ETV Bharat / state

ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾದ ಹಳೆ ಮೈಸೂರು: ಹೊಸ ಯೋಜನೆ ರೂಪಿಸಲು ಮುಂದಾದ ಅಮಿತ್ ಶಾ...

ಹಳೇ ಮೈಸೂರು ಭಾಗಕ್ಕೆ ಬಿಜೆಪಿ ಲಗ್ಗೆ-ಒಕ್ಕಲಿಗರ ಪ್ರಾಬಲ್ಯ ಇರುವ ಪ್ರದೇಶದಲ್ಲಿ ಕಮಲ ಅರಳಿಸಲು ಅಮಿತ್​ ಶಾ ಪ್ಲಾನ್​- ಸಕ್ಸಸ್​ ಆಗ್ತಾರಾ ಬಿಜೆಪಿ ಚುನಾವಣಾ ಚಾಣಕ್ಯ?

Amita Shah blessed by Nirmalananda Sri
ನಿರ್ಮಲಾನಂದ ಶ್ರೀಗಳಿಂದ ಆಶೀರ್ವಾದ ಪಡೆದ ಅಮಿತ ಶಾ
author img

By

Published : Jan 1, 2023, 7:03 PM IST

ಬೆಂಗಳೂರು: ಹಳೆಮೈಸೂರು ಭಾಗದಲ್ಲಿ ಬಿಜೆಪಿ ನೆಲೆ ಭದ್ರಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಬಿಜೆಪಿ ಚಾಣಾಕ್ಯ ಅಮಿತ್ ಶಾಗೆ ಮನವರಿಕೆಯಾಗಿದ್ದು, ಈಗಾಗಲೇ ರೂಪಿಸಿದ್ದ ಯೋಜನೆಗಳಲ್ಲಿ ಕೆಲ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ. ಹೊಸ ಗುರಿಗಳನ್ನು ನೀಡಿ ಸಮಯ ನಿಗದಿಪಡಿಸಿದ್ದು,ಮತ್ತೆ ಮತ್ತೆ ಹಳೆ ಮೈಸೂರು ಭಾಗವನ್ನು ಕೇಂದ್ರೀಕರಿಸಿ ಚುನಾವಣಾ ಪ್ರಚಾರ ನಡೆಸಲು ನಿರ್ಧರಿಸಿದ್ದಾರೆ. ಹಾಗಾಗಿ ತಿಂಗಳಾಂತ್ಯಕ್ಕೆ ಮತ್ತೆ ಅಮಿತ್ ಶಾ ಆಗಮಿಸುವುದು ಖಚಿತವಾಗಿದೆ.

ಹಳೆ ಮೈಸೂರು ಬಿಜೆಪಿಗೆ ಕಬ್ಬಿಣದ ಕಡಲೆ:ಹಳೆ ಮೈಸೂರು ಭಾಗ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆ ಎನ್ನುವುದು ಎರಡು ದಿನಗಳ ರಾಜ್ಯ ಪ್ರವಾಸದ ವೇಳೆ ಅಮಿತ್ ಶಾಗೆ ಮನವರಿಕೆಯಾಗಿದೆ. ತನ್ನದೇ ಆದ ಲೆಕ್ಕಾಚಾರದೊಂದಿಗೆ ಆಗಮಿಸಿದ್ದ ಅಮಿತ್ ಶಾ, ಒಕ್ಕಲಿಗ ಪ್ರಾಬಲ್ಯ ಹೊಂದಿರುವ ದಕ್ಷಿಣ ಕರ್ನಾಟಕದಲ್ಲಿ ಕಮಲ ಅರಳಿಸುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದ ಅಗ್ರಪೀಠವಾಗಿರುವ ಆದಿಚುಂಚನಗಿರಿ ಮಠದ ಆಶ್ರಯ ದೇವೇಗೌಡರ ಕುಟುಂಬ ಮತ್ತು ಡಿಕೆ ಶಿವಕುಮಾರ್​ಗೆ ಇದ್ದು, ಅದನ್ನು ಬೇಧಿಸಿ ಮುನ್ನಡೆಯುವುದು ಕಷ್ಟಸಾಧ್ಯ ಎನ್ನುವುದು ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ಸ್ಪಷ್ಟವಾಗಿದೆ.

