ETV Bharat / state

ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವ ಅಗತ್ಯ ಇಲ್ಲ: ಸಿಎಂ ಸಿದ್ದರಾಮಯ್ಯ - ಜೈನಮುನಿ ಹತ್ಯೆ ಪ್ರಕರಣ

ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನಮುನಿ ಕಾಮಕುಮಾರ ನಂದಿ‌ ಮಹಾರಾಜರ ಹತ್ಯೆ ಪ್ರಕರಣವನ್ನು ಪೊಲೀಸರ ಕೈಯಲ್ಲೇ ಗಂಭೀರವಾಗಿ ತನಿಖೆ ಮಾಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

CM React on Jain Muni murder case
CM React on Jain Muni murder case
author img

By

Published : Jul 11, 2023, 8:05 PM IST

ಬೆಂಗಳೂರು: ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ. ನಮ್ಮ ರಾಜ್ಯದ ಪೊಲೀಸರ ಕೈಯಿಂದಲೇ ಗಂಭೀರವಾಗಿ ತನಿಖೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.‌ ಶೂನ್ಯ ವೇಳೆಯಲ್ಲಿ ಜೈನ ಮುನಿ ಕೊಲೆ ಹಾಗೂ ಟಿ ನರಸೀಪುರ ಯುವ ಬ್ರಿಗೇಡ್ ಕಾರ್ಯಕರ್ತ ಕೊಲೆ ಪ್ರಕರಣ ಸಂಬಂಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಜೈನ ಮುನಿ ಕೊಲೆ ಅಮಾನುಷವಾದದ್ದು. ಯಾರೇ ಕೊಲೆ ಮಾಡಿದರೂ ಶಿಕ್ಷೆ ಆಗಬೇಕು. ಎಫ್​ಐಆರ್​ನಲ್ಲಿಯೂ ಇಬ್ಬರ ಹೆಸರನ್ನು ಹಾಕಲಾಗಿದೆ. ಹಾಗಾಗಿ ಎರಡನೇ ಆರೋಪಿಯನ್ನು ರಕ್ಷಣೆ ಮಾಡುವ ಪ್ರಶ್ನೆನೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದರಲ್ಲಿ ಪೊಲೀಸರ ತಪ್ಪು ಎಲ್ಲಿದೆ? ಪೊಲೀಸರು ಉತ್ತಮ‌ ಕೆಲಸ ಮಾಡಿದ್ದಾರೆ. ಜೈನ ಮುನಿ ಕೊಲೆ ಮಾಡಿರುವುದು ದಿಗ್ಬ್ರಮೆ ಮೂಡಿಸುವ ಕೊಲೆಯಾಗಿದೆ. ಇಂತಹದ್ದು ಮರುಕಳಿಸಬಾರದು. ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಯಾರಿಗೂ ರಕ್ಷಣೆ ಕೊಡುವ ಪ್ರಶ್ನೆನೇ ಇಲ್ಲ. ಇಲ್ಲಿ ಎಷ್ಟೇ ದೊಡ್ಡವರು ಇದ್ದರೂ ರಕ್ಷಣೆ ಮಾಡುವ ಪ್ರಶ್ನೆನೇ ಇಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯಾರೇ ತಪ್ಪಿತಸ್ಥರು ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಟಿ ನರಸೀಪುರ, ಜೇವರ್ಗಿ ಪ್ರಕರಣ ಆಗಲಿ ಯಾವ ಪ್ರಭಾವಕ್ಕೂ, ಒತ್ತಡಕ್ಕೂ ಮಣಿಯಲ್ಲ. ಈಗ ಸಿಬಿಐಗೆ ಕೊಡುವ ಅಗತ್ಯ ಇಲ್ಲ. ಪೊಲೀಸರ ಕೈಯಲ್ಲೇ ಗಂಭೀರವಾಗಿ ತನಿಖೆ ಮಾಡಿಸುತ್ತೇವೆ ಎಂದರು.

ಟಿ ನರಸೀಪುರ ಪ್ರಕರಣವು ಆಕಸ್ಮಿಕವಾಗಿ ನಡೆದಿದ್ದು. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತೇವೆ. ಪೊಲೀಸರ ನಿರ್ಲಕ್ಷ್ಯ ಇದ್ದರೂ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು.

