ETV Bharat / state

'65 ಬ್ರಾಹ್ಮಣ ಎಂಪಿಗಳು, ಹೆಚ್ಚು ಸಚಿವರಾಗೋದು ಸಹಜ, 9 ಲಿಂಗಾಯಿತರಲ್ಲಿ ನಾನೊಬ್ಬನೇ ಸಚಿವ' - ರಾಜ್ಯ ಸಚಿವ

ಎಸಿ ಹಾಗೂ ಮೊದಲ ದರ್ಜೆ ರೀತಿಯಂತೆಯೇ ಸಾಮಾನ್ಯ ರೈಲು ಬೋಗಿಗಳಲ್ಲಿಯೂ ಸ್ವಚ್ಛತೆ ಇರಬೇಕು. ಒಂದು ವೇಳೆ ಕಸ, ಗಲೀಜು ಕಂಡುಬಂದರೆ ಅದಕ್ಕೆ ಹಿರಿಯ ರೈಲ್ವೆ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ
author img

By

Published : Jun 4, 2019, 4:50 PM IST

ಬೆಂಗಳೂರು: ಇನ್ನು ಮುಂದೆ ರೈಲುಗಳ‌ ಜನರಲ್ ಕಂಪಾರ್ಟ್‌ಮೆಂಟ್​ಗಳಲ್ಲಿ ಗಲೀಜು ಕಂಡು ಬಂದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುತ್ತೇವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹಿರಿಯ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಾನು ಬೆಳಗಾವಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದೇನೆ. ಜನ ಸಾಮಾನ್ಯರ ತೊಂದರೆಗಳೇನು ಎಂದು ತಿಳಿದುಕೊಳ್ಳುವ ಸಲುವಾಗಿಯೇ ಜನರಲ್ ಕಂಪಾರ್ಟ್‌ಮೆಂಟ್​ನಲ್ಲಿ ಪ್ರಯಾಣಿಸಿದೆ ಎಂದರು.

ಸಾಮಾನ್ಯರ ಬೋಗಿಗಳಲ್ಲಿ ಸ್ವಚ್ಛತೆ ಇರಲಿಲ್ಲ. ಇನ್ನು ಮುಂದೆ ಹೀಗಾಗಬಾರದು, ಜನರಲ್ ಕಂಪಾರ್ಟ್​ಮೆಂಟ್​ನಲ್ಲಿಯೂ ಸ್ವಚ್ಛತೆ ಇರಬೇಕು. ಎಸಿ ಹಾಗೂ ಮೊದಲ ದರ್ಜೆ ರೀತಿಯಂತೆಯೇ ಸಾಮಾನ್ಯ ಬೋಗಿಗಳಲ್ಲಿಯೂ ಸ್ವಚ್ಛತೆ ಇರಬೇಕು. ಒಂದು ವೇಳೆ ಕಸ, ಗಲೀಜು ಕಂಡುಬಂದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಬೇಕಾಗಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ

ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆ ಜಾರಿ ಸಂಬಂಧ ಇಂದು ಸಂಜೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಯೋಜನೆಯ ಪ್ರಗತಿ ಎಷ್ಟಾಗಿದೆ ಎಂದು ತಿಳಿದುಕೊಂಡ ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.

ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬರೇ ಲಿಂಗಾಯತರಿಗೆ ಸಚಿವ ಸ್ಥಾನ ಕೊಟ್ಟಿರುವುದನ್ನು ಸಚಿವ ಸುರೇಶ್ ಅಂಗಡಿ ಸಮರ್ಥಿಸಿಕೊಂಡಿದ್ದಾರೆ. ಲೋಕಸಭೆಯಲ್ಲಿ 65 ಬ್ರಾಹ್ಮಣ ಎಂಪಿಗಳಿದ್ದಾರೆ. ಆದರೆ, ಲಿಂಗಾಯತರು ಇರೋದು ಕೇವಲ 9 ಸಂಸದರು ಮಾತ್ರ. ಹಾಗಿರುವಾಗ ನನ್ನೊಬ್ಬನಿಗೆ ಸಚಿವ ಸ್ಥಾನ ಕೊಟ್ಟಿರೋದು. ಅದೂ ಕೂಡ ರಾಜ್ಯಖಾತೆ ಕೊಟ್ಟಿರುವುದು ಸರಿಯಾಗಿಯೇ ಇದೆ. ಇದರಲ್ಲಿ ಲೋಪ ಹುಡುಕುವುದು ಸರಿಯಲ್ಲ ಎಂದು ಶಾಮನೂರು ಶಿವಶಂಕರಪ್ಪನವರಿಗೆ ಟಾಂಗ್ ಕೊಟ್ಟರು.

