ETV Bharat / state

ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು 'ಬೆಂಕಿ' ಮಾತು - ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಕಾಂಗ್ರೆಸ್ ಶಾಸಕರೊಬ್ಬರು ವಿಧಾನಸಭೆ ಕಲಾಪದ ವೇಳೆ ಬೆಂಕಿ ಹಚ್ಚಬೇಕಿತ್ತಲ್ಲ ಅದಕ್ಕೆ ಹೀಗೆಲ್ಲಾ ಮಾಡಿದ್ರು, ಎಂಬ ಮಾತು ಸದನದಲ್ಲಿ ಕೋಲಾಹಲ, ಗದ್ದಲಕ್ಕೆ ಕಾರಣವಾಯಿತು.

Noisy, Bustle in assembly
ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
author img

By

Published : Feb 19, 2020, 4:59 PM IST

ಬೆಂಗಳೂರು: ಬೆಂಕಿ ಹಚ್ಚಬೇಕಿತ್ತಲ್ಲ ಅದಕ್ಕೆ ಹೀಗೆಲ್ಲಾ ಮಾಡಿದ್ರು ಎಂದು ಕಾಂಗ್ರೆಸ್ ಶಾಸಕರೊಬ್ಬರು ಆಡಿದ ಮಾತು ವಿಧಾನಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.

ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಶಾಸಕರ ನಡುವೆ ಮಾತಿನ ಚಕಮಕಿ, ಕೂಗಾಟ, ಗದ್ದಲ ಉಂಟಾಯಿತು. ಆಗ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಾನು ಪದೇ ಪದೇ ಎದ್ದು ನಿಲ್ಲಬಾರದು ಎಂದು ಸಂಕಲ್ಪ ಮಾಡಿದ್ದೇನೆ. ಅದನ್ನು ಅರ್ಥ ಮಾಡಿಕೊಳ್ಳಿ. ನೀವು ಮಾತನಾಡಬೇಕಾದರೆ ಹೆಸರು ಕಳಿಸಿ. ಸದನದ ಘನತೆ ಉಳಿಸಿ ಎಂದು ಮನವಿ ಮಾಡಿದರು.

ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯು.ಟಿ. ಖಾದರ್ ಅವರು ಬೆಂಕಿಹಚ್ಚುವ ಮಾತು ಹೇಳಿದ್ದರೆ ಅದು ತಪ್ಪು. ಅದನ್ನು ಪರಿಶೀಲಿಸಿ ಎಂದರು. ಬಿಜೆಪಿ ಶಾಸಕ ರೇಣುಕಾಚಾರ್ಯ ಮಧ್ಯ ಪ್ರವೇಶಿಸಿ, ಖಾದರ್ ಕರ್ನಾಟಕಕ್ಕೆ ಬೆಂಕಿಬೀಳುತ್ತೆ ಅಂತಲೇ ಹೇಳಿದ್ದು ಎಂದಾಗ, ಮತ್ತೆ ಗದ್ದಲ ಉಂಟಾಯಿತು. ಆಗ ಸಿದ್ದರಾಮಯ್ಯ ಮಾತನಾಡಿ, ನಿಷೇಧಾಜ್ಞೆ ಬಗ್ಗೆ ಜನರ ಮನವೊಲಿಸುವ ಕೆಲಸವನ್ನು ಪೊಲೀಸರು ಮಾಡಬಹುದಿತ್ತು. ಬೆಂಗಳೂರಿನಲ್ಲಿ ಜನರ ಮನವೊಲಿಸುವ ಕೆಲಸವನ್ನು ಮಾಡಿದ್ದರು. ಆದರೆ, ಮಂಗಳೂರಿನಲ್ಲಿ ಅದನ್ನು ಮಾಡಲಿಲ್ಲ ಎಂದರು.

ಈ ವೇಳೆ ಬೆಂಕಿ ಹಚ್ಚಬೇಕಿತ್ತಲ್ಲ ಅದಕ್ಕೆ ಹೀಗೆಲ್ಲಾ ಮಾಡಿದ್ರು ಎಂದು ಕಾಂಗ್ರೆಸ್ ಶಾಸಕರೊಬ್ಬರು ಆಡಿದ ಮಾತಿಗೆ ಗರಂ ಆದ ಆಡಳಿತ ಪಕ್ಷದ ಶಾಸಕರು ಸದನದಲ್ಲಿ ಕೋಲಾಹಲ, ಗದ್ದಲ ಉಂಟುಮಾಡಿದರು. ಮಧ್ಯಪ್ರವೇಶಿಸಿದ ಸ್ಪೀಕರ್ ಅವರು ಆಡಳಿತ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದರು. ನಿಮಗೂ ಮಾತಾಡಲು ಅವಕಾಶ ಕೊಡುತ್ತೇನೆ. ಆದರೆ ಈಗ ಸಿದ್ದರಾಮಯ್ಯ ಮಾತಾಡುವಾಗ‌ ಮಧ್ಯೆ ಎದ್ದು ನಿಲ್ಲಬೇಡಿ. ನಾನು ಪದೇ ಪದೇ ಎಚ್ಚರಿಕೆ ಕೊಡಲ್ಲ, ನೀವೇ ಅರ್ಥ ಮಾಡಿಕೊಳ್ಳಬೇಕು ಎಂದರು. ಆಗ ಸದನ ಶಾಂತವಾಯಿತು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಮಾತು ಮುಂದುವರಿಸಿ, ಖಾದರ್ ಬೆಂಕಿ‌ಹತ್ತಿಸುತ್ತೇನೆ ಅಂತ ಹೇಳಿದ್ದಾರಾ? ಹಾಗಿದ್ದರೆ ಅದನ್ನು ತೋರಿಸಿ. ಬೆಂಕಿ ಹತ್ತಿಸುತ್ತೇನೆ ಅಂದರೆ ಬೇರೆ, ಬೆಂಕಿ ಹಚ್ಚುತ್ತೇನೆ ಅಂದ್ರೆ ಅದೇ ಬೇರೆಯಾಗುತ್ತದೆ. ಬೆಂಕಿ ಉರಿಯುತ್ತದೆ ಅಂದರೆ ಅದೂ ಬೇರೆಯಾಗಲಿದೆ. ಇಲ್ಲಿ ಎಲ್ಲವನ್ನು ತುರುಕುವುದು ಬೇಡ ಎಂದು ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.