ಇದಕ್ಕೂ ಮುಂಚೆ ಗೃಹ ಸಚಿವರು ಉತ್ತರ ನೀಡುತ್ತಾ, ಜೈನ‌ ಮುನಿಯವರ ಬರ್ಬರ ಹತ್ಯೆಯನ್ನು ನಾನು ಕಂಡಿರಲೇ ಇಲ್ಲ. ಕಂಪ್ಲೇಂಟ್ ಬಂದ‌ ಆರು ತಾಸಿನಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಮ್ಮ ಸರ್ಕಾರ ಬಂದ ಬಳಿಕ ಈ ತರದ ಕೊಲೆ ನಡೆದಿದ್ದು ಅಂತಲ್ಲ, ನಿಮ್ಮ ಸರ್ಕಾರ ಇದ್ದಾಗಲೂ ಇಂಥ ಪ್ರಕರಣ ನಡೆಯುತ್ತಿತ್ತು. ನಮ್ಮ ಪೊಲೀಸರು ಸಮರ್ಥರಾಗಿಲ್ವಾ? ತಮ್ಮ ಕಾಲದಲ್ಲಿ ಇಂಥ ಪ್ರಕರಣಗಳು ಆಗಿದ್ದಾಗ ಆವತ್ತು ಪೊಲೀಸರು ಸಮರ್ಥರಾಗಿದ್ದಿಲ್ವಾ? ನೀವೇ ಆಗ ನಮ್ಮ‌ ಪೊಲೀಸರು ಸಮರ್ಥರಾಗಿದ್ದರೆಂದು ಹೇಳುತ್ತಿದ್ದಿರಿ. ಈಗ ಒಂದೂವರೆ ತಿಂಗಳಲ್ಲಿ ಅಸಮರ್ಥರಾಗುತ್ತಾರಾ? ನಮ್ಮ ಪೊಲೀಸರು ದೇಶದಲ್ಲೇ ಬೆಸ್ಟ್ ಪೊಲೀಸರಾಗಿದ್ದಾರೆ. ಸಿಬಿಐ ತನಿಖೆ ಏಕೆ ಬೇಕು? ನಮ್ಮ ಪೊಲೀಸರ ಮೇಲೆ ವಿಶ್ವಾಸ ಇಲ್ಲವಾ? ಸಿಬಿಐ ತನಿಖೆ ಅಗತ್ಯ ಇಲ್ಲ. ಹಾಗಾಗಿ ಸಿಬಿಐಗೆ ಕೊಡುವ ಪ್ರಶ್ನೆ ಬರುವುದಿಲ್ಲ ಎಂದರು.

ಹಿರೇಕೋಡಿಯ ಆಶ್ರಮಕ್ಕೆ ಸುಮಾರು 4 ಎಕರೆ ಜಮೀನು ಇದ್ದು ಈ ಜಮೀನಿನಲ್ಲಿಯೇ ಆಶ್ರಮವನ್ನು ಸ್ಥಾಪಿಸಿರುತ್ತಾರೆ. 5-07-2023 ರಂದು ರಾತ್ರಿ 10 ಘಂಟೆಯಿಂದ ಆಶ್ರಮದಿಂದ ಆಚಾರ್ಯರು ಏಕಾಏಕಿ ಕಾಣೆಯಾಗಿದ್ದರು. ಈ ವಿಚಾರ ಭಕ್ತರಿಗೆ ಗೊತ್ತಾಗಿ ಆಚಾರ್ಯ ಅವರ ಸುಳಿವು ಸಿಕ್ಕದೇ ಇದ್ದಾಗ 7-07-2023ರಂದು ಆಚಾರ್ಯ ಕಾಮಕುಮಾರ ನಂದಿ ಚಾರಿಟೇಬಲ್ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಡಾ. ಭೀಮಪ್ಪಾ ಉಗಾರೆ ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು ಎಂದು ಮಾಹಿತಿ ನೀಡಿದರು.

