ಬೆಂಗಳೂರು : ಕ್ಷಣಮಾತ್ರದಲ್ಲಿ ಕೈಚಳಕ ತೋರುವ ಓಜಿಕುಪ್ಪಂ ಕಳ್ಳರ ಗ್ಯಾಂಗ್ ನಗರದಲ್ಲಿ ಮತ್ತೆ ಆ್ಯಕ್ಟೀವ್ ಆಗಿದೆ. ಬೈಕ್ ಡಿಕ್ಕಿಯಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನ ಎಗರಿಸಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮಾರ್ಚ್ 7ರಂದು ಮೊಹಮ್ಮದ್ ಸಾದೀಕ್ ಪಾಷಾ ಎಂಬುವರು ಬೈಕ್ ಡಿಕ್ಕಿಯಲ್ಲಿ 2.75 ಲಕ್ಷ ರೂಪಾಯಿ ಹಣ ಇಟ್ಟುಕೊಂಡು ಹೋಗುತ್ತಿದ್ದರು. ಟೀ ಕುಡಿಯಲು ಬಾಣಸವಾಡಿ ಹೋಟೆಲ್ ಬಳಿ ನಿಲ್ಲಿಸಿದ್ದರು.
ಟೀ ಕುಡಿದುಕೊಂಡು ಮತ್ತೆ ಬರುವಷ್ಟರಲ್ಲಿ ಬೈಕ್ನಲ್ಲಿದ್ದ ಹಣವನ್ನ ಖದೀಮರು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಮೇಕೆದಾಟು ಯೋಜನೆ: ತಮಿಳುನಾಡು ವಿರುದ್ಧ ನಿರ್ಣಯ ಮಂಡಿಸಲು ನಿರ್ಧರಿಸಿದ ಕರ್ನಾಟಕ