ಬೆಂಗಳೂರು: ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರವಿಶಂಕರ್ ಬಂಧಿತ ಆರೋಪಿ. ಕಳ್ಳತನ ಮಾಡಲು ಆರೋಪಿ ನಗರದ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದನಂತೆ. ಆ ನಂತರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ಬೀಗ ಒಡೆದು ಕೃತ್ಯ ಎಸಗುತ್ತಿದ್ದ ವಿಚಾರ ತನಿಖೆಯಿಂದ ಗೊತ್ತಾಗಿದೆ.
ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಕಳ್ಳನ ಜಾಡು ಹುಡುಕಿ ಹೊರಟ ಸಿಸಿಬಿ ಪೊಲೀಸರ ಬಲೆಯಲ್ಲಿ ಆರೋಪಿ ಸಿಲುಕಿದ್ದಾನೆ.
ಈತನಿಂದ ಅರ್ಧ ಕೆ.ಜಿ ಚಿನ್ನಾಭರಣ, 31 ಕೆ.ಜಿ ಬೆಳ್ಳಿ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.