ಬೆಂಗಳೂರು: ಚಿತ್ರಮಂದಿರಗಳಿಗೆ ಶೇ. 50ರಷ್ಟು ಮಾತ್ರ ಪ್ರೇಕ್ಷರಿಗೆ ಅವಕಾಶ ನೀಡಿರುವ ಬಗ್ಗೆ ಸಿಎಂ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಮತ್ತೆ ನಿರ್ಧಾರ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸೂಚಿಸಿದೆ. ನಂತರ ರಾಜ್ಯಗಳು ಕ್ರಮ ಕೈಗೊಳ್ಳಲು ಸೂಚಿಸಿದೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ನಾವು SOP ಬಿಡುಗಡೆ ಮಾಡಿದ್ದೇವೆ. ಫೆ. 28ವರೆಗೂ ಶೇ. 50ರಷ್ಟು ತುಂಬಬಹುದು. ನೆರೆಯ ಕೇರಳದಲ್ಲಿ ಪ್ರತೀ ದಿನ 5 ಸಾವಿರ ಕೇಸ್ ದಾಖಲಾಗುತ್ತಿವೆ. ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ ಎಂದು ಸಮರ್ಥಿಸಿಕೊಂಡರು.
ಓದಿ: ಬಸ್ನಲ್ಲಿ ಫುಲ್ ರಶ್ ಇರತ್ತೆ.. ಚಿತ್ರಮಂದಿರಕ್ಕೆ ಯಾಕೆ ನಿರ್ಬಂಧ...? ಸರ್ಕಾರಕ್ಕೆ ಸ್ಯಾಂಡಲ್ವುಡ್ ಪ್ರಶ್ನೆ
ಮತ್ತೊಮ್ಮೆ ತಾಂತ್ರಿಕ ಸಲಹ ಸಮಿತಿ ಜೊತೆ ಸಭೆ ಮಾಡುತ್ತೇನೆ. ಅವರ ಸಲಹೆ ಮೇರೆಗೆ ಅಂತಿಮ ನಿರ್ಧಾರ ಮಾಡುತ್ತೇನೆ. ಚಿತ್ರಮಂದಿರ ಅಂದ್ರೆ ಕ್ಲೋಲ್ಡ್, ಎಸಿ ಇರೋ ಜಾಗ. ಬಹಳ ಬೇಗನೆ ಸೋಂಕು ಹರಡಲಿದೆ. ರಾಜಕೀಯದ ಸಭೆ ಸರಿ ಅಂತ ನಾವು ಹೇಳಿಲ್ಲ. ಆದರೆ ಹೊರಗಡೆ ಮಾಡುತ್ತಿದ್ದಾರೆ. ಆದ್ರೆ ಅದೂ ಸರಿ ಅಂತ ಹೇಳಲ್ಲ. ನಿಯಂತ್ರಣ ಮಾಡೋದು ನಮ್ಮ ಸರ್ಕಾರದ ಜವಾಬ್ದಾರಿ. ನಾನು ಮಂತ್ರಿಯಾಗಿ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲ್ಲ ಎಂದು ವಿವರಿಸಿದರು.