ETV Bharat / state

ಕಂಟೈನ್ಮೆಂಟ್​ ವಲಯದಲ್ಲಿ ಮೆಟ್ರೋ ಸ್ಟಾಪ್ ಇಲ್ಲ, ಟೋಕನ್​ ಸಿಸ್ಟಮ್​ ಕ್ಯಾನ್ಸಲ್​: ಹೀಗಿದೆ ಮಾರ್ಗಸೂಚಿ - Namma metro start from spet 5

ನಮ್ಮ ಮೆಟ್ರೋ ಇದೀಗ ಸೆಪ್ಟಂಬರ್ 7ರಿಂದ ಆರಂಭವಾಗಲಿದೆ. ಆದ್ರೆ ಕಂಟೈನ್ಮೆಂಟ್​​​ ವಲಯ ವ್ಯಾಪ್ತಿಗೆ ಯಾವುದೇ ನಿಲ್ದಾಣ ಬಂದರೆ, ಅಂತಹ ನಿಲ್ದಾಣದಲ್ಲಿ ಪ್ರವೇಶ/ ನಿರ್ಗಮನ ದ್ವಾರಗಳನ್ನು ತೆರೆಯಲಾಗುವುದಿಲ್ಲ. ಅಲ್ಲದೇ ಟೋಕನ್ ಮಾರಾಟವನ್ನು ನಿಷೇಧಿಸಲಾಗಿದೆ.

ನಮ್ಮ ಮೆಟ್ರೋ
ನಮ್ಮ ಮೆಟ್ರೋ
author img

By

Published : Sep 3, 2020, 9:56 PM IST

ಬೆಂಗಳೂರು: ಕೊರೊನಾ ಕಾರಣಕ್ಕೆ ಸ್ಥಗಿತವಾಗಿದ್ದ ನಮ್ಮ ಮೆಟ್ರೋ ಇದೀಗ ಸೆಪ್ಟಂಬರ್ 7ರಿಂದ ಆರಂಭವಾಗಲಿದೆ. ಇದಕ್ಕಾಗಿ ನಮ್ಮ ಮೆಟ್ರೋ ಕೇಂದ್ರದ ಮಾರ್ಗಸೂಚಿಯೊಂದಿಗೆ ತನ್ನ ಎಸ್​​ಒಪಿಯನ್ನ ಬಿಡುಗಡೆ ಮಾಡಿದೆ.

ಕಂಟೈನ್ಮೆಂಟ್​​​ ವಲಯದ ವ್ಯಾಪ್ತಿಗೆ ಯಾವುದೇ ನಿಲ್ದಾಣ ಬಂದರೆ, ಅಂತಹ ನಿಲ್ದಾಣದಲ್ಲಿ ಪ್ರವೇಶ/ ನಿರ್ಗಮನ ದ್ವಾರಗಳನ್ನು ತೆರೆಯಲಾಗುವುದಿಲ್ಲ. ಈ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಪ್ರಯಾಣಿಕರು ಸಮೀಪದ ನಿಲ್ದಾಣಗಳನ್ನು ಹತ್ತಲು ಮತ್ತು ಇಳಿಯಲು ಉಪಯೋಗಿಸಬಹುದು.

ಕಂಟೇನ್​​ಮೆಂಟ್ ವಲಯದಲ್ಲಿ ಮೆಟ್ರೋ ಸ್ಟಾಪ್ ಇಲ್ಲ

ಟಿಕೆಟ್ ಮಾರಾಟ ನಿಷೇಧ:

ಟೋಕನ್ ಮಾರಾಟವನ್ನು ನಿಷೇಧಿಸಿದ ಕಾರಣ ಪ್ರಯಾಣಿಕರು ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್​ಗಳನ್ನು ಮಾತ್ರ ಉಪಯೋಗಿಸಬಹುದು. ನಿಲ್ದಾಣಕ್ಕೆ ಒಳಬರುವ ಮುನ್ನ ಪ್ರಯಾಣಕ್ಕೆ ಬೇಕಾಗಿರುವ ಸಾಕಷ್ಟು ಮೊತ್ತವು ಸಾರ್ಟ್ ಕಾರ್ಡ್​ನಲ್ಲಿ ಇದೆ ಎಂದು ಖಚಿತ ಪಡಿಸಿಕೊಳ್ಳಬೇಕು. ಎಲ್ಲಾ ನಿಲ್ದಾಣಗಳಲ್ಲಿ ಒದಗಿಸಲಾದ ಯುಪಿಐ, ಕ್ಯೂಆರ್ ಕೋಡ್ ಅಥವಾ ಪೇಟಿಎಂ ಮೂಲಕ ರಿಚಾರ್ಜ್ ಮಾಡಬಹುದು.

ಪ್ರಯಾಣಿಸುವಾಗ ಸಂಪರ್ಕವನ್ನು ಕಡಿಮೆ ಮಾಡಲು ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್ ರೀಚಾರ್ಜ್​ ಮಾಡುವುದನ್ನು ನಿಲ್ಲಿಸಲಾಗಿದೆ. ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಆನ್‌ಲೈನ್ ಮುಖಾಂತರ ಇಂಟರ್‌ನೆಟ್ ಮತ್ತು ನಮ್ಮ ಮೆಟ್ರೋ ಮೊಬೈಲ್ ಆ್ಯಪ್​​ನನ್ನು ಬಳಸಿ ರಿಚಾರ್ಜ್ ಮಾಡಿಕೊಳ್ಳಬಹುದು. ನಮ್ಮ ಮೆಟ್ರೋ ಮೊಬೈಲ್ ಆ್ಯಪ್​​ನನ್ನ ಸೆಪ್ಟೆಂಬರ್ 7 ರಂದು ಬಿಡುಗಡೆ ಮಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.