ಒಕ್ಕಲಿಗ ಟ್ರಂಪ್ ಕಾರ್ಡ್: ದೇವೇಗೌಡರಿಗೆ ಇರುವ ಜನಬೆಂಬಲವನ್ನು ಛಿದ್ರ ಮಾಡಲು ಒಕ್ಕಲಿಗ ಟ್ರಂಪ್ ಕಾರ್ಡ್ ಮುಖ್ಯವಾಗಿದೆ. ಅದಕ್ಕೆ ಆದಿಚುಂಚನಗಿರಿ ಮಠದ ಆಶೀರ್ವಾದವೂ ಬೇಕಿದೆ. ಹಾಗಾಗಿ ಅಮಿತ್ ಶಾ ಮಂಡ್ಯದಲ್ಲಿ ನಿರ್ಮಲಾನಂದ ಶ್ರೀಗಳ ಜತೆಗೆ ವೇದಿಕೆ ಹಂಚಿಕೊಂಡರೂ ಬೆಂಗಳೂರಿಗೆ ಬಂದ ನಂತರ ಮತ್ತೆ ಆದಿಚುಂಚನಗಿರಿ ಶಾಖಾಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಕೆಲ ಕಾಲ ಶ್ರೀಗಳ ಜತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು ವಿಶೇಷ. ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆದಿರಬಹುದು ಎನ್ನಲಾಗ್ತಿದೆ.

ಅಮಿತ್ ಶಾ ಪ್ರತ್ಯೇಕ ಸಭೆ : ಇನ್ನು ಹಳೆ ಮೈಸೂರು ಭಾಗದ ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾಧ್ಯಕ್ಷರಿಂದ ಪಕ್ಷ ಸಂಘಟನೆ ಕುರಿತ ವರದಿಯನ್ನೂ ಪಡೆದು ಕೊಂಡಿದ್ದಾರೆ. ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಹಳೆ ಮೈಸೂರು ಭಾಗದ ಸಂಘಟನೆ ಕುರಿತು ಇದೇ ಮೊದಲ ಬಾರಿಗೆ ಅಮಿತ್ ಶಾ ಪ್ರತ್ಯೇಕ ಸಭೆ ನಡೆಸಿದ್ದು, ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರು ನೀಡಿದ ವರದಿ ನೋಡಿ ಅಮಿತ್ ಶಾ ಅಸಮಧಾನಗೊಂಡಿದ್ದಾರೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಈ ಭಾಗದಲ್ಲಿ ಸಂಘಟನೆ ಶಕ್ತಿಯುತವಾಗಿಲ್ಲ, ಕೇಡರ್ ಬೇಸ್ಡ್ ಪಾರ್ಟಿ ನಮ್ಮದು, ಆದರೆ ಇಲ್ಲಿ ಕೇಡರ್ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಂಘಟನಾತ್ಮಕ ಚಟುವಟಿಕೆ ಕುರಿತು ಗಮನ ಹರಿಸುವಂತೆ ತಾಕೀತು ಮಾಡಿದ್ದಾರೆ.

