ETV Bharat / state

ಈಶ್ವರಪ್ಪನಿಗೆ ಗೊತ್ತಿಲ್ಲ, ಮನುಸ್ಮೃತಿ ಜಾರಿಯಾದ್ರೆ ಕುರಿ ಕಾಯಬೇಕಾಗುತ್ತದೆ : ಮಾಜಿ ಸಿಎಂ ಸಿದ್ದರಾಮಯ್ಯ - ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ

ಈಶ್ವರಪ್ಪಗೆ ಪೊಲಿಟಿಕಲ್ ಭಾಷೆಯೇ ಗೊತ್ತಿಲ್ಲ. ರೈತರು ಕೆಂಪುಕೋಟೆಯ ಮೇಲೆ ಧ್ವಜ ಹಾರಿಸುವ ಕೆಲಸ ಮಾಡಿದ್ದರು. ಅವರ ಮೇಲೆ ದೇಶದ್ರೋಹದ ಕೇಸ್ ಹಾಕಲಾಗಿತ್ತು. ಇವರ ಮೇಲೆ ಯಾಕೆ ಕೇಸ್ ಹಾಕಿಲ್ಲ. ಬಿಜೆಪಿಗರು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರ ಭಾಷೆ ಇವೆಲ್ಲ ಬದಲಾವಣೆ ಆಗಬೇಕು ಅಂತಾ ಹೇಳಿದ್ದರು. ನಾಗಪುರ ಆರ್​ಎಸ್​​​ಎಸ್ ಕಚೇರಿಯಲ್ಲಿ ಕೇಸರಿ ಧ್ವಜ ಹಾರಿಸುತ್ತಾರೆ..

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ

author img

By

Published : Feb 16, 2022, 6:48 PM IST

Updated : Feb 16, 2022, 7:38 PM IST

ಬೆಂಗಳೂರು : ಸಚಿವ ಕೆ ಎಸ್ ಈಶ್ವರಪ್ಪ ನಾಳೆ ಬೆಳಗ್ಗೆ ರಾಜೀನಾಮೆ ನೀಡದಿದ್ದರೆ ಅವರನ್ನು ಸರ್ಕಾರ ವಜಾಗೊಳಿಸಿದ್ದರೆ, ಸದನದ ಒಳಗೆ ಹಾಗೂ ಹೊರಗೆ ತೀವ್ರ ರೂಪದಲ್ಲಿ ಹೋರಾಟ ಕೈಗೊಳ್ಳುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ

ಸಚಿವರಾಗಿ ಮುಂದುವರಿಯಲು ಅವರು ಅನರ್ಹರಾಗಿದ್ದಾರೆ. ಕೂಡಲೇ ಅವರನ್ನು ಆ ಸ್ಥಾನದಿಂದ ಮುಖ್ಯಮಂತ್ರಿಗಳು ವಜಾಗೊಳಿಸಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು.

ಬಿಜೆಪಿ ಆರಂಭದಿಂದಲೂ ಸಂವಿಧಾನವನ್ನು ಬದಲಿಸುವ ಹೇಳಿಕೆಯನ್ನು ನೀಡುತ್ತಾ ಬಂದಿದೆ. ಇದರ ಭಾಗವಾಗಿಯೇ ಈಶ್ವರಪ್ಪ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ನಮ್ಮ ಹೋರಾಟ ಶತಃಸಿದ್ಧ. ಸದನದ ಒಳಗೆ ಹಾಗೂ ಹೊರಗೆ ವಿವಿಧ ರೂಪದ ಹೋರಾಟವನ್ನು ಕೈಗೊಳ್ಳುತ್ತೇವೆ.

ನಮ್ಮ ಹೋರಾಟದಲ್ಲಿ ಅಹೋರಾತ್ರಿ ಧರಣಿ ಸಹ ಒಂದಾಗಿದೆ. ನಾಳೆ ಬೆಳಗ್ಗೆಯವರೆಗೆ ಕಾಯ್ದು ಸರ್ಕಾರದ ತೀರ್ಮಾನ ಏನು ಎಂಬುದನ್ನು ನೋಡಿಕೊಂಡು ಬೆಳಗ್ಗೆ 11 ಗಂಟೆ ನಂತರ ನಮ್ಮ ತೀರ್ಮಾನ ತಿಳಿಸುತ್ತೇವೆ ಎಂದು ವಿವರಿಸಿದರು.

ಬೆಳಗ್ಗೆಯಿಂದ ಪರಿಷತ್ ಮತ್ತು ವಿಧಾನಸಭೆಯಲ್ಲಿ ನಡೆದಿದ್ದು ನೊಡಿದ್ದೀರಾ. ನಾನು ನಿಲುವಳಿ ಸೂಚನೆ ಮಂಡನೆ ಮಾಡಿದ್ದೆ. ಬಹಳ ಮಹತ್ವದ ವಿಚಾರ ನಾನು ಎತ್ತಿದ್ದೆ. 130 ಕೋಟಿ ಜನರಿಗೆ ಸಂಬಂಧಿಸಿದ್ದು. ಇಂದಲ್ಲ ನಾಳೆ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೇವೆ. ಹೀಗಂತಾ, ಈಶ್ವರಪ್ಪ ಹೇಳಿಕೆ ‌ನೀಡಿದ್ದರು. ಶಿವಮೊಗ್ಗದ ಸರ್ಕಾರಿ ಕಾಲೇಜ್ ಧ್ವಜ ಸ್ತಂಭದ ಮೇಲೆ ಕೇಸರಿ ಧ್ವಜ ಹಾರಿಸಿದ್ದರು.

