ETV Bharat / state

ಮಕ್ಕಳ ಮೂತ್ರಕೋಶ ತೊಂದರೆಗಳ ಚಿಕಿತ್ಸೆಗೆ ರೈನ್ ಬೋ ವಿಶೇಷ ಕ್ಲಿನಿಕ್ ಆರಂಭ

ಜೀವನ ಶೈಲಿಯ ಬದಲಾವಣೆಯಿಂದ ಈಚೆಗೆ ಮೂತ್ರಕೋಶ ಸಮಸ್ಯೆ ಹೆಚ್ಚಾಗಿದ್ದು, ಅವುಗಳಿಗೆ ಸೂಕ್ತ ಚಿಕಿತ್ಸೆಯನ್ನು ರೈನ್​ ಬೋ ಮಕ್ಕಳ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ ಎಂದು ರೈನ್ ಬೋ ಮಕ್ಕಳ ಆಸ್ಪತ್ರೆಯ ಮೂತ್ರಕೋಶ ತಜ್ಞ ಡಾ. ಅಂತೋನಿ ಹೇಳಿದರು.

Opening of Rainbow Specialty Clinic for Pediatric Bladder Problems
ರೈನ್ ಬೋ ವಿಶೇಷ ಕ್ಲಿನಿಕ್ ಆರಂಭ
author img

By

Published : Sep 5, 2020, 11:42 PM IST

ಬೆಂಗಳೂರು: ಬದಲಾದ ಪರಿಸ್ಥಿತಿ ಮತ್ತು ಆಧುನಿಕತೆಯ ಪ್ರಭಾವದಿಂದಾಗಿ ಇಂದು ಮಕ್ಕಳಲ್ಲಿ ಮೂತ್ರಕೋಶಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಸಮಸ್ಯೆಗಳು ಗೋಚರಿಸುತ್ತಿವೆ. ಈ ಕಾರಣಕ್ಕೆ ಹೆಚ್ಚುತ್ತಿರುವ ಮೂತ್ರಕೋಶದ ತೊಂದರೆಗಳ ಚಿಕಿತ್ಸೆಗಾಗಿ ಮಾರತಹಳ್ಳಿಯಲ್ಲಿ ರೈನ್ ಬೋ ಮಕ್ಕಳ ಆಸ್ಪತ್ರೆ ಆರಂಭವಾಗಿದೆ.

Opening of Rainbow Specialty Clinic for Pediatric Bladder Problems
ರೈನ್ ಬೋ ವಿಶೇಷ ಕ್ಲಿನಿಕ್ ಆರಂಭ

ವಿಶಿಷ್ಟ ಸೌಲಭ್ಯ ಮತ್ತು ಪರಿಣಿತ ವೈದ್ಯರನ್ನು ಹೊಂದಿರುವ ವಿಶೇಷ ಕ್ಲಿನಿಕ್ ಇದಾಗಿದ್ದು, ಮೂತ್ರಕೋಶದ ಸಮಸ್ಯೆಗಳಿಗೆಂದೇ ಆರಂಭಿಸಿರುವ ಕ್ಲಿನಿಕ್​ನಲ್ಲಿ ವಿಶೇಷ ಸೌಲಭ್ಯಗಳಾದ ಪಿಡಿಯಾಟ್ರಿಕ್ ರೇಡಿಯಾಲಜಿ, ಪಿಡಿಯಾಟ್ರಿಕ್ ನೆಫ್ರಾಲಜಿ ಮತ್ತು ಸಂಬಂಧಿಸಿದ ಅನೇಕ ಸೇವೆಗಳು ಲಭ್ಯವಾಗಲಿವೆ. ಈ ವಿಶೇಷ ಕೇಂದ್ರದಲ್ಲಿ ಎಂಡೋಸ್ಕೊಪಿ/ಲ್ಯಾಪ್ರೊಸ್ಕೋಪಿ ಸೇರಿದಂತೆ ಹೆಚ್ಚು ಗಾಯವಿಲ್ಲದಂತೆ ಮಕ್ಕಳಿಗೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗುತ್ತದೆ.

ಈ ಕುರಿತು ಮಾತನಾಡಿದ ರೈನ್ ಬೋ ಮಕ್ಕಳ ಆಸ್ಪತ್ರೆಯ ಮೂತ್ರಕೋಶ ತಜ್ಞ ಡಾ. ಅಂತೋನಿ ರಾಬರ್ಟ್ ಚಾರ್ಲಸ್, "ಮಕ್ಕಳನ್ನು ವಿಶೇಷವಾಗಿ ಪರಿಗಣಿಸಬೇಕಾಗಿದ್ದು, ದೊಡ್ಡವರಂತೆ ಅವರಿಗೆ ರೋಗ ನಿರ್ಣಯ ಮಾಡಲು ಸಾಧ್ಯವಿಲ್ಲ. ಅವರ ಸಮಸ್ಯೆಗಳೆಲ್ಲಾ ತುಂಬಾ ವಿಶೇಷವಾಗಿದ್ದು, ಮಕ್ಕಳಿಂದ ಮಕ್ಕಳಿಗೆ ಸಮಸ್ಯೆಯ ಮೂಲಗಳು ವಿಭಿನ್ನವಾಗಿರುತ್ತವೆ. ಬಹುಪಾಲು ಮಕ್ಕಳು ಕಿಡ್ನಿ, ಟ್ಯೂಬ್ಸ್ ಮತ್ತು ಬ್ಲಾಡರ್ಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದು, ಅವುಗಳಿಗೆ ಚಿಕಿತ್ಸೆ ನೀಡಲು ವಿಶೇಷ ಪರಿಣಿತರ ಅವಶ್ಯಕತೆಯಿದೆ ಎಂದರು.