ಬಿಜೆಪಿ ಸಂಘಟಣೆಗೆ ಆದ್ಯತೆ : ಈಗಿರುವ ಸ್ಥಿತಿಯಲ್ಲಿ ಚುನಾವಣೆಗೆ ಹೋದರೆ ಹಳೆ ಮೈಸೂರು ಭಾಗದಲ್ಲಿ ನಿರಾಸೆ ಕಟ್ಟಿಟ್ಟಬುತ್ತಿಯಾಗಿದೆ. ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ. ಬೂತ್ ವಿಜಯ ಅಭಿಯಾನವನ್ನು ಈ ಭಾಗದಲ್ಲಿ ಸಮರ್ಥವಾಗಿ ಅನುಷ್ಠಾನಕ್ಕೆ ತರುವ ಮೂಲಕ ಮನೆ ಮನೆಗೆ ಬಿಜೆಪಿಯನ್ನು ತಲುಪಿಸಬೇಕು, ಕಮಲ ಧ್ವಜ ಹಾರಿಸುವ ಮೂಲಕ ಮನೆ ಮನೆಯಲ್ಲೂ ಕೇಸರಿ ವಾತಾವರಣ ಸೃಷ್ಟಿಸಬೇಕು ಎಂದು ಸಚಿವರು, ಜಿಲ್ಲಾ ಪದಾಧಿಕಾರಿಗಳಿಗೆ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಳೆ ಮೈಸೂರು ಪ್ರೋಗ್ರೆಸ್ ರಿಪೋರ್ಟ್ : ಜನವರಿ ಅಂತ್ಯಕ್ಕೆ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅಷ್ಟರಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಹಳೆ ಮೈಸೂರಿನಲ್ಲಿ ವಾತಾವರಣ ಬದಲಾವಣೆಯಾಗಿರಬೇಕು ಎಂದು ಸೂಚಿಸಿದ್ದು, ಪ್ರತಿ ಬಾರಿ ರಾಜ್ಯಕ್ಕೆ ಆಗಮಿಸಿದ ವೇಳೆಯೂ ಹಳೆ ಮೈಸೂರಿಗೆ ಪ್ರೋಗ್ರೆಸ್ ರಿಪೋರ್ಟ್ ನೋಡುತ್ತೇನೆ. ಯಾವ ಕಾರಣಕ್ಕೂ ನಿರ್ಲಕ್ಷ್ಯ ಸಹಿಸಲ್ಲ, ನಾವು ಬಹುಮತ ಪಡೆಯಬೇಕು ಎಂದರೆ ಹಳೆ ಮೈಸೂರು ನಮಗೆ ಅನಿವಾರ್ಯ ಹಾಗಾಗಿ ಮೈಮರೆಯದೆ ಎಲ್ಲರೂ ಕೆಲಸ ಮಾಡಬೇಕು ಎಂದು ಹಳೆ ಮೈಸೂರು ಭಾಗದ ನಾಯಕರಿಗೆ ತಿಳಿಸಿದ್ದಾರೆ.

ದಳಪತಿಗಳ ಸಾಮ್ರಾಜ್ಯ ಪ್ರಬಲ: ಹಾಸನ, ಮಂಡ್ಯದಲ್ಲಿ ದಳಪತಿಗಳ ಸಾಮ್ರಾಜ್ಯ ಪ್ರಬಲವಾಗಿದ್ದು, ರಾಮನಗರದಲ್ಲಿ ದಳಪತಿಗಳಿಗೆ ಕಾಂಗ್ರೆಸ್ ಪೈಪೋಟಿ ಒಡ್ಡಿದೆ. ಗ್ರಾಮಾಂತರದಲ್ಲಿ ಕಾಂಗ್ರೆಸ್ ಭದ್ರವಾಗಿದೆ. ಚಾಮರಾಜನಗರದಲ್ಲಿಯೂ ದಳಕ್ಕೆ ಬಲವಿದೆ. ಕೇವಲ ಮೈಸೂರು ನಗರದಲ್ಲಿ ಮಾತ್ರ ಬಿಜೆಪಿ ಪ್ರಬಲವಾಗಿದೆ. ಈ ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ವತಂತ್ರವಾದ ಅಸ್ತಿತ್ವ ಹೊಂದಿದ್ದು, ಅದನ್ನು ಛಿದ್ರಗೊಳಿಸುವುದು ಬಿಜೆಪಿಗೆ ಕಷ್ಟದ ಕೆಲಸವಾಗಿದೆ.

