ಬೆಂಗಳೂರು : ಸರ್ಕಾರಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಓಪಿಡಿಯಲ್ಲಿ ಸೇವೆ ಸಿಗದೇ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ನರಳಾಟ ಅನುಭವಿಸ್ತಿದ್ದಾರೆ.
ಆಸ್ಪತ್ರೆಗೆ ಬಂದು ಒಂದು ವಾರಗಳೇ ಕಳೆದಿದ್ರೂ, ರೋಗಿಗಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆಯನ್ನ ಕಲ್ಪಿಸದೇ ಕ್ರೂರಿಗಳ ಹಾಗೆ ಇಲ್ಲಿನ ವೈದ್ಯರು ವರ್ತಿಸುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ. ಊಟಕ್ಕೂ ಹಣವಿಲ್ಲದೇ ಒದ್ದಾಟ ಅನುಭವಿಸ್ತಿರೋ ಈ ಬಡ ಜೀವಿಗಳು, ನಮ್ಮ ಕಷ್ಟವನ್ನ ಯಾರೂ ಕೇಳ್ತಿಲ್ಲ. ನಮ್ಮ ಪ್ರಾಣಕ್ಕೆ ಏನಾದ್ರೂ ತೊಂದ್ರೆ ಆದ್ರೆ ಯಾರು ಹೊಣೆ ಎಂದು ಚಿಂತಿಸ್ತಿದ್ದಾರೆ.
ಇನ್ನು ಈ ಬಗ್ಗೆ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರನ್ನ ಕೇಳಿದ್ರೆ, ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈಗ ಆಗಿರೋ ತೊಂದರೆ ಬಗ್ಗೆ ಗೊತ್ತಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸೋದಾಗಿ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ದುಡ್ಡು ಕಟ್ಟೋಕೆ ಆಗಲ್ಲ ಎಂದು ಸರ್ಕಾರಿ ಆಸ್ಪತ್ರೆಗೆ ಬಂದ್ರೆ, ಇಲ್ಲಿ ಯಾವೊಬ್ಬ ವೈದ್ಯರು ಕೂಡ ರೋಗಿಗಳ ಸಮಸ್ಯೆಯನ್ನ ಕೇಳ್ತಿಲ್ಲ. ಯಾರಾದ್ರೂ ಬಡ ರೋಗಿಯೊಬ್ಬ ಸಾಯೋ ಮುನ್ನ ವೈದ್ಯರು ಎಚ್ಚೆತ್ತುಕೊಳ್ಳಬೇಕಿದೆ.