ETV Bharat / state

ರಜೆ ಮುಂದುವರಿಸುವ ಬಗ್ಗೆ ಇಂದು ನಿರ್ಧಾರವಿಲ್ಲ: ಸಿಎಂ ಜೊತೆ ಚರ್ಚಿಸಿ ತೀರ್ಮಾನ ಎಂದ ಸಚಿವ ನಾಗೇಶ್

ರಜೆ ಮುಂದುವರಿಸುವ ಬಗ್ಗೆ ಇವತ್ತು ನಿರ್ಣಯ ತಗೆದುಕೊಳ್ಳಲ್ಲ. ಸಿಎಂ ಹಾಗೂ ಗೃಹ ಸಚಿವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಆರು‌ ಮಕ್ಕಳು, ಸಣ್ಣ ವಿಷಯವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ ಇಷ್ಡು ದೊಡ್ಡದು ಮಾಡಿದ್ದಾರೆ ಎಂದು ಬಿ ಸಿ ನಾಗೇಶ್ ಹೇಳಿದ್ದಾರೆ.

ಶಿಕ್ಷಣ ಸಚಿವ ಬಿಸಿ ನಾಗೇಶ್
ಶಿಕ್ಷಣ ಸಚಿವ ಬಿಸಿ ನಾಗೇಶ್
author img

By

Published : Feb 9, 2022, 6:08 PM IST

ಬೆಂಗಳೂರು: ಪಾಪ ಮಕ್ಕಳು ಯಾರದ್ದೋ ಪ್ರಚೋದನೆಗೆ ಒಳಗಾಗಿ ಶಾಲೆ ಬಾಯ್ಕಾಟ್ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯನ್ನು ಬಳಕೆ ಮಾಡಿಕೊಂಡು ಕೆಲ ಸಂಘಟನೆಗಳು ಕುಮ್ಮಕ್ಕು ಕೊಟ್ಟವು. ಕೆಲ ರಾಜಕೀಯ ಪಕ್ಷಗಳು ಇದನ್ನೂ ಬಳಸಿಕೊಂಡವು. ರಾಜ್ಯದಲ್ಲಿನ ಕಾನೂನು ಪರಿಸ್ಥಿತಿ ಗೃಹ ಸಚಿವರಿಗೆ ಗೊತ್ತಾಗುತ್ತೆ ಹೀಗಾಗಿ ಅವರ ಜೊತೆ ಚರ್ಚೆ ಮಾಡುತ್ತೇವೆ ಎಂದರು.

ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ

ಕೋರ್ಟ್​​​​​​ನಲ್ಲಿ ಇಂದು ತೀರ್ಪು ಬರಬಹುದು ಅನ್ನೋ ನಿರೀಕ್ಷೆ ಇತ್ತು. ಅದು ವಿಸ್ತೃತ ಪೀಠಕ್ಕೆ ವರ್ಗಾವಣೆ ಆಗಿದೆ. ಯಾವುದೇ ಮಧ್ಯಂತರ ಆದೇಶವೂ ಆಗಿಲ್ಲ. ಸರ್ಕಾರದ ಸುತ್ತೋಲೆ ಈಗಲೂ ಚಾಲೂ ಇದೆ. ಶಾಲೆಗೆ ಮಕ್ಕಳು ಬರುವ ಸಂದರ್ಭದಲ್ಲಿ 1995ರ ರೂಲ್ ಅನುಸಾರವೇ ಎಲ್ಲ ಮಕ್ಕಳು ಬರಬೇಕು. ಶಾಂತಿ ಕಾಪಾಡಬೇಕು. ಏಪ್ರಿಲ್ ಪರೀಕ್ಷೆಗೆ ಮಕ್ಕಳು ಸಿದ್ದರಾಗಬೇಕು ಎಂದು ಶಿಕ್ಷಣ ಸಚಿವರು ಸಲಹೆ ನೀಡಿದರು.

ರಜೆ ವಿಚಾರ, ಸಿಎಂ ಜತೆ ಚರ್ಚಿಸಿ ನಿರ್ಧಾರ: ರಜೆ ಮುಂದುವರಿಸುವ ಬಗ್ಗೆ ಇವತ್ತು ನಿರ್ಣಯ ತಗೆದುಕೊಳ್ಳಲ್ಲ. ಸಿಎಂ ಹಾಗೂ ಗೃಹ ಸಚಿವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಆರು‌ ಮಕ್ಕಳು ಸಣ್ಣ ವಿಷಯವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ ಇಷ್ಡು ದೊಡ್ಡದು ಮಾಡಿದ್ದಾರೆ ಎಂದರು.

