ಬೆಂಗಳೂರು: ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳು ಆನ್ಲೈನ್ ಹಾಗೂ ಆಫ್ ಲೈನ್ ಕ್ಲಾಸ್ಗಳನ್ನ ಸ್ಥಗಿತಗೊಳಿಸಿವೆ. ಸುಮಾರು 15 ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಇಂದಿನಿಂದ ಆನ್ಲೈನ್ ಕ್ಲಾಸ್ ಬಂದ್ ಆಗಿರುವುದಕ್ಕೆ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಷಕರಲ್ಲಿ ಹೆಚ್ಚಿದ ಆತಂಕ: ಪರೀಕ್ಷೆ ಹತ್ತಿರ ಬರ್ತಿದೆ, ಹೀಗಾದ್ರೆ ಹೇಗೆ? ಮಕ್ಕಳ ಭವಿಷ್ಯದ ಬಗ್ಗೆ ಸರ್ಕಾರ ಯೋಚಿಸಬೇಕು. ಆನ್ಲೈನ್ ಕ್ಲಾಸ್ ಇರುವುದಿಲ್ಲ ಅಂತ ಮೆಸೇಜ್ ಬಂದಿದೆ. ಶಿಕ್ಷಣ ಸಚಿವರು ಏನು ಮಾಡ್ತಿದ್ದಾರೆ? ಖಾಸಗಿ ಶಾಲೆಗಳ ಬೇಡಿಕೆ ಏನು ಇದೆಯೋ ಅದನ್ನ ಬಗೆಹರಿಸಬೇಕು. ಸುಮ್ಮನೆ ಪೋಷಕರಿಗ್ಯಾಕೆ ತೊಂದರೆ ಕೊಡ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಕೊರೊನಾ ಟೈಂನಲ್ಲಿ ಮಕ್ಕಳು ಶಾಲೆಗೆ ಹೋಗೋಕೆ ಆಗುತ್ತಿಲ್ಲ. ಈಗ ಆನ್ಲೈನ್ ಕ್ಲಾಸ್ ಕೂಡ ನಿಲ್ಲಿಸಿದರೆ, ಮಕ್ಕಳ ಭವಿಷ್ಯ ಏನಾಗಬೇಕು ಅಂತ ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ.
ಎರಡು ಹಂತದಲ್ಲಿ ಪ್ರತಿಭಟನೆಗೆ ಮುಂದಾದ ಖಾಸಗಿ ಶಿಕ್ಷಣ ಸಂಸ್ಥೆಗಳು:
ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಕರೆ ಕೊಟ್ಟಿರುವ ಪ್ರತಿಭಟನೆಗೆ, ರಾಜ್ಯದಲ್ಲಿ ಒಟ್ಟು 12,800 ಶಾಲೆಗಳು ಶೈಕ್ಷಣಿಕ ಚಟುವಟಿಕೆಯನ್ನ ನಿಲ್ಲಿಸಿವೆ. ಸರ್ಕಾರಕ್ಕೆ ಡಿ.31ರವರೆಗೆ ಡೆಡ್ ಲೈನ್ ಕೊಟ್ಟಿರುವ ರುಪ್ಸಾ, ಬೇಡಿಕೆ ಈಡೇರಿಸದಿದ್ರೆ ಜನವರಿ 6ರಿಂದ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿದೆ.
ಓದಿ:ನಾಳೆಯಿಂದ ಖಾಸಗಿ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆ ಬಂದ್: ಆನ್ಲೈನ್ ಕ್ಲಾಸ್ ಇಲ್ಲ
ರುಪ್ಸಾ ಒಕ್ಕೂಟದ ಪ್ರಮುಖ ಬೇಡಿಕೆಗಳೇನು?:
- ಮೂರುವರೆ ಸಾವಿರ ಮರು ನೋಂದಣಿಗೆ ಸಲ್ಲಿಸಿದ ಶಾಲೆಗಳಿಗೆ ಅನುಮತಿ ಕೊಡಿ.
- ಅದಾಲತ್ ರೂಪದಲ್ಲಿ ಏಕಕಾಲಕ್ಕೆ ಅರ್ಜಿಗಳನ್ನ ವಿಲೇವಾರಿ ಮಾಡಿ.
- 124 ಶಾಲೆಗಳನ್ನು ಮುಚ್ಚುವ ಆಲೋಚನೆ ನಿರ್ಧಾರ ಹಿಂಪಡೆಯಬೇಕು.
- 25 ವರ್ಷಗಳಿಂದ ಅನುದಾನಕ್ಕೆ ಒಳಪಡದೆ ಇದ್ದ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು.
- ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು.
- ಆರ್ಥಿಕ ಸಂಕಷ್ಟದಲ್ಲಿರುವ ಶಾಲೆಗಳ ವಾಹನಗಳ ಸಾಲಗಳ ಮರುಪಾತಿ ಮುಂದೂಡಬೇಕು.
- ಶಾಲೆಗಳ ಕಟ್ಟಡಗಳು ಸುರಕ್ಷತಾ ಪ್ರಮಾಣ ಪತ್ರದ ಅಗತ್ಯತೆಯ ಕುರಿತು ಸುತ್ತೋಲೆ ಮರು ಪರಿಶೀಲನೆಗೆ ಒತ್ತಾಯ ಮಾಡಲಾಗಿದೆ.