ETV Bharat / state

ಶಾಕಿಂಗ್​​... ಹೆಚ್ಚುತ್ತಲೇ ಇದೆ ಶಾಲೆ ತೊರೆಯುತ್ತಿರುವ ಮಕ್ಕಳ ಸಂಖ್ಯೆ : ಮರಳಿ ಶಾಲೆಗೆ ತರುವಲ್ಲಿ ಹಿಂದೆ ಬಿದ್ದ ಸರ್ಕಾರ!

ಕೋವಿಡ್ ಲಾಕ್‌ಡೌನ್ ಜನರ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ವಲಸೆ ಬಂದ ಕಾರ್ಮಿಕರ ಮಕ್ಕಳು ಮರಳಿ ತಮ್ಮ ಊರಿಗೆ ತೆರಳಿದ್ದಾರೆ. ಕೊರೊನಾ ನಂತರ ಆರ್ಥಿಕ ಮುಗ್ಗಟ್ಟಿನಿಂದ ಮಕ್ಕಳನ್ನು ಶಾಲೆಬಿಡಿಸಿ ಕೂಲಿ ಕೆಲಸಕ್ಕೆ ಪೋಷಕರು ಸೇರಿಸಿರುವ ಪ್ರಕರಣಗಳೂ ಹೆಚ್ಚಿವೆ. ಹೀಗಾಗಿ ರಾಜ್ಯದಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುವ ಪ್ರಮಾಣದಲ್ಲಿ ಏರಿಕೆ ಕಂಡಿದೆ.

author img

By

Published : Jan 21, 2022, 2:01 AM IST

ಹೆಚ್ಚುತ್ತಲೇ ಇದೆ ಶಾಲೆ ತೊರೆಯುತ್ತಿರುವ ಮಕ್ಕಳ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಅದೆಷ್ಟೂ ಮಕ್ಕಳು ಶಾಲೆ ತೊರೆದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿವಿಧ ಕಾರಣಗಳಿಗೆ ವಿದ್ಯಾರ್ಥಿಗಳು ಶಾಲೆಗಳನ್ನು ತೊರೆಯುತ್ತಿದ್ದಾರೆ. ಅದರಲ್ಲೂ ಕೋವಿಡ್ ಲಾಕ್‌ಡೌನ್ ನಿಂದ ಭೌತಿಕ ತರಗತಿಗಳು ರದ್ದು ಮಾಡುತ್ತಿರುವುದರಿಂದ ಹಲವು ವಿದ್ಯಾರ್ಥಿಗಳು ಶಾಲೆ ತೊರೆಯುವ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಹೀಗೆ ಶಾಲೆ ತೊರೆದ ಮಕ್ಕಳನ್ನು ಮರಳಿ ಶಾಲೆಗೆ ವಾಪಸು ಕರೆತರುವುದರಲ್ಲಿ ಶಿಕ್ಷಣ ಇಲಾಖೆ ಹಿಂದೆ ಬಿದ್ದಿದೆ.

ಕೋವಿಡ್ ಲಾಕ್‌ಡೌನ್ ಜನರ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ವಲಸೆ ಬಂದ ಕಾರ್ಮಿಕರ ಮಕ್ಕಳು ಮರಳಿ ತಮ್ಮ ಊರಿಗೆ ತೆರಳಿದ್ದಾರೆ. ಕೊರೊನಾ ನಂತರ ಆರ್ಥಿಕ ಮುಗ್ಗಟ್ಟಿನಿಂದ ಮಕ್ಕಳನ್ನು ಶಾಲೆಬಿಡಿಸಿ ಕೂಲಿ ಕೆಲಸಕ್ಕೆ ಪೋಷಕರು ಸೇರಿಸಿರುವ ಪ್ರಕರಣಗಳೂ ಹೆಚ್ಚಿವೆ. ಹೀಗಾಗಿ ರಾಜ್ಯದಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುವ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2021-22 ಸಾಲಿನಲ್ಲೂ ಮಕ್ಕಳು ಶಾಲೆ ತೊರೆದ ಪ್ರಮಾಣ ಗಣನೀಯವಾಗಿದೆ.

ಅಂಕಿ  ಅಂಶ
ಅಂಕಿ ಅಂಶ

2021-22ರಲ್ಲಿ ಶಾಲೆ ತೊರೆದ ವಿದ್ಯಾರ್ಥಿಗಳೆಷ್ಟು?:

ಶಿಕ್ಷಣ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಈ ಶೈಕ್ಷಣಿಕ ಸಾಲಿನಲ್ಲಿ ಈವರೆಗೆ ಒಟ್ಟು 34,411 ವಿದ್ಯಾರ್ಥಿಗಳು ಶಾಲೆ ತೊರೆದ ಪ್ರಕರಣಗಳು ಪತ್ತೆಯಾಗಿವೆ.

