ETV Bharat / state

ಹಿಂದುತ್ವದ ಮೂಲಕ ಹಳೆ ಮೈಸೂರು ಗೆಲ್ಲುತ್ತೇವೆ: ಡಿ.ವಿ.ಸದಾನಂದ ಗೌಡ - election preplan

ಹಳೆ ಮೈಸೂರು ಭಾಗಗಳಲ್ಲಿ ಕಮಲ ಅರಳಿಸಲು ರಾಜ್ಯಕ್ಕೆ ರಾಜಕೀಯ ಚಾಣಕ್ಯ ಅಮಿತ್ ಶಾ ಆಗಮಿಸುತ್ತಿದ್ದಾರೆ ಎಂದು ಸದಾನಂದ ಗೌಡ ಹೇಳಿದರು.

old-mysore-will-be-won-through-hindutva-dv-sadananda-gowda
ಹಿಂದುತ್ವದ ಮೂಲಕ ಹಳೆ ಮೈಸೂರು ಗೆಲ್ಲುತ್ತೇವೆ: ಡಿ.ವಿ ಸದಾನಂದಗೌಡ
author img

By

Published : Dec 29, 2022, 8:03 PM IST

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಡಿವಿಎಸ್‌ ಸುದ್ದಿಗೋಷ್ಟಿ

ಬೆಂಗಳೂರು: ಹಳೆ ಮೈಸೂರು ಭಾಗಕ್ಕೆ ಹಿಂದುತ್ವ ತಲುಪಿಸುವಲ್ಲಿ ಈವರೆಗೂ ನಾವು ವಿಫಲವಾಗಿದ್ದೆವು. ಉಡುಪಿ, ದಕ್ಷಿಣ ಕನ್ನಡದಲ್ಲಿ ಪಕ್ಷ ಗೆದ್ದಂತೆ ಹಳೆ ಮೈಸೂರು ಭಾಗದಲ್ಲಿಯೂ ಹಿಂದುತ್ವದ ಮೂಲಕವೇ ಬಿಜೆಪಿ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಂಡು ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲಿದೆ. ಇದಕ್ಕೆ ಅಮಿತ್ ಶಾ ಮಂಡ್ಯ ಭೇಟಿ ಸಹಕಾರಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಳೆ ಮೈಸೂರು ಭಾಗದ 40 ಕ್ಷೇತ್ರದಲ್ಲಿ ನಮ್ಮ ನೆಲೆ ಅಷ್ಟಾಗಿ ಇರಲಿಲ್ಲ ಎನ್ನುವುದನ್ನು ನಾವು ಒಪ್ಪುತ್ತೇವೆ. ಆದರೆ ಈಗ ನಮ್ಮ ಟಾರ್ಗೆಟ್ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದಾಗಿದೆ. ಅದರಲ್ಲಿ 89 ಕ್ಷೇತ್ರಗಳು ಹಳೆ ಮೈಸೂರು ಪ್ರಾಂತ್ಯದಲ್ಲಿ ಬರಲಿವೆ.

ಇನ್ನು, ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಏಕೆ ಎನ್ನುವ ಪ್ರಶ್ನೆ ಬರುತ್ತಿದೆ. ಅಶ್ವತ್ಥನಾರಾಯಣರನ್ನು ಟೀಕಿಸುತ್ತಿದ್ದಾರೆ. ಆದರೆ, ದೇವೇಗೌಡರಿಗೆ ಈ ವಿಚಾರ ಮೊದಲು ಹೊಳೆಯಬೇಕಿತ್ತು. ರಾಮನಗರದಲ್ಲಿ ರಾಮಮಂದಿರ ಕಟ್ಟಬೇಕು ಎಂದು ಗೌಡರಿಗೇ ಅನ್ನಿಸಬೇಕಿತ್ತು. ಯಾಕೆಂದರೆ ನಮ್ಮೆಲ್ಲರಿಗಿಂತ ಪೂಜೆ, ಪುನಸ್ಕಾರವನ್ನು ಅವರೇ ಹೆಚ್ಚು ಮಾಡುತ್ತಾರೆ. ಆದರೆ ಬಹುಶಃ ಅವರಿಗೆ ಹೆದರಿಕೆ ಇರಬೇಕು ಎನಿಸುತ್ತದೆ. ಅದಕ್ಕೆ ರಾಮ ಮಂದಿರದ ಯೋಚನೆ ಮಾಡಲಿಲ್ಲ. ಅಲ್ಲದೇ ಅವರು, ನಾನು ಹುಟ್ಟಿದರೆ ಅಲ್ಲಿ ಹುಟ್ಟುತ್ತೇನೆ ಎನ್ನುತ್ತಾರೆ (ಮುಸ್ಲಿಂ ಆಗಿ) ಎಂದು ದೇವೇಗೌಡರಿಗೆ ಟಾಂಗ್ ಕೊಟ್ಟರು.

ಬದಲಾವಣೆ ಜಗದ ನಿಯಮ. ಹೊಸ ವಿಚಾರಕ್ಕೆ ಅನುಗುಣವಾಗಿ ಬದಲಾವಣೆಯಾಗಲಿದೆ. ಅದರ ಆಧಾರದಲ್ಲಿಯೇ ಈ ಬಾರಿಯ ಚುನಾವಣೆಯೂ ಆಗುತ್ತದೆ. ಎಲ್ಲವನ್ನೂ ಈಗಲೇ ಹೇಳುವುದಿಲ್ಲ. ನಮ್ಮ ಕೇಂದ್ರದವರು ಇದನ್ನೆಲ್ಲಾ ನಿಶ್ಚಯಿಸಲಿದ್ದಾರೆ. ಗುಜರಾತ್ ಮಾದರಿಯಂತೆ ಇಲ್ಲಿಯೂ ಮ್ಯಾಜಿಕ್ ನಡೆಯಲಿದೆ ಎಂದು ಸೂಚ್ಯವಾಗಿ ಹೇಳಿದರು.

