ETV Bharat / state

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, 2023ರವರೆಗೂ ಬೊಮ್ಮಾಯಿ ಅವರೇ ಸಿಎಂ : ಪ್ರಲ್ಹಾದ್ ಜೋಶಿ - ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಪ್ರಹ್ಲಾದ್ ಜೋಶಿ ಸ್ಪಷ್ಟನೆ

ಮತಾಂತರ ತಡೆ ಮಸೂದೆಗೆ ಕಾಂಗ್ರೆಸ್ ಯಾಕೆ ವಿರೋಧಿಸುತ್ತಿದೆ ಅಂತಾ ನನಗೆ ಅರ್ಥವಾಗಿಲ್ಲ. ಒತ್ತಾಯದ, ಬಲವಂತದ, ಆಮಿಷದ ಮತಾಂತರ ತಪ್ಪು. ಇದನ್ನು ಎಲ್ಲರೂ ಒಪ್ಕೋಬೇಕು. ಕಾಲಿಲ್ಲದವರಿಗೆ ಕಾಲು, ಕಣ್ಣಿಲ್ಲದವರಿಗೆ ಕಣ್ಣು ಬರಿಸುತ್ತೇವೆ ಅಂತಾ ಮೂಢನಂಬಿಕೆ ಹುಟ್ಟಿಸಿ ಮತಾಂತರ ಮಾಡಲಾಗುತ್ತಿದೆ..

ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಪ್ರಹ್ಲಾದ್ ಜೋಶಿ ಸ್ಪಷ್ಟನೆ ,Union Minister Prahlad joshi on Leadership change in karnataka
ಪ್ರಹ್ಲಾದ್ ಜೋಷಿ
author img

By

Published : Dec 12, 2021, 9:39 PM IST

ಬೆಂಗಳೂರು : ಹೊಸ ವರ್ಷದಲ್ಲಿ ನಾಯಕತ್ವ ಬದಲಾವಣೆ ಎನ್ನುವುದು ಆಧಾರ ರಹಿತವಾಗಿದೆ. ಮುಂಬರಲಿರುವ ಸಾರ್ವತ್ರಿಕ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ಜನವರಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ನಡೆಯಲಿದೆ ಎಂಬ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬದಲಾವಣೆ ಕೇವಲ ವದಂತಿ. ನಾನು ಅತ್ಯಂತ ಸ್ಪಷ್ಟವಾಗಿ ಅಧಿಕೃತವಾಗಿ ಹೇಳುತ್ತಿದ್ದೇನೆ. ಆ ರೀತಿಯ ಯಾವುದೇ ಬದಲಾವಣೆ ರಾಜ್ಯದಲ್ಲಿ ನಡೆಯಲ್ಲ. ಬದಲಾವಣೆಯ ಪ್ರಸ್ತಾವವೂ ಕೇಂದ್ರದ ಬಳಿ‌ ಇಲ್ಲ ಎಂದರು.

ಯಾವುದೇ ಗೊಂದಲ ಇಲ್ಲದೇ ನಾನು ನಾಯಕತ್ವ ಬದಲಾವಣೆ ಕುರಿತು ಬರುತ್ತಿರುವ ಹೇಳಿಕೆಗಳನ್ನು ತಿರಸ್ಕರಿಸಿ ಹೇಳುತ್ತಿದ್ದೇನೆ, 2023ರ ಸಾರ್ವತ್ರಿಕ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿಯವರೇ ಸಿಎಂ‌ ಆಗಿರುತ್ತಾರೆ. ಇದನ್ನು ನಾನು ಅಧಿಕೃತವಾಗಿ ಸ್ಪಷ್ಟಪಡಿಸುತ್ತಿದ್ದೇನೆ ಎಂದು ತಿಳಿಸಿದರು.

(ಇದನ್ನು ಓದಿ: ಕೃಷಿಕನ ಕಲ್ಯಾಣ! ಅನ್ನದಾತನನ್ನೇ ಅಳಿಯನನ್ನಾಗಿಸಿಕೊಂಡ ರೈತ ಮುಖಂಡ.. ಅಪರೂಪದ ವಚನ ಮಾಂಗಲ್ಯ..)

ಮತಾಂತರ ನಿಷೇಧ ಕಾಯ್ದೆ ಪರ ಜೋಶಿ ಬ್ಯಾಟಿಂಗ್ : ಅಧಿವೇಶನದಲ್ಲಿ ಮತಾಂತರ ತಡೆ ಮಸೂದೆಗೆ ಕಾಂಗ್ರೆಸ್ ವಿರೋಧ ವಿಚಾರ ಕುರಿತು ಮಾತನಾಡಿದ ಕೇಂದ್ರ ಸಚಿವರು, ಮತಾಂತರ ತಡೆ ಮಸೂದೆಗೆ ಕಾಂಗ್ರೆಸ್ ಯಾಕೆ ವಿರೋಧಿಸುತ್ತಿದೆ ಅಂತಾ ನನಗೆ ಅರ್ಥವಾಗಿಲ್ಲ. ಒತ್ತಾಯದ, ಬಲವಂತದ, ಆಮಿಷದ ಮತಾಂತರ ತಪ್ಪು. ಇದನ್ನು ಎಲ್ಲರೂ ಒಪ್ಕೋಬೇಕು. ಕಾಲಿಲ್ಲದವರಿಗೆ ಕಾಲು, ಕಣ್ಣಿಲ್ಲದವರಿಗೆ ಕಣ್ಣು ಬರಿಸುತ್ತೇವೆ ಅಂತಾ ಮೂಢನಂಬಿಕೆ ಹುಟ್ಟಿಸಿ ಮತಾಂತರ ಮಾಡಲಾಗುತ್ತಿದೆ.