ಗೌಡರು ಕುಟುಂಬ ಭೇದಿಸುವುದು ಸುಲಭವಲ್ಲ : ಗೌಡರು ಕುಟುಂಬದ ಹಿಡಿತದಿಂದ ಮಂಡ್ಯ,ಹಾಸನ ಕಸಿಯುವುದಾಗಲಿ, ಕನಕಪುರದಲ್ಲಿರುವ ಡಿಕೆ ಶಿವಕುಮಾರ್ ಕುಟುಂಬದ ಅಧಿಪತ್ಯವನ್ನು ಬೇಧಿಸುವುದಾಗಲಿ ತಕ್ಷಣಕ್ಕೆ ಆಗುವ ಕೆಲಸವಲ್ಲ. ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧ ಅಮಿತ್ ಶಾ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಆ ಮೂಲಕ ಜೆಡಿಎಸ್ ಜತೆಗೆ ಬಿಜೆಪಿಗೆ ಸಖ್ಯವಿರುವುದಿಲ್ಲ ಎನ್ನುವ ಸಂದೇಶವನ್ನು ಹಳೆ ಮೈಸೂರು ಭಾಗದ ಕಾರ್ಯಕರ್ತರಿಗೆ ರವಾನಿಸಿದ್ದಾರೆ. ಈ ವರೆಗೂ ಈ ಭಾಗದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಅಮಿತ್ ಶಾ, ಇನ್ಮುಂದೆ ರಾಜ್ಯದಲ್ಲಿ ನೋ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಎಂದು ತಾಕೀತು ಮಾಡಿದ್ದಾರೆ. ಪ್ಲಾನ್ ಎ ಜತೆಗೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಇದೀಗ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಪ್ಲಾನ್ ಬಿ ದೊಂದಿಗೆ ತಿಂಗಳಾಂತ್ಯಕ್ಕೆ ಆಗಮಿಸಲಿದ್ದಾರೆ.

ಜೆಡಿಎಸ್​ ಮೈತ್ರಿ ರಾಜಕೀಯ ಇಲ್ಲ : ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ರಾಜಕೀಯ ಇಲ್ಲ ಎಂದು ಅಮಿತ್ ಶಾ ಅವರು ತಿಳಿಸಿದ್ದಾರೆ. ಅಲ್ಲದೆ ಮುಂದೆಯೂ ಜೆಡಿಎಸ್​ ಮೈತ್ರಿ ರಾಜಕೀಯ ಇಲ್ಲ ಎಂಬ ನಿಲುವು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿಯಲ್ಲಿ ರಾಜ್ಯ ಬಿಜೆಪಿ ಮುನ್ನಡೆಯಲಿದೆ,ಅಮಿತ್ ಶಾ ಅವರ ಸೂಚನೆಯಂತೆ ಪಕ್ಷ ಮುನ್ನಡೆಯುತ್ತದೆ. ನಮ್ಮ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಕಾಲ ಕಾಲಕ್ಕೆ ಅವರು ಮಾಹಿತಿ ಪಡೆದುಕೊಳ್ಳಲ್ಲಿದ್ದಾರೆ. 1 ತಿಂಗಳ ನಂತರ ಮತ್ತೊಮ್ಮೆ ಬಂದು ಹಳೆ ಮೈಸೂರು ಭಾಗದಲ್ಲಿ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ. ಅಷ್ಟರಲ್ಲಿ ನಮಗೆ ಕೊಟ್ಟಿರುವ ಗುರಿ ತಲುಪಬೇಕಿದೆ ಆ ನಿಟ್ಟಿನಲ್ಲೇ ನಮ್ಮ ಲಕ್ಷ್ಯ ಇರಲಿದೆ ಎಂದರು.

ಇದನ್ನೂಓದಿ:ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಗೆ ಬಿಸಿ ತಟ್ಟಲಿದೆಯಾ..?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.