ETV Bharat / state

ಗಂಟಲು ದ್ರವ ಸಂಗ್ರಹಕ್ಕೆ ಎನ್​ಎಸ್ಎಸ್: ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ನೇಮಕಕ್ಕೆ ಪಾಲಿಕೆ ಪತ್ರ - NSS for throat fluid collection news

ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ಯೂನಿವರ್ಸಿಟಿಯ ಒಟ್ಟು 994 ಪ್ಯಾರಾ ಮೆಡಿಕಲ್ ಪದವಿ ಹಾಗೂ ಪಿಜಿ ವಿದ್ಯಾರ್ಥಿಗಳು ಕೊರೊನಾ ಟೆಸ್ಟಿಂಗ್ ಹಾಗೂ ಕೊರೊನಾ ತಡೆಗಟ್ಟುವ ಇತರೆ ಕೆಲಸಗಳ ಸೇವೆಗೆ ಅಗತ್ಯವಾಗಿದ್ದು, ಎಲ್ಲರೂ ರಿಪೋರ್ಟ್ ಮಾಡಿಕೊಳ್ಳಲು ಸಿದ್ಧತೆ ಮಾಡುವಂತೆ, ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ಯೂನಿವರ್ಸಿಟಿ, ಜಯನಗರದ ರಿಜಿಸ್ಟ್ರಾರ್​ಗೆ ಪತ್ರ ಬರೆದಿದ್ದಾರೆ.

ಗಂಟಲು ದ್ರವ ಸಂಗ್ರಹಕ್ಕೆ ಎನ್​ಎಸ್ಎಸ್
ಗಂಟಲು ದ್ರವ ಸಂಗ್ರಹಕ್ಕೆ ಎನ್​ಎಸ್ಎಸ್
author img

By

Published : Aug 1, 2020, 10:42 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ತಡೆಗಟ್ಟಲು ಬೂತ್, ವಾರ್ಡ್, ಕಂಟೈನ್‌ಮೆಂಟ್ ವಲಯಗಳಲ್ಲಿ ಹೆಚ್ಚೆಚ್ಚು ಕೊರೊನಾ ಪರೀಕ್ಷೆ ಅಗತ್ಯವಿದೆ. ಹೀಗಾಗಿ ಸಿಬ್ಬಂದಿಗಳ ಕೊರತೆಯಾಗಿದ್ದು, ಬಿಬಿಎಂಪಿ ಎನ್​ಎಸ್ಎಸ್ ವಿದ್ಯಾರ್ಥಿಗಳನ್ನು ಬಳಸಿ ಗಂಟಲು ದ್ರವ ಸಂಗ್ರಹಕ್ಕೆ ನೆರವಾಗುವಂತೆ ರಾಜ್ಯ ಎನ್​ಎಸ್​ಎಸ್ ಅಧಿಕಾರಿ ಡಾ.ಗಣನಾಥ ಶೆಟ್ಟಿಯವರಿಗೆ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದಾರೆ.

ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ನೇಮಕಕ್ಕೆ ಪಾಲಿಕೆ ಪತ್ರ

ಈ ವೇಳೆ ವಿದ್ಯಾರ್ಥಿಗಳಿಗೆ ತಿಂಗಳಿಗೆ 14 ಸಾವಿರ ರೂಪಾಯಿ ಗೌರವ ಧನ ನೀಡುವುದಾಗಿ ಹೇಳಿದ್ದಾರೆ. ಅವರಿರುವ ವಾರ್ಡ್​ಗಳಲ್ಲೇ ಕೆಲಸ ಮಾಡಲು ಸೂಚಿಸಲಾಗುವುದು. ಹೀಗಾಗಿ ಆದಷ್ಟು ಬೇಗ ಎನ್​ಎಸ್​ಎಸ್ ವಿದ್ಯಾರ್ಥಿಗಳ ಪಟ್ಟಿ ಕೊಡುವಂತೆ ತಿಳಿಸಿದ್ದಾರೆ.

ಇದರ ಜೊತೆಗೆ ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ಯೂನಿವರ್ಸಿಟಿಯ ಒಟ್ಟು 994 ಪ್ಯಾರಾ ಮೆಡಿಕಲ್ ಪದವಿ ಹಾಗೂ ಪಿಜಿ ವಿದ್ಯಾರ್ಥಿಗಳು ಕೊರೊನಾ ಟೆಸ್ಟಿಂಗ್ ಹಾಗೂ ಕೊರೊನಾ ತಡೆಗಟ್ಟುವ ಇತರೆ ಕೆಲಸಗಳ ಸೇವೆಗೆ ಅಗತ್ಯವಾಗಿದ್ದು, ಎಲ್ಲರೂ ರಿಪೋರ್ಟ್ ಮಾಡಿಕೊಳ್ಳಲು ಸಿದ್ಧತೆ ಮಾಡುವಂತೆ, ರಾಜೀವ್ ಗಾಂಧಿ ಹೆಲ್ತ್ ಸೈನ್ಸ್ ಯೂನಿವರ್ಸಿಟಿ, ಜಯನಗರದ ರಿಜಿಸ್ಟ್ರಾರ್​ಗೆ ಪತ್ರ ಬರೆದಿದ್ದಾರೆ.

ಈಗಾಗಲೇ ಪಾಲಿಕೆಗೆ ಕೊರೊನಾ ತಡೆಯಲು ಸೇವೆ ಸಲ್ಲಿಸಲು ಮುಂದಾಗಿರುವ ಸ್ವಯಂ ಸೇವಕರಿಗೆ ಗಂಟಲು ದ್ರವ ಸಂಗ್ರಹದ ಬಗ್ಗೆ ಪಾಲಿಕೆ ಆರೋಗ್ಯಾಧಿಕಾರಿಗಳು ತರಬೇತಿ ನೀಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.