ನಾಳೆ ಬೆಳಗ್ಗೆ ಶುಕ್ರವಾರ ಎಕ್ಸಾಂ ಮಾಡಬೇಡಿ ಅಂತಾರೆ. ಕುರಾನ್ ಪ್ರಕಾರ ಕೆಲ ಸಬ್ಜೆಕ್ಟ್ ಇರಬಾರದು ಅಂತಾರೆ. ಹಾಗೆ ಮಾಡೋದಕ್ಕೆ ಸಾಧ್ಯಾನಾ? ಸರ್ಕಾರ ಇರೋದು ಸಂವಿಧಾನದ ಪ್ರಕಾರ ಆಡಳಿತ ನಡೆಸುವುದಕ್ಕೆ. ಕೋರ್ಟ್ ಏನು ನಿರ್ಣಯ ತೆಗೆದುಕೊಳ್ಳುತ್ತದೋ ಆ ಪ್ರಕಾರ ಸರ್ಕಾರ ನಡೆದುಕೊಳ್ಳುತ್ತದೆ. ಡಿಸೆಂಬರ್ ನಿಂದ ಇದು ಶುರು ವಾಗಿದೆ, ಬೇಕಾದಷ್ಟು ಸಲ ಸ್ಪಷ್ಟನೆ ಕೊಟ್ಟಿದ್ದೀನಿ ಎಂದರು.

ಆರು ಮಕ್ಕಳ ಸಮಸ್ಯೆ ಇಷ್ಟೊಂದು ದೊಡ್ಡದಾಗಿದೆ: ಮೊದಲು ಇದು ಆರು ಮಕ್ಕಳ ಸಮಸ್ಯೆ ಮಾತ್ರ ಆಗಿತ್ತು. ಸಮಾಜದ ಮುಖಂಡರು ಸೇರಿ ಆರು ಮಕ್ಕಳ ಜೊತೆ ಚರ್ಚೆ ಮಾಡಿ ಬಗೆಹರಿಸಲು ಮುಂದಾಗಿದ್ದರು. ಆದರೆ, ಕೆಲವು ರಾಜಕೀಯ ಪಕ್ಷಗಳು ಎಂಟ್ರಿ ಆದಾಗ ಇದು ರಾಜ್ಯದ ಬೇರೆ ಬೇರೆ ಭಾಗಕ್ಕೆ ಹರಡಿತು. ಅಲ್ಲಿ ತನಕ ಕೇಸರಿ ಶಾಲೂ ಬಂದಿರಲಿಲ್ಲ, ನೀಲಿ ಶಾಲೂ ಬಂದಿರಲಿಲ್ಲ ಎಂದರು.

ರಾಜಕೀಯ ಪಕ್ಷಗಳ ನಾಯಕರು ಬಂದ ಮೇಲೆ ಹಿಜಾಬ್ ಕೇಸರಿ ಸಂಘರ್ಷ ನಡೆದಿತ್ತು. ಯಾರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೋ ಅವರೇ ಮೂಲಭೂತ ಹಕ್ಕು ಅಂತ ಹೇಳಿದರು. ಅನೇಕ ಕಾಂಗ್ರೆಸ್ ನಾಯಕರು ಈ ವಿಚಾರ ಮಾತಾಡಿದಾಗ ಇದು ರಾಜ್ಯಕ್ಕೆ ಹಬ್ಬಿದೆ. ನಾನು ಸ್ಪಷ್ಟವಾಗಿ ಹೇಳ್ತಿದ್ದೀನಿ. ಫೆಬ್ರವರಿ 1 ರ ತನಕ ಯಾವುದೇ ರಾಜಕೀಯ ವಾಸನೆ ಇದರಲ್ಲಿ ಇರಲಿಲ್ಲ. ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಹೇಳಿದಾಗಲೇ ಇದು ರಾಜಕೀಯ ವಾಸನೆ ಕಾಣಿಸಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಯಾವುದೇ ಮಂತ್ರಿಗಳು ಸಿದ್ದರಾಮಯ್ಯ ಹೇಳಿಕೆ ಕೊಡುವ ಮೊದಲು ಹೇಳಿಕೆ ಕೊಟ್ಟಿಲ್ಲ. ಸಿದ್ದರಾಮಯ್ಯ ರಿಯಾಕ್ಷನ್​​ಗೆ ನಮ್ಮ ಮಂತ್ರಿಗಳು ರಿಯಾಕ್ಷನ್ ಕೊಟ್ಟಿದ್ದಾರೆ. ಉಡುಪಿಯಲ್ಲಿ 9 ಕಾಲೇಜುಗಳಿವೆ, ಆ ಯಾವ ಕಾಲೇಜಲ್ಲೂ ಬಾಲಕಿಯರು ಹಿಜಾಬ್ ಹಾಕಿಕೊಂಡು ಬಂದಿಲ್ಲ. ಶಾದಿಭಾಗ್ಯ ಯಾರು ಮಾಡಿದ್ದಾರೆ ಗೊತ್ತಿದೆ, ಅಲ್ಪ ಸಂಖ್ಯಾತ ತುಷ್ಟೀಕರಣ ಯಾರು ಮಾಡುತ್ತಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವರು ಟಾಂಗ್​ ಕೊಟ್ಟರು.

ಇದನ್ನೂ ಓದಿ : ಹಿಜಾಬ್​ ಧರಿಸುವ ಬಗ್ಗೆ ಮಧ್ಯಂತರ ಆದೇಶಕ್ಕೆ ಹೈಕೋರ್ಟ್​ ನಕಾರ..ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.