ಇದರಲ್ಲಿ 6-14 ವಯೋಮಾನದ 19,336 ಮಕ್ಕಳು ಶಾಲೆ ತೊರೆದಿದ್ದಾರೆ. ಇನ್ನು 14-16 ವಯೋಮಾನದ 15,075 ವಿದ್ಯಾರ್ಥಿಗಳು ಶಾಲೆಯಿಂದ ಹೊರ ಗುಳಿದಿದ್ದಾರೆ. ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು 6608 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ‌. ಬೀದರ್ 2609, ಬಳ್ಳಾರಿಯಲ್ಲಿ 1279, ಕಲಬುರ್ಗಿಯಲ್ಲಿ 2129 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ.

ರಾಯಚೂರಿನಲ್ಲಿ 1,966, ಚಿತ್ರದುರ್ಗ 1587, ಧಾರವಾಡ 1463, ಬೆಳಗಾವಿಯಲ್ಲಿ 1265, ಕೊಪ್ಪಳ 1159, ಶಿವಮೊಗ್ಗ 1046, ವಿಜಯಪುರ 1152, ಯಾದಗಿರಿಯಲ್ಲಿ 1608 ಮಕ್ಕಳು ಶಾಲೆ ತೊರೆದಿರುವುದು ವರದಿಯಾಗಿದೆ.

ಶಾಲೆಗೆ ಮರಳಿ ತರಲು ಶಿಕ್ಷಣ ಇಲಾಖೆ ಪರದಾಟ:

ರಾಜ್ಯದಲ್ಲಿ ಶಾಲೆ ತೊರೆದ ಮಕ್ಕಳನ್ನು ವಾಪಸು ಕರೆತರಲು ಶಿಕ್ಷಣ ಇಲಾಖೆ ಹರಸಾಹಸ ಪಡುತ್ತಿದೆ. ಒಂದೆಡೆ ಅನೇಕ ಜಿಲ್ಲೆಯಲ್ಲಿ ವಲಸೆ ಹೋದ ಕುಟುಂಬದ ಮಕ್ಕಳನ್ನು ಹುಡುಕುವುದು ಕಷ್ಟಕರವಾಗುತ್ತಿದೆ. ಇನ್ನು ಆರ್ಥಿಕ ತೊಂದರೆ ಇರುವ ಪೋಷಕರು ತಮ್ಮ ಮಕ್ಕಳು ಶಾಲೆ ಓದುವುದಕ್ಕಿಂತ ಕೆಲಸ ಮಾಡಲಿ ಎಂಬ ಅಭಿಪ್ರಾಯ ಹೆಚ್ಚಿದೆ. ಹೀಗಾಗಿ ಮಕ್ಕಳನ್ನು ಕರೆತರುವುದೇ ಶಿಕ್ಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಶಾಲೆ ತೊರೆದ ಒಟ್ಟು ಮಕ್ಕಳ ಪೈಕಿ ಅರ್ಧದಷ್ಟು ಮಕ್ಕಳನ್ನೂ ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆಗೆ ಸಾಧ್ಯವಾಗಿಲ್ಲ. ಶಿಕ್ಷಣ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ 34,411 ಶಾಲೆ ತೊರೆದ ಮಕ್ಕಳ ಪೈಕಿ ಈವರೆಗೆ 15,552 ಮಕ್ಕಳನ್ನು ಮಾತ್ರ ಮರಳಿ ಮುಖ್ಯವಾಹಿನಿಗೆ ತರಲು ಸಾಧ್ಯವಾಗಿದೆ. ಉಳಿದ 18,859 ಮಕ್ಕಳನ್ನು ಶಾಲೆಗೆ ಮರಳಿತರಲು ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಶಾಲೆ ತೊರೆದ 6-14 ವಯೋಮಾನದ 19,336 ಮಕ್ಕಳ ಪೈಕಿ 11,782 ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ತರುವಲ್ಲಿ ಇಲಾಖೆ ಸಫಲವಾಗಿದೆ. ಇತ್ತ ಶಾಲೆ ತೊರೆದ 14-16 ವಯೋಮಾನದ 15,075 ಮಕ್ಕಳ ಪೈಕಿ 3,770 ಮಕ್ಕಳನ್ನು ಮಾತ್ರ ಶಾಲೆಗೆ ಮರಳಿ ತರುವಲ್ಲಿ ಸಾಧ್ಯವಾಗಿದೆ.

ಮಕಳನ್ನು ವಾಪಸು ತರಲು ಇಲಾಖೆ ನಾನಾ ಕಸರತ್ತು ಮಾಡುತ್ತಿದೆ. ಆದರೆ ಕೆಲ ಪೋಷಕರು ತಮ್ಮ ಮಕ್ಕಳನ್ನು ವಾಪಸು ಕಳುಹಿಸಲು ಒಪ್ಪುತ್ತಿಲ್ಲ. ಈ ಸಂಬಂಧ ಕೆಲ ಶಾಲೆಗೆ ಭೇಟಿ ನೀಡಿ ತಪಾಸಣೆ ಮಾಡಿದ್ದೇನೆ. ಮಕ್ಕಳನ್ನು ವಾಪಸು ಮರಳಿ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.