ನವಜಾತ ಶಿಶುಗಳಿಗೆ ಮೂತ್ರಕೋಶ ಸಮಸ್ಯೆ: ಇತ್ತೀಚಿನ ದಿನಗಳಲ್ಲಿ ನವಜಾತ ಶಿಶುಗಳಿಗೆ ಕೂಡಾ ಮೂತ್ರ ಹರಿವಿನಲ್ಲಿ ಅಡಚಣೆಗಳು ಕಂಡುಬರುತ್ತಿವೆ. ಇದರಿಂದಾಗಿ ಅತೀ ಕಡಿಮೆ ವಯಸ್ಸಿನಲ್ಲಿಯೇ ಕಿಡ್ನಿಗೆ ಸಂಬಂಧಿಸಿದ ಸಂಕೀರ್ಣ ಸಮಸ್ಯೆಗಳು ಉದ್ಭವವಾಗುತ್ತವೆ. ಈ ಕಾರಣಕ್ಕೆ ವಿಶೇಷ ತಜ್ಞರ ಸಲಹೆ ತೀರಾ ಅತ್ಯಗತ್ಯವಾಗಿರುತ್ತದೆ. ನೆಫ್ರಾಲಜಿ ಮತ್ತು ಯೂರಾಲಜಿ ತಜ್ಞರ ನೆರವು ಪಡೆಯುವುದರಿಂದ ಮೂತ್ರಕೋಶದ ಗಂಭೀರ ಸಮಸ್ಯೆಗಳಿಗೆ ತುತ್ತಾಗದೆ ಬಹು ಬೇಗ ಇದಕ್ಕೆ ಪರಿಹಾರ ಪಡೆಯಬಹುದಾಗಿದೆ ಎಂದು ಹೇಳಿದರು.

ಎಕ್ಸ್ಟ್ರೋಫಿಯಂತಹ ಪ್ರಕರಣಗಳಲ್ಲಿ ಮೂತ್ರಕೋಶದಲ್ಲಿ ಅಸಹಜ ವ್ಯತ್ಯಾಸಗಳು ಕಂಡುಬರುತ್ತವೆ. ಹೊಟ್ಟೆಯ ಕಳೆಭಾಗದಲ್ಲಿ ಚರ್ಮ ಸರಿಯಾದ ಬೆಳವಣಿಗೆ ಕಾಣದಿದ್ದರೆ, ಮೂತ್ರಕೋಶವು ಹೊರಬರುವ ಸಾಧ್ಯತೆ ಕೂಡಾ ಇರುತ್ತದೆ. ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ದೇಶದ ಹಾಗೂ ಹೊರದೇಶದ ಅನೇಕ ಮಕ್ಕಳಿಗೆ ನಾವು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ನಮ್ಮ ಮಕ್ಕಳ ತಜ್ಞರ ತಂಡವು ಇಂತಹ ವಿಶೇಷ ಪರಿಣಿತಿಗಳನ್ನು ಹೊಂದಿದೆ ಎಂದು ಹೇಳಿದರು.

ರೈನ್ ಬೋ ಮಕ್ಕಳ ಆಸ್ಪತ್ರೆಯ ಬೆಂಗಳೂರು ವಿಭಾಗದ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ನೀರಜ್ ಲಾಲ್, ಮಕ್ಕಳಲ್ಲಿ ಕಂಡುಬರುವ ಮೂತ್ರಕೋಶದ ಸಮಸ್ಯೆಗಳು ತುಂಬಾ ಕ್ಲಿಷ್ಟಕರವಾಗಿದ್ದು, ಇವುಗಳನ್ನ ವಿಶೇಷವಾಗಿ ಪರಿಗಣಿಸಬೇಕಾಗುತ್ತದೆ. ಸಮಸ್ಯೆಯನ್ನ ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಮಕ್ಕಳು ಇದರಿಂದ ಹೆಚ್ಚು ಬಾಧೆ ಅನುಭವಿಸದಂತೆ ತಡೆಯಬಹುದಾಗಿದೆ. ನಾವು ಇಲ್ಲಿಯವೆಗೂ 500ಕ್ಕೂ ಹೆಚ್ಚು ಕಿಡ್ನಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದೇವೆ. ಈ ಕಾರಣಕ್ಕೆ ವಿಶೇಷ ತಜ್ಞರ ತಂಡವನ್ನ ಒಳಗೊಂಡ ಈ ಪ್ರತ್ಯೇಕ ಕ್ಲಿನಿಕ್​ನ್ನು ಈ ಸಂದರ್ಭದಲ್ಲಿ ಪ್ರಾರಂಭಿಸಲಾಗಿದೆಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.