ ಪ್ರಕರಣವನ್ನು ಪ್ರಸ್ತಾಪಿಸಿದರು.

ವಿಧಾನ ಪರಿಷತ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಶಿವಮೊಗ್ಗದಲ್ಲಿ ನಡೆದ ಸ್ಫೋಟ100 ಕೀಮಿ ವ್ಯಾಪ್ತಿಗೆ ಕೇಳಿಸಿದೆ. ಆ ಭಾಗದಲ್ಲಿ ಹಲವು ಆಣೆಕಟ್ಟುಗಳಿವೆ. ಏನಾದರೂ ಅನಾಹುತವಾಗಿದ್ದರೆ ಇಡೀ ದಕ್ಷಿಣ ಭಾರತದಲ್ಲೇ ದೊಡ್ಡ ದುರುಂತವಾಗುತ್ತಿತ್ತು. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಹೀಗಾದ್ರೆ ಹೇಗೆ? ಮೊದಲು ಅಧಿಕಾರಿಗಳು ಭಯ ಪಟ್ಟು ಕೆಲಸ ಮಾಡ್ತಾ ಇದ್ರು. ಆದ್ರೆ ಈಗ ಇದು ತದ್ವಿರುದ್ಧವಾಗಿದೆ ಎಂದರು.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ದಂಡ ಕಟ್ಟಿದರೆ ಸಕ್ರಮವಾಗುತ್ತದೆ. ಯಾಕೆಂದರೆ ಇದರಲ್ಲಿ ಲಾಭ ಜಾಸ್ತಿ ಇದೆ. 10 ಸಾವಿರದಿಂದ 13 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಲ್ಲಿ 2850 ಮಾತ್ರ ಅಧಿಕೃತ ಕಲ್ಲು ಗಣಿಗಾರಿಕೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಹೀಗಾಗಿದೆ ಅಂದ್ರೆ, ಉಳಿದ ಜಿಲ್ಲೆಗಳ ಕತೆ ಏನು..? ಇಂತಾ ಸ್ಫೋಟಕ ಬೇರೆ ಯಾರದಾದರೂ ಕೈ ಸೇರಿದರೆ ಏನಾಗುತ್ತೆ? ದೇಶದ ಅಖಂಡತೆಯ ಪ್ರಶ್ನೆ ಇದು. ಈ ಸ್ಫೋಟದ ಹಿಂದೆ ಯಾರೋ ಒಬ್ಬರ ನಿರ್ಲಕ್ಷ್ಯ ಇಲ್ಲ. ಹಲವು ಅಧಿಕಾರಿಗಳ ನಿರ್ಲಕ್ಷ್ಯ ಇದೆ ಎಂದು ವಿವರಿಸಿದರು.

ಪೊಲೀಸ್ ಚೆಕ್ ಪೋಸ್ಟ್ ಅಂದರೆ ಅದು ಹಣ ವಸೂಲಿ ಮಾಡೋಕೆ ಇರೋದು ಅನ್ನುವಂತಾಗಿದೆ. ಚೆಕ್ ಪೋಸ್ಟ್ ನಲ್ಲಿ ದೊಡ್ಡ ಪ್ರಮಾಣದ ವ್ಯವಹಾರ ಇರುತ್ತದೆ. ಕಳೆದ 5 ವರ್ಷದಲ್ಲಿ 2,452 ಅಕ್ರಮ ಗಣಿಗಾರಿಕೆ ಪ್ರಕರಣಗಳು ವರದಿಯಾಗಿವೆ. ಆದರೆ ಅಕ್ರಮ ಗಣಿ ಮಾಲೀಕರ ಮೇಲೆ ಕೇಸ್ ದಾಖಲಾಗಿಯೇ ಇಲ್ಲ. ಒಬ್ಬರಿಗೂ ಶಿಕ್ಷೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಜೆಟ್ ಬಗ್ಗೆ ಪ್ರತಿಕ್ರಿಯೆ

