ಬೆಂಗಳೂರು : ಮರಾಠ ಅಭಿವೃದ್ಧಿ ನಿಗಮ ಮಂಡಳಿ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆದಿದ್ದ ರಾಜ್ಯ ಬಂದ್ ರಾಜಧಾನಿಯಲ್ಲಿ ವಿಫಲವಾಗಿದೆ.
ಮಲ್ಲೇಶ್ವರಂ, ಯಶವಂತಪುರ, ಸದಾಶಿವನಗರ ಹಾಗೂ ನಗರದ ಇನ್ನಿತರೆ ಭಾಗದಲ್ಲಿ ಅಂಗಡಿ-ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಬಂದ್ ಯಾವುದೇ ಪ್ರಭಾವ ಬೀರಿದಂತೆ ಕಾಣುತ್ತಿಲ್ಲ.
1 ಗಂಟೆ ತಡವಾಗಿ ಅಂಗಡಿಗಳು ಓಪನ್ : ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಪರಿಸ್ಥಿತಿ ಅವಲೋಕಿಸಿ ಒಂದು ಗಂಟೆ ತಡವಾಗಿ ಅಂಗಡಿ-ಮುಂಗಟ್ಟುಗಳನ್ನು ತೆರೆಯುತ್ತಿದ್ದು, ಜನ ಸಂಚಾರ ಯಥಾಸ್ಥಿತಿಯಲ್ಲಿದೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಬಂದ್ ಕಾವು ತಣ್ಣಾಗಾಗಿದೆ. ನಗರದಾದ್ಯಂತ ಪೊಲೀಸ್ ಭದ್ರತೆ ಹೆಚ್ಚಾಗಿದ್ದು, ವ್ಯಾಪಾರಸ್ಥರು ಧೈರ್ಯದಿಂದ ಅಂಗಡಿಗಳನ್ನು ತೆರೆದು ವ್ಯಾಪಾರ ಆರಂಭಿಸಿದ್ದಾರೆ.
ಇದನ್ನೂ ಓದಿ:ಕನ್ನಡ ಹೋರಾಟಗಾರರ ಬಗ್ಗೆ ಗೌರವ ಇದೆ.. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ತಪ್ಪಲ್ಲ.. ಸಚಿವ ಜೋಶಿ
ಬಸ್,ಆಟೋ, ಟ್ಯಾಕ್ಸಿ ಹೋಟೆಲ್ ಸೇವೆ ಮುಂದುವರಿಕೆ : ನಿನ್ನೆ ಸಾರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದಂತೆಯೇ ಇಂದು ಸಾರಿಗೆ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಆಟೋ,ಟ್ಯಾಕ್ಸಿ ಸೇವೆಗಳು ಸಹಜವಾಗಿದೆ. ಬಂದ್ಗೆ ಕೆಲ ಸಂಘಟನೆಗಳ ಬೆಂಬಲಿಸಿದ್ರಿಂದ ಕೆಲವೊಂದಿಷ್ಟು ಆಟೋಗಳು ತಮ್ಮ ಸೇವೆ ನಿಲ್ಲಿಸಿದ್ದು, ಹೋಟೆಲ್ಗಳು ಕೂಡ ತೆರೆದಿವೆ.
ಮಧ್ಯಾಹ್ನದ ಮೇಲೆ ಚಿನ್ನದ ಮಳಿಗೆಗಳು ಆರಂಭ : ರಾಜ್ಯ ಬಂದ್ ಹಿನ್ನೆಲೆಯಲ್ಲಿ ಹಾನಿ ಸಂಭವಿಸಬಹುದೆಂಬ ಭಯದಿಂದ ನಗರದಲ್ಲಿರುವ ಚಿನ್ನಾಭರಣದ ಅಂಗಡಿಗಳು ಬಂದ್ ಆಗಿವೆ. ಮಧ್ಯಾಹ್ನದ ಬಳಿಕ ಅಂಗಡಿಗಳನ್ನು ತೆರೆಯಲು ಮಾಲೀಕರು ನಿರ್ಧರಿಸಿದ್ದಾರೆ.