ಬೆಂಗಳೂರು: ಕೊರೊನಾ ವೈರಸ್ ಹೆಚ್ಚಾಗುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಹೆಂಡತಿ- ಮಕ್ಕಳನ್ನು ನೋಡುವ ನೆಪದಲ್ಲಿ ಊರಿಗೆ ಹೋಗುವ ಪೊಲೀಸರಿಗೆ ಬ್ರೇಕ್ ಹಾಕಿದೆ.
ಕೊರೊನಾ ವೈರಸ್ ಕಾಣಿಸಿಕೊಂಡ ಪೊಲೀಸರು ಬಹುತೇಕರು ಹೊರ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಇದೇ ಶನಿವಾರ, ಭಾನುವಾರದ ಒಳಗಾಗಿ ಹೆಂಡತಿ ಮಕ್ಕಳನ್ನ ಕರೆತರುವಂತೆ ಪೊಲೀಸರಿಗೆ ಖಡಕ್ ಸೂಚನೆ ನೀಡಿ ಆದೇಶ ಜಾರಿ ಮಾಡಿದೆ.
ಆದೇಶದ ಅನ್ವಯ ಮುಂದಿನ ಮೂರು ನಾಲ್ಕು ತಿಂಗಳವರೆಗೂ ಅಧಿಕಾರಿ ಹಾಗೂ ಸಿಬ್ಬಂದಿ ನಗರ ಬಿಟ್ಟು ಹೊರ ಜಿಲ್ಲೆಗಳಿಗೆ ಹೋಗುವ ಹಾಗಿಲ್ಲ. ಆದೇಶ ಉಲ್ಲಂಘಿಸಿ ಊರುಗಳಿಗೆ ಹೋದರೆ ಪೊಲೀಸರ ಆರೋಗ್ಯಕ್ಕೆ ಅವರೆ ಹೊಣೆ ಎಂದು ಆದೇಶದಲ್ಲಿ ಹೇಳಿದೆ.
ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ತಮಗಿರುವ ಸಾಂದರ್ಭಿಕ ರಜೆಯಲ್ಲಿ ಐದು ದಿನಗಳ ಕಾಲ ಕಡಿತಗೊಳಿಸಿ ಕಡ್ಡಾಯ ಹೋಂ ಕ್ವಾರಂಟೈನ್ ಒಳಗಾಗಬೇಕೆಂದು ಸೂಚಿಸಿದೆ. ಅಲ್ಲದೇ ಸ್ವಂತ ಖರ್ಚಿನಲ್ಲಿ ಕೋವಿಡ್ ತಪಾಸಣೆ ಮಾಡಿಸಬೇಕು. ವರದಿ ನೆಗೆಟಿವ್ ಬಂದರೆ ಪೊಲೀಸ್ ಠಾಣೆಗೆ ಬರಬೇಕು ಎಂದು ಹೇಳಿದೆ.