ETV Bharat / state

ಜನವರಿ 1 ರಿಂದ ಶಾಲೆ ಆರಂಭ ನಿರ್ಧಾರದಲ್ಲಿ ಬದಲಾವಣೆ ಇಲ್ಲ: ಸಿಎಂ - Britain's transformed corona

ಸಿಎಂ ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ಮಾತನಾಡಿ, ಜನವರಿ 1 ರಂದು ಶಾಲೆ ಆರಂಭ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೂ ಶಾಲೆ ಆರಂಭ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಮತ್ತೊಮ್ಮೆ ತೀರ್ಮಾನ‌ ಮಾಡ್ತೇವೆ ಎಂದರು. ಕೊರೊನಾ ರೂಪಾಂತರಿ ಬಗ್ಗೆ ಆತಂಕ ಪಡುವಂತದ್ದು ಏನೂ ಇಲ್ಲ. ಬ್ರಿಟನ್ ರೂಪಾಂತರ ಕೊರೊನಾದಿಂದ ಸಮಸ್ಯೆ ಆಗಿಲ್ಲ. ಇದುವರೆಗೂ ರಾಜ್ಯದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಇದೇ ವೇಳೆ ತಿಳಿಸಿದರು.

No change in school start-up decision from January 1st: CM Yadiyurappa
ಜನವರಿ 1 ರಿಂದ ಶಾಲೆ ಆರಂಭ ನಿರ್ಧಾರದಲ್ಲಿ ಬದಲಾವಣೆ ಇಲ್ಲ: ಸಿಎಂ
author img

By

Published : Dec 28, 2020, 11:18 AM IST

ಬೆಂಗಳೂರು: ಜನವರಿ 1 ರಿಂದ ಶಾಲೆ ಆರಂಭ ನಿರ್ಧಾರದಲ್ಲಿ ಬದಲಾವಣೆ ಆಗಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಜನವರಿ 1 ರಂದು ಶಾಲೆ ಆರಂಭ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೂ ಶಾಲೆ ಆರಂಭ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಮತ್ತೊಮ್ಮೆ ತೀರ್ಮಾನ‌ ಮಾಡ್ತೇವೆ ಎಂದರು.

ಕೊರೊನಾ ರೂಪಾಂತರಿ ಬಗ್ಗೆ ಆತಂಕ ಪಡುವಂತದ್ದು ಏನೂ ಇಲ್ಲ. ಬ್ರಿಟನ್ ರೂಪಾಂತರ ಕೊರೊನಾದಿಂದ ಸಮಸ್ಯೆ ಆಗಿಲ್ಲ. ಇದುವರೆಗೂ ರಾಜ್ಯದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ 80-95 ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲೋದು ನಿಶ್ಚಿತ. ಅಧಿಕಾರ ವಿಕೇಂದ್ರೀಕರಣ ಸಂದರ್ಭದಲ್ಲಿ ಹಲವು ವಿದ್ಯಾವಂತರು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನ ಯಾವುದೇ ನಾಯಕರು ಇದರಲ್ಲಿ ಆಸಕ್ತಿ ವಹಿಸಿರಲಿಲ್ಲ ಎಂದು ತಿಳಿಸಿದರು.

ಮುಂದೆ ಗ್ರಾಮ ಪಂಚಾಯತಿಗೆ ಆಯ್ಕೆಯಾಗುವ ಸದಸ್ಯರಿಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡ್ತೀವಿ. ಗ್ರಾಮಗಳ ಅಭಿವೃದ್ಧಿ ಮಾಡಲು ಸದಸ್ಯರರಿಗೆ ಸಹಕಾರ ಕೊಡಲು ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.