ETV Bharat / state

ಓಲಾ ಕ್ಯಾಬ್ ಚಾಲಕನ ದುರ್ವರ್ತನೆ ಪ್ರಕರಣ: ಪೊಲೀಸ್ ಆಯುಕ್ತರಿಂದ ಕ್ರಮ ಭರವಸೆ

ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್ಪೋರ್ಟ್‌ನಿಂದ ಕ್ಯಾಬ್‌ಗೆ ಹತ್ತಿದ್ದ ಮಹಿಳೆಯೊಬ್ಬರು ಚಾಲಕನಿಗೆ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಆದ್ರೆ, ಆಕೆಯ ಮಾತು ಕೇಳದೆ ಸೀದಾ ಬೇಗೂರಿಗೆ ಕರೆದೊಯ್ದ ಚಾಲಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತರು ಕ್ರಮದ ಕುರಿತು ಎಚ್ಚರಿಕೆ ನೀಡಿದ್ದಾರೆ.

ಭಾಸ್ಕರ್ ರಾವ್
author img

By

Published : Oct 3, 2019, 6:09 PM IST

ಬೆಂಗಳೂರು: ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್ಪೋರ್ಟ್‌ನಿಂದ ಕ್ಯಾಬ್ ಹತ್ತಿದ್ದ ಮಹಿಳೆಯೊಬ್ಬರು ರಾಷ್ಟ್ರೀಯ ಹೆದ್ದಾರಿ 44ಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಆದ್ರೆ, ಆಕೆಯ ಮಾತು ಕೇಳದ ಚಾಲಕ ಮಾರ್ಗ ಬದಲಿಸಿ ಸೀದಾ ಬೇಗೂರಿಗೆ ಕರೆದೊಯ್ದಿದ್ದಾನೆ. ಅಲ್ಲದೇ ಮ್ಯಾಪ್‌ನಲ್ಲಿ ಹೇಗೆ ತೋರಿಸುತ್ತಿದೆಯೋ ಹಾಗೆ ಹೋಗುತ್ತಿದ್ದೇನೆ ಎಂದಿದ್ದಲ್ಲದೇ, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿದ್ದಾರೆ

ಈ ಮಾರ್ಗದಲ್ಲಿ ಯಾವುದೇ ಹೆದ್ದಾರಿ ಸಿಗುವುದಿಲ್ಲ ಎಂದಿದ್ದ ಚಾಲಕ:

ಡ್ರೈವರ್‌ನ ವರ್ತನೆ ಕಂಡು ಪ್ರಶ್ನಿಸಿದ ಆಕೆಗೆ, ಮ್ಯಾಪ್‌ನಲ್ಲಿ ಹೇಗೆ ತೋರಿಸುತ್ತಿದೆಯೋ ಹಾಗೆ ಹೋಗುತ್ತಿದ್ದೇನೆ ಎಂದಿದ್ದಾನೆ. ಅಲ್ಲದೇ ಈ ಮಾರ್ಗದಲ್ಲಿ ಯಾವುದೇ ಹೆದ್ದಾರಿ ಸಿಗುವುದಿಲ್ಲ ಎಂದಾಗ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಕೂಡಲೇ ಮಹಿಳೆ ಓಲಾ ಕ್ಯಾಬ್‌ನ ಎಮರ್ಜನ್ಸಿ ಬಟನ್ ಪ್ರೆಸ್ ಮಾಡಿದ್ದಾಳೆ. ಹೀಗಾಗಿ ಆಕೆಯನ್ನು ಅಲ್ಲೇ ಇಳಿದುಕೊಳ್ಳಲು ಸೂಚಿಸಿ ಚಾಲಕ ಪರಾರಿಯಾಗಿದ್ದಾನೆ.

ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯೆ;

ಈಗಾಗಲೇ ಕತ್ತಲೆ ಇರುವ ಹಾಗೂ ನಿಷೇಧಿತ ಪ್ರದೇಶದಲ್ಲಿ ಕ್ಯಾಬ್ ಚಾಲಕರು ಸಂಚರಿಸದಂತೆ ಸೂಚಿಸಲಾಗಿದೆ. ಈ ಕುರಿತು ಕ್ಯಾಬ್ ಚಾಲಕರ ಜೊತೆ ಈಗಾಗಲೇ ಮಾತುಕತೆ ನಡೆಸಿ ಸೂಚನೆ ನೀಡಲಾಗಿದೆ. ಇನ್ನು‌ ಮುಂದೆ‌ ಈ ರೀತಿ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಮಹಿಳೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಓಲಾ ಸಂಸ್ಥೆಯ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಸದ್ಯ ಚಾಲಕ ತಲೆಮರೆಸಿಕೊಂಡಿದ್ದು ಶೀಘ್ರ ಪತ್ತೆ ಹಚ್ಚಿ ವಿಚಾರಣೆ ನಡೆಸುವುದಾಗಿ ಆಯುಕ್ತರು ಭರವಸೆ ಕೊಟ್ಟರು.

  • Women’s Safety is paramount. We will identify the Ola Cabbie who offloaded a Lady in the middle of night near Begur endangering her Safety. Rest assured, will take action and Revert..(Ref today’s TOI Pg1)

    — Bhaskar Rao IPS (@deepolice12) October 3, 2019 " class="align-text-top noRightClick twitterSection" data=" ">

Intro:ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಓಲಾ ಕ್ಯಾಬ್ ಡ್ರೈವರ್ ಗಳ ಹಾವಳಿ..
ನಗರ ಆಯುಕ್ತರಿಂದ ಓಲಾ ಕ್ಯಾಬ್ ಚಾಲಕರಿಗೆ ಖಡಕ್ ಎಚ್ಚರಿಕೆ
Mojo

ಸಿಲಿಕಾನ್ ಸಿಟಿಯಲ್ಲಿ ಓಲಾ ಕ್ಯಾಬ್ ಡ್ರೈವರ್ ‌ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಬೇಗೂರಿನ ಬಳಿ‌ ನಡೆದಿದೆ.
ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ ನಿಂದ ಕ್ಯಾಬ್ ಹತ್ತಿದ್ದ ಮಹಿಳೆ..ನ್ಯಾಷನಲ್ ಹೈವೇ 44 ಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ.. ಆದ್ರೆ ಪ್ಯಾಸೆಂಜರ್ ಹೇಳಿದ ಮಾತನ್ನ ಕೇಳದ ಕ್ಯಾಬ್ ಡ್ರೈವರ್ ಬೇಗೂರಿಗೆ ಕರೆದೊಯ್ದಿದ್ದಾನೆ.

ಡ್ರೈವರ್ ನ ಕೇಳಿದಾಗ ಮ್ಯಾಪ್ ನಲ್ಲಿ ಹೇಗೆ ತೋರಿಸುತ್ತಿದೆಯೋ ಹಾಗೆ ಹೋಗುತ್ತಿದ್ದೇನೆ ಎಂದಿದ್ದಾನೆ. ಈ ರೀತಿ ಹೇಳಿದ ಡ್ರೈವರ್ ಗೆ ಈ ಮಾರ್ಗದಲ್ಲಿ ಯಾವುದೇ ಹೈವೇ ಸಿಗುವುದಿಲ್ಲ ಎಂದಾಗ ಮಹಿಳೆ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ.‌ ಕೂಡಲೇ ಮಹಿಳೆ ಓಲಾ ಕ್ಯಾಬ್ ನ ಎಮರ್ಜನ್ಸಿ ಬಟನ್ ಪ್ರೆಸ್ ಮಾಡಿದ್ದಾಳೆ.. ಹೀಗಾಗಿ ಆಕೆಯನ್ನ ಅಲ್ಲೇ ಸ್ಟಾಪ್ ಮಾಡಿ ಇಳಿದುಕೊಳ್ಳಲು ಸೂಚಿಸಿ ಡ್ರೈವರ್ ಎಸ್ಕೇಪ್ ಆಗಿದ್ದಾನೆ. ಸದ್ಯ ನೊಂದ ಮಹಿಳೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ್ದು ತಕ್ಷಣ ಭಾಸ್ಕರ್ ರಾವ್ ಅವರು ತನ್ನ ಟ್ವೀಟರ್‌ಮೂಲಕ ಪ್ರತಿಕ್ರಿಯೆ ನೀಡಿ
ಕತ್ತಲೆ ಇರುವ ಹಾಗೂ ಬ್ಯಾನ್ ಪ್ರದೇಶದಲ್ಲಿ ಕ್ಯಾಬ್ ಡ್ರೈವರ್ಸ್ ಗಳಿಗೆ ಹೋಗದೆ ಇರುವಂತೆ ಸೂಚಿಸಲಾಗಿದೆ..ಇನ್ನು‌ಮುಂದೆ‌ ಈ ರೀತಿ ಆಗದಂತೆ ಮಹಿಳಾ ಸೇಫ್ಟಿಗೆ ಆದ್ಯತೆ ನೀಡುತ್ತೇವೆ ಎಂದಿದ್ದಾರೆ.

