ETV Bharat / state

ಕೊರೊನಾ ಭೀತಿ: ಗಾರ್ಮೆಂಟ್ಸ್ ನೌಕರರಿಗೂ ವೇತನ ಸಹಿತ ರಜೆಗೆ ಆಗ್ರಹ - No leave for garment workers

ದಿನೇ ದಿನೆ ಕೊರೊನಾ ತನ್ನ ಕರಾಳತೆ ತೋರಿಸುತ್ತಲೇ ಇದೆ. ಹಾಗಾಗಿ ಕೆಲ ಕಂಪನಿಗಳು ತಮ್ಮ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಿವೆ. ಆದರೆ ರಾಜ್ಯದ ಗಾರ್ಮೆಂಟ್ಸ್​ ಕಾರ್ಮಿಕರಿಗೆ ರಜೆ ಕೊಟ್ಟಿಲ್ಲ. ಹಾಗಾಗಿ ಇವರಿಗೂ ವೇತನ ಸಹಿತ ರಜೆ ನೀಡುವ ಆಗ್ರಹ ಕೇಳಿ ಬಂದಿದೆ.

No leave for garment workers
ಗಾರ್ಮೆಂಟ್ಸ್ ನೌಕರರಿಗೆ ಘೋಷಿಸಿಲ್ಲ ರಜೆ!
author img

By

Published : Mar 20, 2020, 11:44 PM IST

ಬೆಂಗಳೂರು: ನಗರದ ಪೀಣ್ಯ ಇಂಡಸ್ಟ್ರಿಯಲ್ ಪ್ರದೇಶ, ಲಗ್ಗೆರೆ, ಹೊಸೂರು ರಸ್ತೆ, ಮೈಸೂರು ರಸ್ತೆ, ದೊಮ್ಮಲೂರು, ಕನಕಪುರ, ಬೊಮ್ಮನಹಳ್ಳಿ ಹಾಗೂ ಕೆಂಗೇರಿ ಸೇರಿದಂತೆ ಹೊರವಲಯದ ಪ್ರದೇಶಗಳಲ್ಲಿ 2 ಸಾವಿರಕ್ಕೂ ಅಧಿಕ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, 10 ಲಕ್ಷಕ್ಕೂ ಅಧಿಕ ಕಾರ್ಮಿಕರು ನಿತ್ಯ ಕೆಲಸಕ್ಕೆ ತೆರಳುತ್ತಿದ್ದಾರೆ. ಅವರಿಗೆಲ್ಲ ವೇತನ ಸಹಿತ ರಜೆ ಖಾತ್ರಿ ಪಡಿಸುವಂತೆ ಸಿಐಟಿಯು ಸರ್ಕಾರಕ್ಕೆ ಆಗ್ರಹಿಸಿದೆ.

No leave for garment workers
ಗಾರ್ಮೆಂಟ್ಸ್ ನೌಕರರಿಗೆ ಘೋಷಿಸಿಲ್ಲ ರಜೆ!

ಎಲ್ಲೆಡೆ ಜನರು ಕೊರೊನಾ ಭೀತಿಯಿಂದ ಮನೆಯಿಂದ ಹೊರ ಬರಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಆದರೆ, ಗಾರ್ಮೆಂಟ್ಸ್​ನ ಕಾರ್ಮಿಕರಿಗೆ ಮಾತ್ರ ಇಂದಿಗೂ ರಜೆ ಘೋಷಿಸಿಲ್ಲ. ಸರ್ಕಾರ ಈ‌ ವರ್ಗವನ್ನು ಕೊರೊನಾ ಮುಂಜಾಗ್ರತಾ ವಿಚಾರದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕೇರಳ ಸರ್ಕಾರದ ಸುಧಾರಣಾ ಕ್ರಮಗಳು ರಾಜ್ಯ ಸರ್ಕಾರಕ್ಕೆ ಮಾದರಿಯಾಗಬೇಕು ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಒತ್ತಾಯಿಸಿದರು.

ಉತ್ಪಾದನಾ ವಲಯ ಮತ್ತು ಸಾರಿಗೆ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೂ ವೇತನ ಸಹಿತ ರಜೆ ನೀಡಬೇಕು. ಕೊರೊನಾ ಸೆಲೆಕ್ಟೆಡ್ ಜನರಿಗಷ್ಟೇ ಬರುವುದಿಲ್ಲ. ಬಡವರಿಗೂ‌ ಬರುತ್ತದೆ ಎಂದರು. ಉತ್ಪಾದನಾ ವಲಯವಾದ ಗಾರ್ಮೆಂಟ್ಸ್​ಗಳಲ್ಲಿ‌ ಲಕ್ಷಾಂತರ ಜನರು ಒಂದೇ ಜಾಗದಲ್ಲಿ‌ ಕೆಲಸ ಮಾಡುತ್ತಾರೆ. ಹೀಗಾಗಿ, ಇಲ್ಲಿ ಕೊರೊನಾ ಸೋಂಕು‌ ಹರಡುವ ಸಾಧ್ಯತೆ ಹೆಚ್ಚು. ಬಹುತೇಕ‌ ಗಾರ್ಮೆಂಟ್ಸ್​​ಗಳಲ್ಲಿ ‌ಮಾಸ್ಕ್‌, ಸ್ಯಾನಿಟೈಸರ್ ಸೇರಿದಂತೆ ಯಾವುದೇ ಸೌಲಭ್ಯ ಕೂಡಾ ನೀಡದೆ ಕಾರ್ಮಿಕರನ್ನು ಅಪಾಯಕ್ಕೆ ದೂಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.