ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರಕಾರ ಮೇಜರ್ ಸರ್ಜರಿ ಮಾಡಿ ಹಿರಿಯ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಆ ಲೀಸ್ಟಲ್ಲಿ ಟ್ರಾಫಿಕ್ ನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಪಿ ಹರಿಶೇಖರನ್ ಕೆಎಸ್ಆರ್ಪಿ ಐಜಿಪಿಯಾಗಿ ವರ್ಗವಣೆಯಾಗಿದ್ದಾರೆ.
ಆದ್ರೆ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಪಿ ಹರಿಶೇಖರನ್ ಟ್ರಾಫಿಕ್ ಇಲಾಖೆಯಲ್ಲಿದ್ದ ಸಂದರ್ಭದಲ್ಲಿ ವಾಹನ ಅಪಘಾತ ತಡೆಗಟ್ಟುವ ಸಲುವಾಗಿ ನೋ ಹೆಲ್ಮೆಟ್ ನೋ ಪೆಟ್ರೋಲ್ ರೂಲ್ಸ್ ತಂದಿದ್ದರು.
ಇದರ ಸಲುವಾಹಿ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ಸಭೆ ಕರೆದು ಇದರ ಕುರಿತು ಮಾಹಿತಿ ನೀಡಿ ಅವರಿಂದಲೂ ಸಲಹೆ ಪಡೆದುಕೊಂಡಿದ್ದರು. ಅಲ್ಲದೆ ಅಗಸ್ಟ್ 5 ರಿಂದ ಈ ನಿಯಮಜಾರಿಗೆ ತರುವುದಕ್ಕೂ ಚಿಂತನೆ ನಡೆಸಿದ್ದರು. ಇದಕ್ಕೆ ಪೆಟ್ರೋಲ್ ಬಂಕ್ ಮಾಲೀಕರು ಕೂಡ ಒಪ್ಪಿಗೆ ಸೂಚಿಸಿದ್ದರು.
ಆದ್ರೆ ಇತ್ತಿಚ್ಚೆಗೆ ಸಿಸಿಬಿ ಆಯುಕ್ತರಾಗಿದ್ದ ರವೀಕಾಂತೆಗೌಡ ಟ್ರಾಫಿಕ್ ಇಲಾಖೆ ಆಯುಕ್ತರಾಗಿ ಬಂದ ಹಿನ್ನೆಲೆ ಅವರು ಈ ಕುರಿತು ಯಾವುದೇ ಸೂಚನೆಯನ್ನ ನೀಡದೆ ಇರುವ ಕಾರಣ ಪೆಟ್ರೋಲ್ ಬಂಕ್ ಮಾಲೀಕರು ಒಂದು ವೇಳೆ ಟ್ರಾಫಿಕ್ ಇಲಾಖೆ ಈ ಹೊಸ ನಿಯಮ ಅನುಸರಿಸಿ ಎಂದು ಹೇಳಿದ್ದಲ್ಲಿ ಅದನ್ನು ಪಾಲಿಸಲು ನಾವು ಸಿದ್ದ ಎಂಬ ತಿರ್ಮಾನಕ್ಕೆ ಬಂದಿದ್ದಾರೆ.