ಹೀಗಾಗುವುದಿದ್ದರೆ ಆಸ್ಪತ್ರೆಗಳು ಯಾಕೆ ಬೇಕು? ಇಂತಹ ಮತಾಂತರಗಳಿಗೆ ತಡೆ ಹಾಕಲು ಕಾಯ್ದೆಯಲ್ಲಿ ಪ್ರಸ್ತಾಪ ಇದೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಮಸೂದೆಗೆ ಹಿಂದೂಗಳು ವಿರೋಧಿಸುತ್ತಿಲ್ಲ. ಯಾಕಂದರೆ, ಹಿಂದೂಗಳು ಒತ್ತಾಯದ ಮತಾಂತರ ಮಾಡುತ್ತಿಲ್ಲ. ಯಾವುದೇ ಧರ್ಮೀಯರಿಗೂ ಅವರವರದೇ ಆದ ಪೂಜಾ ಪದ್ಧತಿಗಳಲ್ಲಿ ಮುಕ್ತವಾಗಿರಲು ನಮ್ಮ ದೇಶದಲ್ಲಿ ಅವಕಾಶ ಇದೆ.

ಹಾಗಾಗಿಯೇ, ನಮ್ಮ ದೇಶ ವಿಭಿನ್ನ. ಆದರೆ, ಇಡೀ ಒಂದು ನಿಷ್ಠೆಯನ್ನೇ ಆಸೆ, ಆಮಿಷ ಒಡ್ಡಿ‌ ಬದಲಾಯಿಸೋದನ್ನು ಒಪ್ಪಲು ಆಗಲ್ಲ. ಹಾಗಾಗಿ, ಕಾನೂನು ತರುವ ಚರ್ಚೆ ನಡೀತಿದೆ ಎಂದು ರಾಜ್ಯ ಸರ್ಕಾರದ ಚಿಂತನೆಯನ್ನು ಸಮರ್ಥಿಸಿಕೊಂಡರು.

(ಇದನ್ನೂ ಓದಿ: ಮೊಟ್ಟೆ ಯಾರು ತಿಂತಾರೋ ಅವರಿಗೆ ಕೊಡಿ, ತಿನ್ನಲ್ಲ ಅಂದ್ರೆ ಕೊಡಬೇಡಿ.. ಸಿದ್ದರಾಮಯ್ಯ)

ಲಾಕ್ ಡೌನ್ ನಂತಹ ಕ್ರಮವಿಲ್ಲ: ರಾಜ್ಯದಲ್ಲಿ ಒಮಿಕ್ರಾನ್ ಮೂರನೇ ಕೇಸ್ ಪತ್ತೆಯಾಗಿದೆ. ಹಾಗಂತಾ, ಲಾಕ್‌ಡೌನ್ ಜಾರಿ ಮಾಡುವುದು ಮಾತ್ರವೇ ಕಠಿಣ ಕ್ರಮ‌ ಅಲ್ಲ, ಜನ‌ ಜಾಗೃತರಾಗಿರಬೇಕು. ಮೊದಲ ಅಲೆಯಲ್ಲಿ ಮೊದಲ ಸಲ ದೇಶದಲ್ಲಿ ಲಾಕ್‌ಡೌನ್ ಜಾರಿ ಆಯಿತು. ಆಗ ಕೊರೊನಾ ಹೊಸದು, ಆಗ ನಮ್ಮ ತಯಾರಿ ಇರಲಿಲ್ಲ. ಆಗ ಲಾಕ್‌ಡೌನ್ ಅಗತ್ಯವಿತ್ತು.

ಈಗ ಸ್ಥಳೀಯವಾಗಿ ಕಂಟೇನ್ಮೆಂಟ್ ವಲಯ ಮಾಡಲಾಗಿದೆ. ಜಿಲ್ಲಾವಾರು ಕೊರೊನಾ ನಿಯಮಗಳ ಪಾಲನೆಗೆ ಡಿಸಿಗಳಿಗೆ ಸಿಎಂ ಸೂಚಿಸಿದ್ದಾರೆ. ಲಸಿಕಾಕರಣ ಅಭಿಯಾನ ದೊಡ್ಡದಾಗಿ ಆಗುತ್ತಿದೆ. ಎಲ್ಲರೂ ಮಾಸ್ಕ್, ಸಾಮಾಜಿಕ‌ ಅಂತರ ಪಾಲನೆ ಮಾಡಬೇಕು. ಈಗ ಆರೋಗ್ಯ ಸೌಲಭ್ಯಗಳು ಹೆಚ್ಚಾಗಿವೆ. ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಘಟಕಗಳ ವ್ಯವಸ್ಥೆ ಇದೆ.

ನಾವು ಈಗ ಕೋವಿಡ್ ಎದುರಿಸಲು ಸಂಪೂರ್ಣ ಸಜ್ಜಾಗಿದ್ದೇವೆ. ಅದಕ್ಕಾಗಿ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹಾಕೋದಕ್ಕೆ ಆಗುವುದಿಲ್ಲ ಎಂದು ಲಾಕ್‌ಡೌನ್ ರೀತಿಯ ಕಠಿಣ ನಿರ್ಬಂಧ ಸಾಧ್ಯತೆ ತಳ್ಳಿ ಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.