ಬೆಂಗಳೂರು: ಇಡಿ ಮತ್ತು ಐಟಿ ಇಲಾಖೆಗಳ ಮೂಲಕ ಒಕ್ಕಲಿಗ ಜನಾಂಗದ ಪ್ರಭಾವಿ ನಾಯಕರಾದ ಡಿ.ಕೆ ಶಿವಕುಮಾರ್ ಬಂಧನ ಮಾಡಿರುವುದನ್ನ ಖಂಡಿಸಿ ಒಕ್ಕಲಿಗರ ಸಂಘ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಪ್ರತಿಭಟನೆ ನಡೆಸಿ ರಾಜಭವನ ಮುತ್ತಿಗೆ ಹಾಕಲು ಬುಧವಾರ ನಿರ್ಧಾರ ಮಾಡಿದ್ದಾರೆ.
ಹೀಗಾಗಿ ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೆಲ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ ಆಯೋಜಕರ ಜೊತೆ ಈಗಾಗ್ಲೇ ಖುದ್ದಾಗಿ ಮಾತಾಡುವ ವಿಚಾರ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಹಾಗೆಯೇ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ಗೆ ಹೆಚ್ಚಿನ ಜವಾಬ್ದಾರಿ ವಹಿಸಿದ್ದು, ಪ್ರತಿಭಟನೆ ನಡೆಯುವ ಸ್ಥಳದ ಸಂಪೂರ್ಣ ಜವಾಬ್ಧಾರಿ ವಹಿಸುವಂತೆ ಸೂಚಿಸಿದ್ದಾರೆ. ಹೆಚ್ಚಿನ ಭದ್ರತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ, ಡಿಸಿಪಿ, ಇನ್ಸ್ಪೆಕ್ಟರ್, ಕಾನ್ಸ್ಟಬಲ್, ಕೆಎಸ್ ಆರ್ ಪಿ ನಿಯೋಜನೆ ಮಾಡಲು ನಿರ್ಧಾರ ಮಾಡಲಾಗಿದೆ.
ಹಾಗೆ ಒಂದು ವೇಳೆ, ರಾಜಭವನ ಮುತ್ತಿಗೆ ಹಾಕಲು ನಿರ್ಧಾರ ಮಾಡಿದರೆ ಅಂತವರನ್ನ ಬ್ಯಾರಿಕೇಡ್ ಹಾಕಿ ತಡೆಯಲು ಎಲ್ಲಾ ರೀತಿ ತಯಾರಿ ನಡೆಸಿದ್ದಾರೆ.