Intro:ಬೆಂಗಳೂರು: ಇನ್ನು ಮುಂದೆ ರೈಲುಗಳ‌ ಜನರಲ್ ಕಂಪಾರ್ಟಮೆಂಟ್ ಗಳಲ್ಲಿ ಗಲೀಜು ಕಂಡು ಬಂದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುತ್ತೇವೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Body:

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದರು.ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ್ ಹಿರೇಮನಿ ಮತ್ತಿತರ ಮುಖಂಡರು ಸಚಿವರಿಗೆ ಸಸಿ ನೀಡುವ ಮೂಲಕ ಸ್ವಾಗತಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದ ನೂತನ ಸಚಿವರು ಪಕ್ಷದ ಹಿರಿಯರಾದ ಜಗನ್ನಾಥ ರಾವ್ ಜೋಶಿ ಅವರ ಪುತ್ಥಳಿಗೆ ಗೌರವ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಅಂಗಡಿ,ಇಂದು ನಾನು ಬೆಳಗಾವಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದೇನೆ.ಜನ ಸಾಮಾನ್ಯರ ತೊಂದರೆಗಳೇನು ಎಂದು ತಿಳಿದುಕೊಳ್ಳುವ ಸಲುವಾಗಿಯೇ ಜನರಲ್ ಕಂಪಾರ್ಟಮೆಂಟ್ ನಲ್ಲಿ ಪ್ರಯಾಣಿಸಿದೆ.ಸಾಮಾನ್ಯರ ಬೋಗಿಗಳಲ್ಲಿ ಸ್ವಚ್ಛತೆ ಇರಲಿಲ್ಲ ಇನ್ನು ಮುಂದೆ ಹೀಗಾಗಬಾರದು, ಜನರಲ್ ಕಂಪಾರ್ಟ್ ಮೆಂಟ್ ನಲ್ಲಿಯೂ ಸ್ವಚ್ಚತೆ ಇರಬೇಕು ಎಸಿ,ಮೊದಲ ದರ್ಜೆ ರೀತಿಯಂತೆಯೇ ಸಾಮಾನ್ಯ ಬೋಗಿಗಳಲ್ಲಿಯೂ ಸ್ವಚ್ಛತೆ ಇರಬೇಕು ಒಂದು ವೇಳೆ ಕಸ,ಗಲೀಜು ಕಂಡುಬಂದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಬೇಕಾಗಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆ ಜಾರಿ ಸಂಬಂಧ ಇಂದು ಸಂಜೆ ಅಧಿಕಾರಿಗಳ ಸಭೆ ಕರೆದಿದ್ದೇನೆ.ಯೋಜನೆಯ ಪ್ರಗತಿ ಎಷ್ಟಾಗಿದೆ ಎಂದು ತಿಳಿದುಕೊಂಡು ನಂತರ ಪ್ರತಿಕ್ರಯಿಸುತ್ತೇನೆ ಎಂದರು.

ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬರೇ ಲಿಂಗಾಯತರಿಗೆ ಸಚಿವ ಸ್ಥಾನ ಕೊಟ್ಟಿಇರುವುದನ್ನು ಸಚುವ ಸುರೇಶ್ ಅಂಗಡಿ ಸಮರ್ಥಿಸಿಕೊಂಡಿದ್ದಾರೆ.ಲೋಕಸಭೆಯಲ್ಲಿ 65 ಬ್ರಾಹ್ಮಣ ಎಂಪಿಗಳಿದ್ದಾರೆ ಆದರೆ ಲಿಂಗಾಯತರು ಇರೋದು ಕೇವಲ 9 ಸಂಸದರು ಮಾತ್ರ ಹಾಗಿರುವಾಗ ನನ್ನೊಬ್ಬನಿಗೆ ಸಚಿವ ಸ್ಥಾನ ಕೊಟ್ಟಿರೋದು ಅದೂ ಕೂಡ ರಾಜ್ಯಖಾತೆ ಕೊಟ್ಟಿರುವುದು ಸರಿಯಾಗಿಯೇ ಇದೆ.ಇದರಲ್ಲಿ ಲೋಪ ಹುಡುಕುವುದು ಸರಿಯಲ್ಲ‌ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರಿಗೆ ಟಾಂಗ್ ಕೊಟ್ಟರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.