ಬೆಂಗಳೂರು : ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ಬಿ ವೃಂದದ ವರ್ಗಾವಣಾ ಕೌನ್ಸಿಲಿಂಗ್ ನಡೆಯುತ್ತಿದೆ. ಆದರೆ, ಕೌನ್ಸಿಲಿಂಗ್ ನಡೆಯುವ ಸ್ಥಳದಲ್ಲಿ ಕೋವಿಡ್ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಪ್ರತಿದಿನ ಬೆಳಗ್ಗೆ 9 ರಿಂದ ಶಿಕ್ಷಕರ ಕೌನ್ಸಿಲಿಂಗ್ ನಡೆಯುತ್ತಿದೆ.
ಕಳೆದ ಡಿಸೆಂಬರ್ 16ರಿಂದ ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ಕೌನ್ಸಿಲಿಂಗ್ ನಡೆದಿದೆ. ಇಂದು ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರಿಗೆ ಕೌನ್ಸಿಲಿಂಗ್ ನಡೆಯುತ್ತಿದೆ. ಶಿಕ್ಷಕರು ಕೊರೊನಾ ಭೀತಿಯಲ್ಲೇ ಪ್ರಕ್ರಿಯೆಗೆ ಭಾಗಿಯಾಗುವಂತಾಗಿದೆ.
ಒಮಿಕ್ರಾನ್ ಭೀತಿಯಿದ್ದರೂ ಶಿಕ್ಷಣ ಇಲಾಖೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ಸಾಮಾಜಿಕ ಅಂತರದ ಪಾಲನೆಯಾಗಲಿ, ಸ್ಯಾನಿಟೈಸ್ ವ್ಯವಸ್ಥೆಯಾಗಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇರಲಿಲ್ಲ. ಅಭ್ಯರ್ಥಿಗಳು ಕೂರಲು ಚೇರು ಇಲ್ಲದೆ ಮೆಟ್ಟಿಲುಗಳ ಮೇಲೆ, ಆವರಣದ ಕಂಬಿಗಳ ಮೇಲೆ ಕುಳಿತ್ತಿದ್ದ ದೃಶ್ಯ ಕಂಡು ಬಂದವು.
ಕೌನ್ಸಿಲಿಂಗ್ಗೆ ಹಾಜರಾಗುವ ಶಿಕ್ಷಕರು ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಹೇಳುವ ಶಿಕ್ಷಣ ಇಲಾಖೆಯೇ ಇದೀಗ ನಿಯಮ ಮುರಿದಿದೆ.
ಇದನ್ನೂ ಓದಿ: Omicron : ದ.ಕನ್ನಡದ 5 ಮಂದಿ ಸೇರಿ 14ಕ್ಕೆ ಏರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ..