ಬೆಂಗಳೂರು: ಮದ್ಯಪ್ರಿಯರಿಗೆ ನಿರಾಸೆ ಉಂಟಾಗುವ ಸಾಧ್ಯತೆ ಇದ್ದು, ರಾಜ್ಯದ ಬಾರ್ಗಳ ಮುಂದೆ ಎಣ್ಣೆ ಸಿಗಲ್ಲ ಎಂದು ನಮೂದಿಸಿ ನೋ ಸ್ಟಾಕ್ ಬೋರ್ಡ್ ಶೀಘ್ರದಲ್ಲೇ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೆ. ಎಸ್. ಬಿ. ಸಿ. ಎಲ್ ನಿಂದ ಬಾರ್ ಅಂಡ್ ವೈನ್ ಶಾಪ್ಗಳಿಗೆ ಮದ್ಯ ಸರಬರಾಜಿನಲ್ಲಿ ತೊಂದರೆ ಎದುರಾಗಲಿದೆ ಎಂದು ಬಾರ್ ಮಾಲೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹೊಸ ಸಾಫ್ಟ್ವೇರ್ ಅಳವಡಿಕೆ ಮಾಡಲಾಗಿದ್ದು, ಬಿಲ್ ಆಗುವುದು ತಡವಾಗುತ್ತಿದೆ. ಸರ್ವರ್ ಸಮಸ್ಯೆ ಕೂಡ ಆಗಿದೆ. ಹೀಗಾಗಿ, ಇಂದಿನಿಂದ ಬಹುತೇಕ ಬಾರ್ ಗಳಲ್ಲಿ ಎಣ್ಣೆ ಖಾಲಿಯಾಗಲಿದೆ. ಹೀಗೆ ಮುಂದುವರೆದರೆ ನಾಳೆ ಮದ್ಯ ಪೂರೈಸುವ ಡಿಪೋಗಳ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ಮದ್ಯ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಗೋವಿಂದ ರಾಜ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಓದಿ: ರಾಜ್ಯದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಮುನ್ನ ಸಿಎಂ ರಾಜೀನಾಮೆ ನೀಡಲಿ: ಸಿದ್ದರಾಮಯ್ಯ