ಪ್ರಕರಣದ ತನಿಖೆಯಲ್ಲಿ ಆರೋಪಿಗಳಾದ ನಾರಾಯಣ ಬಸಪ್ಪ ಹಾಗೂ ಎರಡನೇಯ ಆರೋಪಿ ಹಸನಸಾಬ ಮಕ್ಕುಲ್‌ ದಾಲಾಯತ್​ ಅವರನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಸಮಯದಲ್ಲಿ ಮೊದಲನೇ ಆರೋಪಿಗೆ ಆಚಾರ್ಯ ಅವರು 6,00,000 ರೂಪಾಯಿಗಳ ಸಾಲವನ್ನು ನೀಡಿದ್ದು, ಅದನ್ನು ಮರಳಿಸುವಂತೆ ಪೀಡಿಸುತ್ತಿದ್ದರಿಂದ ಇಬ್ಬರು ಆರೋಪಿಗಳು ಸೇರಿ ಆಚಾರ್ಯರನ್ನು 5.07.2023 ರಂದು ರಾತ್ರಿ ಸುಮಾರು 10 ಗಂಟೆಯ ಸಮಯಕ್ಕೆ ಕೊಲೆ ಮಾಡಿ ಶರೀರವನ್ನು ತುಂಡು ತುಂಡು ಮಾಡಿ ಮೊದಲನೇ ಆರೋಪಿಯ ಸ್ವಗ್ರಾಮವಾದ ರಾಯಬಾಗ ತಾಲೂಕಿನ ಖಟಕಭಾವಿ ಗ್ರಾಮದಲ್ಲಿ ಇರುವ ತನ್ನ ಸ್ವಂತ ಜಮೀನಿನಲ್ಲಿ ಪಾಳು ಬಿದ್ದಿರುವ ಕೊಳವೆ ಭಾವಿಯಲ್ಲಿ ಹಾಕಿದ್ದರು ಎಂದು ವಿವರಿಸಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಮಾಜಿ ಸಿಎಂ ಬೊಮ್ಮಾಯಿ, ಐದನೇ ತಾರೀಕಿನಂದು ಜೈನ ಮುನಿ ಕಾಣೆ ಆದ ಬಳಿಕ ಪ್ರಾರಂಭವಾಯಿತು. ಆರನೇ ತಾರಿಕಿನಂದು ಪ್ರಕರಣ ದಾಖಲಿಸಿದ್ದೀರಿ. ಇದೊಂದು ಅಮಾನವೀಯ ಕೃತ್ಯ.‌ ಎಲ್ಲಾ ಕೊಲೆಗಳನ್ನು ಎಲ್ಲಾ ರೀತಿ ನೋಡಲು ಆಗುತ್ತಾ? ಜೈನ ಮುನಿ ಎಲ್ಲವನ್ನೂ ತ್ಯಾಗ ಮಾಡಿರುವವರು. ಹಣಕಾಸು ವಿಚಾರವಾಗಿ ಕೊಲೆ ಮಾಡಲು ಸಾಧ್ಯನಾ? ಇದೊಂದು ಬರ್ಬರ ಕೊಲೆಯಾಗಿದೆ. ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿದ್ದಾರೆ. ಹಾಗಾದರೆ ಇದರ ಹಿಂದೆ ದೊಡ್ಡ ಪಿತೂರಿ ಇದೆ. ಪೊಲೀಸರು ಮೃತ ದೇಹ ಸಿಕ್ಕ ಮೇಲೆ ಅಲ್ಲೇ ಅಂತ್ಯಗೊಳಿಸಿದರು. ಹಿಂದಿರುವ ಕೆಲವರನ್ನು ರಕ್ಷಣೆ ಮಾಡುತ್ತಿದ್ದೀರಿ. ಇದನ್ನು ಮುಚ್ಚಿ ಹಾಕಲಾಗುತ್ತಿದೆ. ಈ ಘಟನೆ ದೇಶದಲ್ಲಿ ಗಾಬರಿ ಉಂಟು ಮಾಡಿದೆ. ಜೈನ ಮುನಿ ಹತ್ಯೆ ಆಗಿರುವುದು ದೇಶದಲ್ಲೇ ಪ್ರಥಮ ಬಾರಿಯಾಗಿದೆ. ಇದು ಸಾಮಾನ್ಯ ಹತ್ಯೆ ಅಂದು ಕೊಳ್ಳಬೇಡಿ. ಆಳವಾದ ತನಿಖೆ ಅಗತ್ಯ ಇದೆ. ಜೈನ‌ ಮುನಿನೂ ಬಿಡಲ್ಲ ಅಂದರೆ ಸಾಮಾನ್ಯರ ಪರಿಸ್ಥಿತಿ ಹೇಗೆ? ಸಿಬಿಐಗೆ ಕೊಟ್ಟ ಕೂಡಲೇ ರಾಜ್ಯದ ಪೊಲೀಸರ ದಕ್ಷತೆ ಕಡಿಮೆ ಆಗುವುದಿಲ್ಲ. ಇದರಲ್ಲಿ ಪ್ರತಿಷ್ಟೆ ಮಾಡುವ ಅಗತ್ಯ ಇಲ್ಲ. ಮುಚ್ಚಿಡುವ ರೀತಿ ತೀರ್ಮಾನ ಸರಿಯಲ್ಲ. ಇದರ ಪರಿಣಾಮ ಏನಾಗಬಹುದೆಂದು ತಿಳಿದುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಟಿ ನರಸೀಪುರ ಹನುಮ‌ ಜಯಂತಿ ವೇಳೆ ನಡೆದ ಗಲಾಟೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆಯಾಗಿದೆ. ಮಣಿಕಂಠ ಮತ್ತು ಸ್ನೇಹಿತರು ವೇಣುಗೋಲ್ ಜೊತೆ ಗಲಾಟೆ ಆಯಿತು. ಬಳಿಕ ಸಂಧಾನ ಮಾಡಬೇಕು ಅಂತ ಅವರನ್ನು ಕರೆಸಿ ಕೊಲೆ ಮಾಡಲಾಗಿದೆ. ಯಾರೇ ಕೊಲೆ ಮಾಡಲಿ ಅವರಿಗೆ ಶಿಕ್ಷೆ ಆಗಬೇಕು. ಅದರ ಹಿಂದೆ ಪಿತೂರಿ ಇರಬಹುದು.‌ ಯಾವುದಾದರು ಶಕ್ತಿಗಳು ಇರಬಹುದು. ಸಣ್ಣ ವಿಚಾರಕ್ಕೆ ಕೊಲೆ ನೆಡೆದರೆ ಹೇಗೆ? ಗಲಾಟೆ ಆದಾಗಲೇ ಅವರಿಗೆ ವಾರ್ನಿಂಗ್ ಕೊಟ್ಟು ಶಾಂತಿ ಕಾಪಾಡಲು ಯತ್ನ ಮಾಡಿಲ್ಲ. ಪೊಲೀಸರು ಎಫ್​ಐಆರ್​ ಆಗೇ ಇಲ್ಲ, ಆಗಲೇ ಹೇಳಿಕೆ ಕೊಡಲು ಆರಂಭಿಸಿದ್ದಾರೆ.‌ ಹಲವಾರು ಪ್ರಕರಣಗಳು ನಡೆದಿದ್ದು ಇಂಥ ವಿಚಾರಕ್ಕಾಗಿ, ಅವರಿಗೆ ಭಯ ಇಲ್ಲ. ಅವರಿಗೆ ಕುಮ್ಮಕ್ಕು ಸಿಗ್ತಾ ಇದೆ. ಸಣ್ಣ ಸಣ್ಣ ವಿಚಾರ ಕೊಲೆಯಲ್ಲಿ ಅಂತ್ಯವಾಗುತ್ತಿದೆ. ಇಂಥ ಘಟನೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಂಧನ‌ ಆದವರ ಹಿಂದೆ ಯಾರು ಯಾರು ಇದ್ದಾರೆ ಅನ್ನೋದು ತನಿಖೆ ನಡೆಯಬೇಕು. ಇಂಥ ಕೊಲೆಗಳನ್ನು ಹಗುರವಾಗಿ ತೆಗೆದುಕೊಂಡರೆ, ಯಾವ ಸಂದೇಶ ಕೊಡುತ್ತೀರಿ? ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಲವಾರು ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಸರಣಿಯೋಪಾದಿಯಲ್ಲಿ ನಡೆಯುತ್ತಿದೆ. ಎಲ್ಲಾ ಕಡೆ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂದುಕೊಳ್ಳಬೇಕಾ? ಪೊಲೀಸರಿಂದಲೇ ತನಿಖೆ ನಡೆಸುತ್ತೀರ ಅಂದರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನೀವು ಹೇಳುವುದಕ್ಕೂ ಅಲ್ಲಿ ಪೊಲೀಸರು ನಡೆದುಕೊಳ್ಳುವುದಕ್ಕೂ ಹೊಂದಾಣಿಕೆ ಇಲ್ಲ. ನಮಗೆ ಸರ್ಕಾರದ ವಿರುದ್ಧ ವಿಶ್ವಾಸ ಇಲ್ಲ. ಹಾಗಾಗಿ ನಾವು ಧರಣಿ ಮಾಡುತ್ತೇವೆ ಎಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಜೈನ‌ ಮುನಿಗಳ ಹತ್ಯೆ ಕೇಸ್: ಇಬ್ಬರು ಆರೋಪಿಗಳನ್ನ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.