ಹಾಗೆ ಓಲಾ ಕ್ಯಾಬ್ ಚಾಲಕನಿಂದ ಮಹಿಳೆ ಜೊತೆ ಅಸಭ್ಯ ವರ್ತನೆ ಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾಡಿ ಮಹಿಳೆ ಏರ್ಪೊಟ್ ನಿಂದ ಓಲಾ ಕ್ಯಾಬ್ ನಲ್ಲಿ ತೆರಳುತಿದ್ರು.. ಈ ವೇಳೆ ಬೇಗೂರು ರಸ್ತೆಯಲ್ಲಿ ಕಾಮಗಾರಿ ರಸ್ತೆಗೆ ಕಾರ್ ತಿರುಗಿಸಿದ್ದ ಓಲಾ ಚಾಲಕ.ಕಾಮಗಾರಿ ರಸ್ತೆಗೆ ತಿರುಗಿಸಬೇಡ ಎಂದಿದಕ್ಕೆ ಸಾಫ್ಟ್‌ವೇರ್ ನಲ್ಲಿ ಇದೇ ಮಾರ್ಗ ತೊರಿಸ್ತಿದೆ ಎಂದಿದ್ದ..
ಅದಕ್ಕೆ ಆಕೆ ವಿರೋಧಿಸಿದಕ್ಕೆ ಮಧ್ಯ ರಾತ್ರಿ ಕೆಳಗೆ ಇಳಿಸಿ ಹೊಗಿದ್ದ..
ಈ ಬಗ್ಗೆ ಮಹಿಳೆ ದೂರು ನೀಡಿದ್ದಾರೆ ಹಾಗಾಗಿ ಸದ್ಯ ಆತ ತಲಘಟ್ಟಪುರದವಾನಗಿದ್ದು ಬಂಧಿಸಲಾಗಿದೆ. ಹಾಗೆ ಈ ಹಿಂದೆ ಓಲಾದವರ ಜೊತೆ ಮೀಟಿಂಗ್ ಮಾಡಿದ್ದೆವು..ಈ ವೇಳೆ ಕತ್ತಲ ರಾತ್ರಿಯಲ್ಲಿ ಕಾಮಗಾರಿ ಹಾಗೂ ದುರಸ್ಥಿ ರಸ್ತೆಯಲ್ಲಿ ಹೋಗದಂತೆ ಸೂಚಿಸಿದ್ದೇವು.. ಆದರೂ ಆತ ಹೋಗಿ ನಿಯಮ ಉಲ್ಲಂಘಿಸಿದ್ದಾನೆ..‌ಆ ಚಾಲಕನ ವಿರುದ್ಧ ಕ್ರಮಕೈಗೊಳ್ಳುತಿದ್ದೇವೆ
ಇದರ ಜೊತೆ ಓಲಾ ಕಂಪನಿ ವಿರುದ್ಧ ಕೇಸ್ ಹಾಕಿಓಲಾ ಕಂಪನಿಯವರಿಗೆ ಬಿಸಿ ಮುಟ್ಟಿಸುವ ಕೆಲಸ ನಾವು ಮಾಡ್ತೇವೆ ಎಂದ್ರುBody:KN_BNG_06_OLA_7204498Conclusion:KN_BNG_06_OLA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.