ಕೆ.ಆರ್.ಪುರಂ : ಕ್ಷೇತ್ರದ ಟಿಸಿಪಾಳ್ಯ ಸಂತ ಅಂತೋಣಿಯವರ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಳಗ್ಗೆಯಿಂದ ಸಾಕಷ್ಟು ಜನ ಚರ್ಚ್‌ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಚರ್ಚ್‌ನ ಹೊರಗೆ ದೊಡ್ಡದಾದ ಏಸು ಕ್ರಿಸ್ತ ಹುಟ್ಟಿದ ಕ್ರಿಬ್ ಅನ್ನು ನಿರ್ಮಿಸಲಾಗಿದೆ. ಕ್ರಿಬ್ ಮುಂದೆ ಬಾಲ ಯೇಸುಮೂರ್ತಿಯನ್ನು ದರ್ಶನಕ್ಕೆ ಇಡಲಾಗಿದೆ. ಎಲ್ಲರು ದೇವರಿಗೆ ಮೇಣದ ಬತ್ತಿ ಬೆಳಗಿಸುವ ಮೂಲಕ ಯೇಸು ಜನ್ಮ ದಿನವನ್ನು ಸ್ವಾಗತಿಸಿದರು.
ಕೆಆರ್‌ಪುರದ ಸುತ್ತಮುತ್ತಲಿನ ಭಾಗಗಳು ಸೇರಿದಂತೆ ವಿವಿಧೆಡೆಯಿಂದ ಕ್ರೈಸ್ತ ಬಾಂಧವರು ಚರ್ಚ್‌ಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಹಬ್ಬದ ಅಂಗವಾಗಿ ಸಚಿವ ಭೈರತಿ ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಸುಮಾರು 10 ಸಾವಿರ ಜನರಿಗೆ ಕೇಕ್ ವಿತರಣೆ ಮಾಡಲಾಗಿದೆ.
ಈ ವೇಳೆ ಮಾಜಿ ಪಾಲಿಕೆ ಸದಸ್ಯ ಪಿ.ಜೆ.ಅಂಥೋಣಿ ಸ್ವಾಮಿ ಮಾತನಾಡಿ, ಕೊರೊನಾದಿಂದ ಕಳೆದೆರಡು ವರ್ಷಗಳಿಂದ ಹಬ್ಬದ ವಾತಾವರಣ ಇಲ್ಲದಂತಾಗಿತ್ತು. ಈ ವರ್ಷ ಸಚಿವ ಭೈರತಿ ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ್ಯಾಂತ ಯಾವುದೇ ಜಾತಿ, ಧರ್ಮವಿಲ್ಲದೆ ಪ್ರತಿ ಕುಟುಂಬಕ್ಕೂ ಸುಮಾರು ಒಂದು ಲಕ್ಷ ಕೇಕ್ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಕೆ.ಆರ್.ಪುರಂ ವಾರ್ಡ್‌ನಲ್ಲಿ ಸಹ ಹತ್ತು ಸಾವಿರ ಜನರಿಗೆ ಕೇಕ್ಗಳನ್ನು ವಿತರಣೆ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಯೇಸು ಕ್ರಿಸ್ತ ಉತ್ತಮ ಆರೋಗ್ಯ ನೀಡಲಿ, ದೇಶದಿಂದ ಕೊರೊನಾ ಮುಕ್ತಿ ನೀಡಲೆಂದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಮುಂದಿನ ಚುನಾವಣೆವರೆಗೂ ಬೊಮ್ಮಾಯಿಯವರೇ ಸಿಎಂ: ಕಟೀಲ್