ಅಮಿತ್ ಶಾ ಪ್ರವಾಸ ಸ್ವಾಮಿ ಕಾರ್ಯ, ಸ್ವಕಾರ್ಯದಂತೆ: ನಮ್ಮ ಪಕ್ಷದಲ್ಲಿ ಪೊಲಿಟಿಕಲ್ ಮ್ಯಾನೇಜ್​ಮೆಂಟ್​ ಮಾಡುವ ರಾಜಕೀಯ ಚಾಣಕ್ಯ ಅಮಿತ್ ಶಾ ಅವರು ಎರಡು ದಿನಗಳ ಕಾಲ ರಾಜ್ಯದಲ್ಲಿದ್ದುಕೊಂಡು ಹಾಲು ಉತ್ಪಾದನೆ ಹೆಚ್ಚಿರುವ ಭಾಗದಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದೇ ವೇಳೆ ಪಕ್ಷ ಸಂಘಟನೆಯ ಕೆಲಸದಲ್ಲೂ ತೊಡಗುತ್ತಾರೆ. ಸ್ವಾಮಿ ಕಾರ್ಯ ಮತ್ತು ಸ್ವಕಾರ್ಯ ಎರಡು ಆಗುತ್ತದೆ ಎಂದು ಡಿವಿಎಸ್ ಹೇಳಿದರು.

ಗುಜರಾತ್​ನಂತೆ ಅಮಿತ್​ ಶಾ ಇಲ್ಲೂ ತಂತ್ರ ಹೆಣೆಯಲಿದ್ದಾರೆ: ಚುನಾವಣೆಗೆ ಪೂರ್ವ ಸಿದ್ದತೆ ಮಾಡಲ್ಲ, ನಾವು ಯಾವಾಗಲೂ ಚುನಾವಣೆಗೆ ಸಿದ್ದವಾಗಿಯೇ ಇರುತ್ತೇವೆ. ಆದರೆ ನಮಗೆ ನಾವು ಮಾಡಿದ ಕೆಲಸವನ್ನು ಜನರಿಗೆ ಹೇಳುವ ಹವ್ಯಾಸವಿದೆ, ಅದರಂತೆ ನಮ್ಮ ಪ್ರಗತಿಯ, ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಅನ್ನು ಪ್ರತಿ ವರ್ಷ ಜನರ ಮುಂದಿಡುತ್ತೇವೆ. ಅದರಂತೆ ಈಗಲೂ ರಿಪೋರ್ಟ್ ಕಾರ್ಡ್ ಅನ್ನು ಜನತೆಯ ಮುಂದಿಡಲು ಅಮಿತ್ ಶಾ ಬರಲಿದ್ದಾರೆ. ಗುಜರಾತ್ ರೀತಿ ಕರ್ನಾಟಕದಲ್ಲಿಯೂ ಅಮಿತ್ ಶಾ ತಂತ್ರಗಳ ಹೆಣೆಯುವರು ಎಂದರು.

ಬೂತ್​ ವಿಜಯ್​ ಅಭಿಯಾನ: ಡಿ.30 ರಂದು ಮಂಡ್ಯದಲ್ಲಿ 1 ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡುತ್ತಿದ್ದು, 31 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 2ರಿಂದ ಜನವರಿ 15ರ ತನಕ ನಡೆಯಲಿರುವ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ 8500 ಬೂತ್, 25 ಸಾವಿರ ಕಾರ್ಯಕರ್ತರಿದ್ದು ಅವರನ್ನು ಚುರುಕುಗೊಳಿಸುವ ಕೆಲಸ ಮಾಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದೆ. 50 ಲಕ್ಷ ಮನೆಯ ಮೇಲೆ ಧ್ವಜ ಹಾರಿಸುವುದು, ಯುವ ಮತದಾರರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿದೆ.

18 ವರ್ಷ ತುಂಬಿದ ಎಲ್ಲರ ಹೆಸರು ಮತ ಪಟ್ಟಿಯಲ್ಲಿ ಬರಬೇಕು. ಶೇ.100ರಷ್ಟು ಮತದಾನ ಆಗಬೇಕು ಎನ್ನುವ ಜಾಗೃತಿ ಮೂಡಿಸುವುದಕ್ಕೆ ವೇಗ ನೀಡುವ ಕೆಲಸ ನಡೆಸಲಾಗುತ್ತದೆ. ಈ ಕಾರ್ಯಕ್ರಮ ಪ್ರಜಾತಂತ್ರದ ಮೌಲ್ಯ ಹೆಚ್ಚು ಮಾಡಲಿದೆ. ಇದಕ್ಕೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ ಎಂದು ಸದಾನಂದ ಗೌಡ ತಿಳಿಸಿದರು.

ಇದನ್ನೂ ಓದಿ: ಹಳೆ ಮೈಸೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು: ಅಮಿತ್ ಶಾ ಚಾಣಾಕ್ಷ ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.