ETV Bharat / state

ರೈತರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ; ಪ್ರತಿಪಕ್ಷಕ್ಕೆ ಮುಖ್ಯಮಂತ್ರಿ ಬಿಎಸ್​ವೈ ಮನವಿ

ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಕೃಷಿಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧವೂ ಪ್ರತಿಪಕ್ಷಗಳು ಹಾಗೂ ರೈತಪರ ಸಂಘಟನೆಗಳು ಕಿಡಿಕಾರುತ್ತಿವೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.

yediyurappa
ಯಡಿಯೂರಪ್ಪ
author img

By

Published : Dec 10, 2020, 4:30 AM IST

ಬೆಂಗಳೂರು: ರೈತರ ಸಂಶಯಗಳನ್ನು ಸರ್ಕಾರ ಪರಿಹರಿಸಲಿದೆ. ಕೃಷಿರನ್ನು ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮೂಲಕ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದಾರೆ.

ಹೋರಾಟದಿಂದಲೇ ನಾನು ಇವತ್ತು ಈ ಸ್ಥಾನದಲ್ಲಿ ಇದ್ದೇನೆ. ನಾನೂ ಕೂಡ ರೈತನ ಮಗನಾಗಿದ್ದು, ರೈತರ ಸಂಕಷ್ಟ ತಿಳಿದಿದೆ. ಸದಾಕಾಲ ರೈತಪರವಾಗಿಯೇ ಇರುತ್ತೇನೆ. ನಮ್ಮ ಅನ್ನದಾತ ರೈತರಿಗೆ ಅನ್ಯಾಯವಾಗಲು ನಾನು ಅವಕಾಶ ನೀಡುವುದಿಲ್ಲ. ರೈತರ ಸಂಶಯಗಳನ್ನು ಸರ್ಕಾರ ಪರಿಹರಿಸಲಿದೆ. ನನ್ನ ವಿನಂತಿಯಿಷ್ಟೇ, ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬೇಡಿ ಎಂದು ಟ್ವೀಟ್ ಮಾಡಿ ರೈತ ಪರ ಹೋರಾಟ ಮಾಡುತ್ತಿದ್ದ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಿಎಸ್​​ವೈ ವಿರುದ್ಧ ಡಿನೋಟಿಫಿಕೇಷನ್ ಆರೋಪ: ದೂರು ಹಿಂಪಡೆಯಲು ಮುಂದಾದ ದೂರುದಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.