ಟ್ವೀಟ್ ಮೂಲಕ ಕೇಂದ್ರ ಬಜೆಟ್​ಗೆ ಪ್ರತಿಕ್ರಿಯೆ ನೀಡಿರುವ ಎಸ್ಆರ್​ಪಿ, ಕೇಂದ್ರ ಸರ್ಕಾರ ಮಂಡಿಸಿರುವ 2021-22ರ ಆಯವ್ಯಯ ನಿರಾಶಾದಾಯಕವಾಗಿದೆ. ಐದು ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದ್ದು, ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಬಜೆಟ್​ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೂ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ರೂ ವ್ಯರ್ಥ. ಮೆಟ್ರೋಗೆ ನೀಡಿರುವುದು ಹೊಸ ಅನುದಾನ ಅಲ್ಲ. ಎಂಎಸ್​ಪಿ ಮುಂದುವರಿಯುವ ಭರವಸೆ ನೀಡಿಬೇಕಿತ್ತು. ಆದರೆ ರೈತ ಸಮುದಾಯದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗಿದೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನು ಸಿಕ್ಕಿಲ್ಲ ಎಂದಿದ್ದಾರೆ.

ಇಂದು ಮಂಡನೆಯಾದ ನರೇಂದ್ರ ಮೋದಿ ಸರ್ಕಾರದ ಬಜೆಟ್ ನಿರಾಶಾದಾಯಕ ಬಜೆಟ್ ಎಂದು ಹೇಳಲಿಚ್ಚಿಸುತ್ತೇನೆ. ಕೊರೊನಾ ಮಹಾಮಾರಿಯಿಂದ ಜನ ಸಂಕಷ್ಟದಲ್ಲಿದ್ದಾರೆ. ಚುನಾವಣೆ ನಡೆಯೋ ರಾಜ್ಯಗಳನ್ನು ದೃಷ್ಟಿಯಾಗಿಸಿಕೊಂಡು ಮಾಡಿರೋ ಬಜೆಟ್ ಇದು. ಕರ್ನಾಟಕದ ನಿರೀಕ್ಷೆಗಳು ಯಾವುದೂ ಈ ಬಜೆಟ್​ನಲ್ಲಿಲ್ಲ. ಮೋದಿ ಸರ್ಕಾರದ ಈ ಬಜೆಟ್​ನಿಂದ ಕರ್ನಾಟಕ ರಾಜ್ಯಕ್ಕೆ ಯಾವುದೇ ಅನುಕೂಲವಾಗಿಲ್ಲ. ಚುನಾವಣಾ ಲಾಭಕ್ಕಾಗಿ ಈ ಬಜೆಟ್ ಮಂಡಿಸಲಾಗಿದೆ. ಈಗಾಗಲೇ ಘೋಷಣೆಯಾಗಿರುವ ರಾಜ್ಯದ ಯೋಜನೆಗಳಿಗೆ ಬಜೆಟ್​ನಲ್ಲಿ ಹಣ ಘೋಷಿಸಿದ್ದು ಬಿಟ್ಟರೆ, ಹೊಸದೇನೂ ಇಲ್ಲ. ಚುನಾವಣಾ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ.

ಕರ್ನಾಟಕಕ್ಕೆ ಒಂದೆರಡು ಯೋಜನೆ ಬಿಟ್ಟರೆ ಹೆಚ್ಚಿನ ಅನುಕೂಲವಾಗಿಲ್ಲ. ಬಡವರಿಗೆ, ನಿರುದ್ಯೋಗಿಗಳಿಗೆ, ರೈತರಿಗೆ ಅನುಕೂಲವಾಗುವ ಯಾವ ಯೋಜನೆಗಳೂ ಇಲ್ಲ. ಈ ಬಜೆಟ್​ನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವ ಯೋಜನೆಗಳೂ ಇಲ್ಲ. ನರೇಂದ್ರ ಮೋದಿಯವರೇ ನಿಮ್ಮ ಸರ್ಕಾರದ ಬಜೆಟ್​ನಲ್ಲಿ ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರಿಗೆ ಯಾವ ಸಹಾಯವೂ ಸಿಕ್ಕಿಲ್ಲ. ಕರ್ನಾಟಕದ ಯೋಜನೆಗಳಿಗೂ ಈ ಬಜೆಟ್​ನಲ್ಲಿ ಹೇಳುವಂತದ್ದೇನೂ ಇಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.