ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸದ್ಯ ಸೈಬರ್ ಪೊಲೀಸ್ ಠಾಣೆಯಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಯಾವುದೇ ದೂರುಗಳನ್ನ ಸ್ವೀಕಾರ ಮಾಡುತ್ತಿಲ್ಲ.
ಸೈಬರ್ ಪೊಲೀಸರು ಫೇಸ್ಬುಕ್, ಪ್ರಚೋದನಕಾರಿ ಹೇಳಿಕೆ, ಭಾಷಣ,ಇನ್ಸ್ಟಾ, ಮ್ಯಾಟ್ರಿಮೋನಿಯಲ್, ಕ್ರೆಡಿಟ್ ಕಾರ್ಡ್ ಸ್ವೈಪಿಂಗ್, ಹಣ ದುರ್ಬಳಕೆ, ಹನಿಟ್ರಾಪ್, ಟ್ವೀಟರ್ ಹ್ಯಾಕ್, ಇಮೇಲ್ ಹ್ಯಾಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಕ್ರಮದ ಕುರಿತು ತನಿಖೆ ನಡೆಸುತ್ತಿದ್ದರು.
ಸದ್ಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂ ಠಾಣೆಯಲ್ಲಿ 2019 ಜನವರಿಯಿಂದ ಇಲ್ಲಿಯವರೆಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ತಾಂತ್ರಿಕ ದೋಷದಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಸದ್ಯ ಯಾವುದೇ ದೂರುಗಳನ್ನ 2020ರ ವರೆಗೆ ಸೈಬರ್ ಪೊಲಿಸರು ಸ್ವೀಕಾರ ಮಾಡುವುದಿಲ್ಲ ನೋಟಿಸ್ ಹಾಕಿದ್ದಾರೆ.
ಮತ್ತೊಂದೆಡೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೂಡ ಒಂದು ಸುತ್ತೋಲೆ ಹೊರಡಿಸಿದ್ದು, ಒಂದು ವೇಳೆ ಸೈಬರ್ ಪ್ರಕರಣಗಳು ಪತ್ತೆಯಾದರೆ ಸಿಲಿಕಾನ್ ಸಿಟಿಯಲ್ಲಿರುವ ಆಯಾ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಕಾರಣವೇನು?
ಈವರೆಗೆ ಹತ್ತು ಸಾವಿರ ಪ್ರಕರಣಗಳು ದಾಖಲಾಗಿದ್ದು, ಸದ್ಯ ಇವುಗಳನ್ನು ಭೇದಿಸಲು ಸಿಟಿಯಲ್ಲಿ ಒಂದೇ ಸೈಬರ್ ಠಾಣೆ ಇದೆ. ಸದ್ಯಕ್ಕೆ ಒಬ್ಬರು ಇನ್ಸ್ಫೆಕ್ಟರ್, ಇಬ್ಬರು ಪಿಎಸ್ಐ, ಹಾಗೂ 23 ಪೇದೆ, 26 ಸಿಬ್ಬಂದಿ ಪೊಲಿಸರು ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.