ETV Bharat / state

ದುರಸ್ತಿ ಕಾರ್ಯ: ಸಿಲಿಕಾನ್ ಸಿಟಿಯ ಹಲವೆಡೆ ಮೂರು ದಿನ ಪವರ್ ಕಟ್! - Bangalore power cut news

ಇಂದಿನಿಂದ ಬುಧವಾರದವರೆಗೆ ಸಿಲಿಕಾನ್ ಸಿಟಿಯ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರಲಿದೆ ಎಂದು ಬೆಸ್ಕಾಂ ತಿಳಿಸಿದೆ.

no power in Bangalore three days
ಬೆಂಗಳೂರಿನಲ್ಲಿ ಮೂರು ದಿನ ಪವರ್ ಕಟ್
author img

By

Published : Jun 27, 2022, 11:29 AM IST

ಬೆಂಗಳೂರು: ವಿದ್ಯುತ್ ಮಾರ್ಗಗಳ ನಿರ್ವಹಣೆ, ಹೊಸದಾಗಿ ಕೇಬಲ್ ಅಳವಡಿಕೆ, ಟ್ರಾನ್ಸ್​ಫಾರ್ಮರ್ ದುರಸ್ತಿ ಸೇರಿದಂತೆ ಹಲವು ಕಾಮಗಾರಿಗಳ ಸಂಬಂಧ ಇಂದಿನಿಂದ ಬುಧವಾರದವರೆಗೆ ಸಿಲಿಕಾನ್ ಸಿಟಿಯ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇಂದು ಪವರ್ ಕಟ್: ಇಂದು ಪೂರ್ವ ವಲಯದ ಪ್ರದೇಶಗಳಾದ ಹಳೇ ಬೈಯಪ್ಪನಹಳ್ಳಿ, ಕುಕ್ಸನ್ ರಸ್ತೆ, ಡೇವಿಸ್ ರಸ್ತೆ, ರಿಚರ್ಡ್ಸ್ ಪಾರ್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ಕೆಹೆಚ್​​ಬಿ ಕಾಲೋನಿ, ಹಚಿನ್ಸ್ ರಸ್ತೆ, ವೀಲರ್ ರಸ್ತೆ, ಬಾಣಸವಾಡಿ ರೈಲು ನಿಲ್ದಾಣ ರಸ್ತೆ, ಲಿಂಗರಾಜಪುರ, ಐಟಿಸಿ ಮುಖ್ಯರಸ್ತೆ, ಜೀವನಹಳ್ಳಿ ಮತ್ತು ಬಾಣಸವಾಡಿ ಮುಖ್ಯರಸ್ತೆ ಹಾಗೂ ಸುತ್ತಮುತ್ತಲು ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಪಶ್ಚಿಮ ವಲಯದ ಬಿಎಂಟಿಸಿ ಬಸ್ ಡಿಪೋ, ಶಂಕರಪ್ಪ ಎಸ್ಟೇಟ್ ಸೇರಿದಂತೆ ಉತ್ತರ ವಲಯದಲ್ಲಿ ಇಸ್ರೋ ಲೇಔಟ್ ಮತ್ತು ನ್ಯೂ ಬಿಇಎಲ್ ರಸ್ತೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ದಕ್ಷಿಣದಲ್ಲಿ ಕೋರಮಂಗಲದ 3, 4, 5 ಮತ್ತು 6 ಬ್ಲಾಕ್‌ಗಳು, ಸಕ್ರಾ ಆಸ್ಪತ್ರೆ, ಔಟರ್ ರಿಂಗ್‌ರೋಡ್‌ನ ಸಲಾರ್‌ಪುರಿಯಾ ಸತ್ವ ಸುತ್ತ ಮುತ್ತ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಮಂಗಳವಾರ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ನಾಳೆ ಬೆಂಗಳೂರು ಪೂರ್ವ ವಲಯ ವ್ಯಾಪ್ತಿಯ ಪ್ರದೇಶಗಳಾದ ಹೆಚ್‌ಆರ್‌ಬಿಆರ್ ಲೇಔಟ್‌ನ 2 ಮತ್ತು 3ನೇ ಬ್ಲಾಕ್, ಕಾಮನಹಳ್ಳಿ ಮತ್ತು ಬಾಣಸವಾಡಿ ಪ್ರದೇಶಗಳಲ್ಲಿ ಬೆಳಿಗ್ಗೆ 11ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಬುಧವಾರ ಎಲ್ಲೆಲ್ಲಿ? ಬುಧವಾರ ಪೂರ್ವ ವಲಯದ ಸಿಎಂಆರ್ ರಸ್ತೆ, ಹೆಚ್‌ಆರ್‌ಬಿಆರ್ ಲೇಔಟ್​ನ 3 ಬ್ಲಾಕ್, ರಾಮಯ್ಯ ಲೇಔಟ್, ಕರವಳ್ಳಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ದಕ್ಷಿಣ ವಲಯದ ಕೋರಮಂಗಲ 2 ಬ್ಲಾಕ್, ಮಡಿವಾಳ ಟೋಟಲ್ ಮಾಲ್, ದವನಂ ಜ್ಯುವೆಲರ್ಸ್ ಕಟ್ಟಡ, ಮಡಿವಾಳ ಸಂತೆ, ಸಿದ್ದಾರ್ಥ ಕಾಲೋನಿ, ಕೋರಮಂಗಲ 5 ಬ್ಲಾಕ್, ಇಂಡಸ್ಟ್ರಿಯಲ್ ಲೇಔಟ್‌ನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಇದನ್ನೂ ಓದಿ: ರೈಸ್​ ಮಿಲ್​ನಲ್ಲಿ ಅಕ್ಕಿ ಮೂಟೆ ಬಿದ್ದು ಇಬ್ಬರು ಕಾರ್ಮಿಕರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.