ಬೆಂಗಳೂರು: ಕೊರೊನಾ ಸೋಂಕಿನಿಂದ ಮಕ್ಕಳು ಬರೋಬ್ಬರಿ 21 ತಿಂಗಳ ಕಾಲ ಶಾಲಾ-ಕಾಲೇಜಿನತ್ತ ಹೋಗದೆ ಮನೆಯಲ್ಲೇ ಉಳಿಯುವಂತಾಗಿತ್ತು. ಕೋವಿಡ್ ತೀವ್ರತೆ ಕಡಿಮೆ ಆಗಿ, ಶಾಲೆ ಪುನಾರಂಭ ಆಯ್ತು ಎನ್ನುವಾಗಲೇ ಸೋಂಕು ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ.
ಸದ್ಯ ರಾಜ್ಯದಲ್ಲಿ ಕೆಲ ಮೆಡಿಕಲ್ ಕಾಲೇಜುಗಳು ಸೇರಿದಂತೆ ಕೆಲ ಶಾಲೆಗಳ ಮಕ್ಕಳಲ್ಲೂ ಸೋಂಕು ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ. ರಾಜ್ಯದ ಒಟ್ಟೂ 34 ಶೈಕ್ಷಣಿಕ ಜಿಲ್ಲೆಯ 130 ಮಕ್ಕಳಿಗೆ ಕೋವಿಡ್ ತಗುಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯು ಅಂಕಿ-ಅಂಶ ಬಿಡುಗಡೆ ಮಾಡಿದೆ. 1ರಿಂದ 10ನೇ ತರಗತಿಯ ಮಕ್ಕಳಿಗೆ ಸೋಂಕು ತಗುಲಿದ್ದು, ಈಗಾಗಲೇ ಹಲವರು ಗುಣಮುಖರಾಗಿದ್ದಾರೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ:
1) ಬೆಂಗಳೂರು ಉತ್ತರ - 2 ಪ್ರಕರಣ
2) ಚಾಮರಾಜನಗರ - 7
3) ಚಿಕ್ಕಮಗಳೂರು - 92
4) ಚಿತ್ರದುರ್ಗ -2
5) ಧಾರವಾಡ - 2
6) ಗದಗ - 1
7) ಹಾಸನ - 4
8) ಕೊಡಗು - 11
9) ಮಧುಗಿರಿ - 5
10) ಮೈಸೂರು - 2
11) ಶಿವಮೊಗ್ಗ - 1
12) ಶಿರಸಿ -1
ತುಮಕೂರಿನಲ್ಲಿ ಕಳೆದ ಜುಲೈ ತಿಂಗಳಲ್ಲಿ 35 ವಿದ್ಯಾರ್ಥಿಗಳಿಗೆ ಸೋಂಕು ತಗುಲಿತ್ತು, ಎಲ್ಲ ಮಕ್ಕಳೂ ಗುಣಮುಖರಾಗಿದ್ದಾರೆ.
ತರಗತಿವಾರು ಸೋಂಕಿತರ ಸಂಖ್ಯೆ:
ತರಗತಿ - ಮಕ್ಕಳು
1ನೇ ತರಗತಿ - 2
2ನೇ ತರಗತಿ - 1
3ನೇ ತರಗತಿ - 4
4ನೇ ತರಗತಿ - 00
5ನೇ ತರಗತಿ - 1
6ನೇ ತರಗತಿ - 2
7ನೇ ತರಗತಿ - 00
8ನೇ ತರಗತಿ - 14
9ನೇ ತರಗತಿ - 3
10ನೇ ತರಗತಿ - 8
ಅಲ್ಲದೆ, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯ ಮಕ್ಕಳಲ್ಲೇ ಹೆಚ್ಚು ಸೋಂಕು ಹರಡಿದೆ. ಸೋಂಕಿತ ಪ್ರಕರಣಗಳಲ್ಲಿ ಖಾಸಗಿ ಶಾಲೆಗಳು ಬೆರಳೆಣಿಕೆಯಷ್ಟು ಇದ್ದರೆ, ಸರ್ಕಾರಿ ಶಾಲೆಗಳು ಹೆಚ್ಚಿವೆ.
ಇದನ್ನೂ ಓದಿ: ಪೆನ್ನು ಮಾರಾಟ ಮಾಡ್ತಿದ್ದ ಬಾಲಕಿಗೆ iPhone ಗಿಫ್ಟ್ ನೀಡಿದ ತೇಜ್ ಪ್ರತಾಪ್