ಬಿಜೆಪಿ ಕುಮ್ಮಕ್ಕಿನಿಂದ ಹಾರಿಸಿದ್ದರು. ಮಂತ್ರಿ ಸೇರಿದಂತೆ ಯಾರೇ ಆಗಲಿ ಸಂವಿಧಾನದ ಮೇಲೆ ಪ್ರಮಾಣ ಮಾಡುತ್ತೇವೆ. ಸಾಂವಿಧಾನಿಕ ಹುದ್ದೆಯಲ್ಲಿರ್ತೇವೆ. ಮಂತ್ರಿಯಾಗಿ ಈಶ್ವರಪ್ಪ ಸರ್ಕಾರದಲ್ಲಿ ಇದ್ದರು, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದು ಅಕ್ಷಮ್ಯ ಅಪರಾಧ ಎಂದರು.

ಶಿವಮೊಗ್ಗದ ಸರ್ಕಾರಿ ಕಾಲೇಜಿನಲ್ಲಿ ಧ್ವಂಜ ಸ್ತಂಭದ ಮೇಲೆ ಕೇಸರಿ ಧ್ವಜ ಹಾರಿಸಿದ್ದರು. ಬಿಜೆಪಿ ಬೆಂಬಲಿತ ವಿದ್ಯಾರ್ಥಿಗಳು ಕೇಸರಿ ಭಾವುಟ ಹಾರಿಸಿದ್ದರು. ಈ ಬಗ್ಗೆ ಮಾಧ್ಯಮದವರು ಈಶ್ವರಪ್ಪನವರ ಬಳಿ ಪ್ರತಿಕ್ರಿಯೆ ಕೇಳಿದ್ದಾರೆ.

ಆಗ ಮಾತನಾಡುವಾಗ ಇವತ್ತಲ್ಲಾ ನಾಳೆ ಕೆಂಪುಕೋಟೆ ಮೇಲೆ ಭಾವುಟ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ಡಿ ಕೆ ಶಿವಕುಮಾರ್ ಮೇಲೆ ಮಾತನಾಡಲಿ. ಉತ್ತರ ಕೊಡುವ ಶಕ್ತಿ ಅವರಿಗಿದೆ. ಅದನ್ನ ಬಿಟ್ಟು ಶಿವಕುಮಾರ್ ಅವರ ತಂದೆ ಮೇಲೆ ಈಶ್ವರಪ್ಪ ಮಾತನಾಡಿದ್ದಾರೆ.

ಈಶ್ವರಪ್ಪಗೆ ಪೊಲಿಟಿಕಲ್ ಭಾಷೆಯೇ ಗೊತ್ತಿಲ್ಲ. ರೈತರು ಕೆಂಪುಕೋಟೆಯ ಮೇಲೆ ಧ್ವಜ ಹಾರಿಸುವ ಕೆಲಸ ಮಾಡಿದ್ದರು. ಅವರ ಮೇಲೆ ದೇಶದ್ರೋಹದ ಕೇಸ್ ಹಾಕಲಾಗಿತ್ತು. ಇವರ ಮೇಲೆ ಯಾಕೆ ಕೇಸ್ ಹಾಕಿಲ್ಲ. ಬಿಜೆಪಿಗರು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರ ಭಾಷೆ ಇವೆಲ್ಲ ಬದಲಾವಣೆ ಆಗಬೇಕು ಅಂತಾ ಹೇಳಿದ್ದರು. ನಾಗಪುರ ಆರ್​ಎಸ್​​​ಎಸ್ ಕಚೇರಿಯಲ್ಲಿ ಕೇಸರಿ ಧ್ವಜ ಹಾರಿಸುತ್ತಾರೆ.

ಬೈಟಕ್ ಕೂತಾಗ ಕೂಡ ರಾಷ್ಟ್ರ ಧ್ವಜ ಹಾರಿಸಲ್ಲ. ಮನುಸ್ಮೃತಿ ಇರುವವರು ಆರ್​​ಎಸ್​​ಎಸ್‌ನವರು. ಒಂದು ವೇಳೆ ಈಶ್ವರಪ್ಪ ಬಾಯಲ್ಲಿ ಆರ್​​ಎಸ್​ಎಸ್‌ನವರೇ ಹೇಳಿಸಿರಬೇಕು. ಆರ್​​ಎಸ್​​ಎಸ್ ಗುಲಾಮರಾಗಿದ್ದಾರೆ ಬಿಜೆಪಿಗರು. ಮನುಸ್ಮೃತಿ ಬಂದ ಮೇಲೆ ಸಚಿವರಾಗಿರಲು ಲಾಯಕ್ಕಲ್ಲ ಎಂದು ಕಿಡಿಕಾರಿದರು.

