ETV Bharat / state

ವಿಧಾನಸೌಧ-ವಿಕಾಸಸೌಧದಲ್ಲಿ ಖಾಸಗಿ ವಾಹನಗಳಿಗೆ ಇನ್ಮುಂದೆ ರಾತ್ರಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ

author img

By

Published : Jun 21, 2019, 8:58 PM IST

ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ರಾತ್ರಿ ವೇಳೆ ಸರ್ಕಾರಿ ವಾಹನಕ್ಕಿಂತ ಹೆಚ್ಚಾಗಿ ಖಾಸಗಿ ವಾಹನಗಳನ್ನು ಪಾರ್ಕಿಂಗ್​ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟಲು ಆಡಳಿತ ಸುಧಾರಣಾ ಇಲಾಖೆ ಈಗ ಖಾಸಗಿ ವಾಹನಗಳಿಗೆ 'ನೈಟ್​ ಟೈಮ್​ ನೋ ಪಾರ್ಕಿಂಗ್​' ನಿಯಮ ಜಾರಿಗೊಳಿಸಲು ಮುಂದಾಗಿದೆ.

ವಿಧಾನಸೌಧ

ಬೆಂಗಳೂರು: ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಇನ್ನು ಮುಂದೆ ರಾತ್ರಿ ವೇಳೆ ಸರ್ಕಾರಿ ವಾಹನ ಹೊರತುಪಡಿಸಿ ಖಾಸಗಿ ವಾಹನಗಳನ್ನು ಪಾರ್ಕಿಂಗ್ ಮಾಡುವಂತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ವಿಕಾಸಸೌಧದ -1 ಹಾಗೂ 3 ನೇ ಅಂತಸ್ತುಗಳಲ್ಲಿ ಸರ್ಕಾರಿ ವಾಹನಗಳಲ್ಲದೇ ಖಾಸಗಿ ವಾಹನಗಳೂ ಬೇಕಾಬಿಟ್ಟಿಯಾಗಿ ನಿಂತಿರುವ ಹಿನ್ನೆಲೆಯಲ್ಲಿ ಆಡಳಿತ ಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಸರ್ಕಾರದ ಬೇರೆ ಬೇರೆ ಇಲಾಖೆಗಳ ಹೆಸರಿನಲ್ಲಿ ತಂದು ನಿಲ್ಲಿಸಿರುವ ಬಹುತೇಕ ವಾಹನಗಳು ಗುಜರಿಗೆ ಹಾಕುವ ಸ್ಥಿತಿಯಲ್ಲಿವೆ. ಅವುಗಳನ್ನು ಸ್ಥಳದಿಂದ ಎತ್ತಂಗಡಿ ಮಾಡುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ಅದೇ ರೀತಿ ವಿಧಾನಸೌಧ, ವಿಕಾಸಸೌಧ ಪ್ರವೇಶಿಸಲು ಪಾಸ್ ಪಡೆದ ಖಾಸಗಿಯವರ ವಾಹನಗಳು ತಿಂಗಳುಗಟ್ಟಲೆ ಬೀಡು ಬಿಟ್ಟಿರುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಉಪಕಾರ್ಯದರ್ಶಿ (ಕಾರ್ಯಕಾರಿ) ನಾಗರಾಜ್ ಅವರು ವಿವರ ಪಡೆದಿದ್ದಾರೆ. ವಿಧಾನಸೌಧದಲ್ಲಿ ಕೆಲಸ ಮಾಡುವ ಕೆಲ ನೌಕರರನ್ನೇ ಬುಕ್ ಮಾಡಿಕೊಂಡು ಕೆಲ ಡೀಲರ್​ಗಳು ಕೂಡಾ ಹಲವು ಕಾರುಗಳನ್ನು ತಂದು ನಿಲ್ಲಿಸಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಎರಡೂ ಕಟ್ಟಡಗಳಲ್ಲಿ ಸರ್ಕಾರಿ ವಾಹನಗಳಿಗೆ ಮಾತ್ರ ಅವಕಾಶವಿದ್ದು, ಸಿಬ್ಬಂದಿ ಹಾಗೂ ಖಾಸಗಿ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂದು ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.

Intro:ಬೆಂಗಳೂರು : ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಇನ್ನು ಮುಂದೆ ರಾತ್ರಿ ವೇಳೆ ವಾಹನ ಪಾರ್ಕಿಂಗ್ ಮಾಡುವಂತಿಲ್ಲ…!?Body:ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಹೊರಟಿದೆ ಮಹತ್ವದ ಸುತ್ತೋಲೆ.
ವಿಕಾಸಸೌಧದ -1 ಹಾಗೂ 3 ನೇ ಅಂತಸ್ತುಗಳಲ್ಲಿ ಸರ್ಕಾರಿ ವಾಹನಗಳಲ್ಲದೇ ಖಾಸಗಿ ವಾಹನಗಳೂ ಬೇಕಾಬಿಟ್ಟಿಯಾಗಿ ನಿಂತಿರುವ ಹಿನ್ನೆಲೆ ವಿಧಾನಸೌಧ ಹಾಗೂ ವಿಕಾಸಸೌಧಗಳಲ್ಲಿ ಕೆಲಸ ಮಾಡುವವರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಸರ್ಕಾರದ ಬೇರೆ, ಬೇರೆ ಇಲಾಖೆಗಳ ಹೆಸರಿನಲ್ಲಿ ತಂದು ನಿಲ್ಲಿಸಿರುವ ಬಹುತೇಕ ವಾಹನಗಳು ಗುಜರಿಗೆ ಹಾಕುವ ಸ್ಥಿತಿಯಲ್ಲಿವೆ. ಅವುಗಳನ್ನು ಸ್ಥಳದಿಂದ ಎತ್ತಂಗಡಿ ಮಾಡುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ಅದೇ ರೀತಿ ವಿಧಾನಸೌಧ,ವಿಕಾಸಸೌಧ ಪ್ರವೇಶಿಸಲು ಪಾಸ್ ಪಡೆದ ಖಾಸಗಿಯವರ ವಾಹನಗಳು ತಿಂಗಳುಗಟ್ಟಲೆಯಿಂದ ಅಲ್ಲೇ ಬೀಡು ಬಿಟ್ಟಿರುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಉಪಕಾರ್ಯದರ್ಶಿ (ಕಾರ್ಯಕಾರಿ) ನಾಗರಾಜ್ ಅವರು ವಿವರ ಕೇಳಿದ್ದಾರೆ.
ಕೆಲಸ ಮಾಡುವ ಕೆಲ ನೌಕರರನ್ನೇ ಬುಕ್ ಮಾಡಿಕೊಂಡು ಕೆಲ ಡೀಲರುಗಳು ಕೂಡಾ ಹಲವು ಕಾರುಗಳನ್ನು ತಂದು ನಿಲ್ಲಿಸಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಎರಡೂ ಕಟ್ಟಡಗಳಲ್ಲಿ ಸರ್ಕಾರಿ ವಾಹನಗಳಿಗೆ ಮಾತ್ರ ಅವಕಾಶವಿದ್ದು, ಸಿಬ್ಬಂದಿ ಹಾಗೂ ಖಾಸಗಿ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.