ಈಶ್ವರಪ್ಪ ಕೈಯಲ್ಲಿ ಆರ್​​ಎಸ್​​​​ಎಸ್‌ನವರೇ ಈ ಮಾತು ಹೇಳಿಸಿದರೂ ಹೇಳಿಸಿರಬಹುದು. ಈಶ್ವರಪ್ಪಂಗೆ ಗೊತ್ತಿದೆಯೋ ಇಲ್ವೋ, ಮನುಸ್ಮೃತಿ ಬಂದರೆ ಈಶ್ವರಪ್ಪ ಮಿನಿಸ್ಟರ್ ಆಗಿರೋಕೆ ಆಗುತ್ತಾ? ಕುರಿ ಕಾಯ್ಕೊಂಡು ಇರಬೇಕಾಗುತ್ತೆ, ಇಲ್ಲ ಕಸ ಗುಡಿಸಿಕೊಂಡೋ, ಬೇರೇನೋ ಮಾಡಿಕೊಂಡು ಜೀತದಾಳಾಗಿ ಇರಬೇಕಾಗುತ್ತೆ. ಯಾರೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ರೂ ಅದು ದೇಶದ್ರೋಹ.

ಬಿಜೆಪಿಯವರೇ ಸಂವಿಧಾನ ಬದಲಾವಣೆಯಾಗಬೇಕು. ರಾಷ್ಟ್ರಧ್ವಜ, ರಾಷ್ಟ್ರಗೀತೆ ಬದಲಾವಣೆ ಮಾಡಬೇಕು ಅಂತಾ ಹೇಳೋರು. 2002ವರೆಗೂ ಆರ್​ಎಸ್​​ಎಸ್ ನಾಗಪುರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಈಶ್ವರಪ್ಪನವರ ಕೈಯಲ್ಲಿ ಆರ್​ಎಸ್​​ಎಸ್ ಹೇಳಿಸಿರಬಹುದೋ ಗೊತ್ತಿಲ್ಲ. ಮನುಸ್ಮೃತಿ ಜಾರಿಯಾಗಬೇಕೆಂದು ಬಿಜೆಪಿಯವರು ಅಂದುಕೊಂಡಿದ್ದಾರೆ. ಈಶ್ವರಪ್ಪನಿಗೆ ಗೊತ್ತಿಲ್ಲ, ಮನುಸ್ಮೃತಿ ಜಾರಿಯಾದ್ರೆ ಕುರಿ ಕಾಯಬೇಕಾಗುತ್ತದೆ,ಇಲ್ಲಾಂದ್ರೆ ಹೊಲದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಷ್ಟೆಲ್ಲಾ ಇದ್ದರೂ ಆರ್​ಎಸ್​​ಎಸ್ ಜೀತದಾಳು ಆಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ನಾವು ಜನಪ್ರತಿನಿಧಿಗಳು. ನಾವು ಭಾರತೀಯರು. ಭಾರತದ ಭಾವುಟ ರಕ್ಷಣೆ ಮಾಡಿಕೊಳ್ಳಬೇಕು. ಸಂವಿಧಾನದ ಹಕ್ಕು ಕೊಟ್ಟಿದೆ. ರಾಜ್ಯಪಾಲರು ಕೂಡಲೇ ಈಶ್ವರಪ್ಪ ಅವರನ್ನು ವಜಾ ಮಾಡಬೇಕಿತ್ತು. ಇಲ್ಲ ಸಿಎಂ ರಾಜೀನಾಮೆ ಪಡೆಯಬೇಕಿತ್ತು. ಅಧಿಕಾರಿಗಳು ಸ್ವಯಂ ದೂರು ದಾಖಲು‌ ಮಾಡಿಕೊಳ್ಳಬೇಕಿತ್ತು.

ಹಿಂದಿನ ದಿನ ರಾಷ್ಟ್ರಧ್ವಜ ಇಳಿಸಿದ್ದಾರೆ. ಮಾರನೇ ದಿನ ಕೇಸರಿ ಕಟ್ಟಿಸಿದ್ದಾರೆ. ಜೊತೆಗೆ ಕೇಸರಿ ಭಾವುಟ ಹಂಚಿದ್ದೇವೆ ಎಂದು ಹೇಳಿದ್ದಾರೆ‌. ಆದ್ರೂ ಅವರ ಮೇಲೆ ಕ್ರಮವಾಗಿಲ್ಲ? ಸದನದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಚರ್ಚೆನೇ ಮಾಡದೇ ಉತ್ತರ ಕೊಡಿಸಲು‌‌ ಮುಂದಾದರು. ಸ್ಪೀಕರ್ ಪೊಲಿಟಿಕಲ್​​ ಮ್ಯಾನ್ ಆಗಿದ್ದರು. ಅದು ಆರ್​ಎಸ್​​ಎಸ್ ಅಜೆಂಡಾನಾ, ಬಿಜೆಪಿ ಅಜೆಂಡಾನಾ ಎಂದು ಪ್ರಶ್ನಿಸಿದರು.

Last Updated : Feb 16, 2022, 7:38 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.