ETV Bharat / state

ವೈದ್ಯರ ಮೇಲೆ‌ ಹಲ್ಲೆ ಮಾಡಿಲ್ಲ, ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ: ಕರವೇ ಅಶ್ವಿನಿ ಗೌಡ

author img

By

Published : Nov 2, 2019, 7:08 PM IST

ಕಿರಿಯ ವೈದ್ಯರ ಮೇಲೆ ನಾವು ಹಲ್ಲೆ ಮಾಡಿಲ್ಲ. ಕಣ್ಣು ಕಳೆದುಕೊಂಡವರಿಗೆ ನ್ಯಾಯ ಕೇಳಲು ಹೋದಾಗ ಕನ್ನಡ ಭಾಷೆ ಬಗ್ಗೆ ವೈದ್ಯೆ ತುಂಬಾ ಹಗುರವಾಗಿ ಮಾತನಾಡಿದ್ದಾರೆ ಎಂದು ಅಶ್ವಿನಿ ಗೌಡ ಆರೋಪ ಮಾಡಿದ್ದಾರೆ.

ಕರವೇ ಅಶ್ವಿನಿ ಗೌಡ

ಬೆಂಗಳೂರು: ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಅಶ್ವಿನಿ ಗೌಡ ತಳ್ಳಿಹಾಕಿದ್ದಾರೆ.

ಮಿಂಟೋ ಆಸ್ಪತ್ರೆಯಿಂದ ಬೆಂಗಳೂರು ಮೆಡಿಕಲ್ ಕಾಲೇಜುವರೆಗೆ ಕಿರಿಯ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ, ಕ್ಷಮೆ ಕೇಳುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಪಟ್ಟು ಹಿಡಿದಿದ್ದರು.

ಕರವೇ ಅಶ್ವಿನಿ ಗೌಡ

ಈ ಸಂಬಂಧ ಪ್ರತಿಕ್ರಿಯಿಸಿರುವ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ, ಕಿರಿಯ ವೈದ್ಯರ ಮೇಲೆ ನಾವು ಹಲ್ಲೆ ಮಾಡಿಲ್ಲ. ಕಣ್ಣು ಕಳೆದುಕೊಂಡವರಿಗೆ ನ್ಯಾಯ ಕೇಳಲು ಹೋದಾಗ ಕನ್ನಡ ಭಾಷೆ ಬಗ್ಗೆ ವೈದ್ಯೆ ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಕನ್ನಡ ಭಾಷೆ ಗೊತ್ತಿದ್ದರೂ ಯಾಕೆ ಉಡಾಫೆ ಅಂತ ಪ್ರಶ್ನಿಸಿದಾಗ, ನನ್ನಿಷ್ಟ ಎಂದು ಉತ್ತರ ನೀಡಿದ್ದಾರೆ. ಇದಕ್ಕೆ ಕನ್ನಡ ಮಾತಾಡಿ ಅಂತ ವಿನಂತಿ ಮಾಡಿಕೊಂಡಿದ್ದೇವೆ ವಿನಾ ಹಲ್ಲೆ ಮಾಡಿಲ್ಲ ಅಂತ ಅಶ್ವಿನಿ ಗೌಡ ಸ್ಪಷ್ಟಪಡಿಸಿದ್ದಾರೆ.

ಭಾಷೆ, ನೆಲ ಜಲದ ವಿಚಾರ ಬಂದಾಗ ಕರವೇ ಟೊಂಕ ಕಟ್ಟಿ ನಿಂತು ಅದರ ಉಳಿವಿಗೆ ನಿಲ್ಲುತ್ತದೆ. ಹಲ್ಲೆಯೇ ಮಾಡದಿದ್ದಾಗ ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ. ಕ್ಷಮೆ ಯಾವುದೇ ಕಾರಣಕ್ಕೂ ಕೇಳುವುದಿಲ್ಲ. ನಮ್ಮ ಹೋರಾಟ ಮುಂದುವರೆಸಲಿದ್ದೇವೆ ಅಂತ ತಿಳಿಸಿದರು.

Intro:ವೈದ್ಯರ ಮೇಲೆ‌ ಹಲ್ಲೇ ಮಾಡಿಲ್ಲ; ಯಾವುದೇ ಕಾರಣಕ್ಕೂ ಕ್ಷಮೆ ಕೇಳೋಲ್ಲ ಕರವೇ ಅಶ್ವಿನಿ ಗೌಡ..

ಬೆಂಗಳೂರು: ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು.. ಮಿಂಟೋ ಆಸ್ಪತ್ರೆಯಿಂದ ಬೆಂಗಳೂರು ಮೆಡಿಕಲ್ ಕಾಲೇಜು ವರೆಗೆ ಕಿರಿಯ ವೈದ್ಯರು ಪ್ರತಿಭಟನಾ ರ್ಯಾಲಿ ನಡೆಸಿದರು..‌ ಹಲ್ಲೆ ಮಾಡಿರುವ ಅಶ್ವಿನಿ ಗೌಡ ಕ್ಷಮೆ ಕೇಳುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಅಂತ ಕಿರಿಯ ವೈದ್ಯರು ಪಟ್ಟು ಹಿಡಿದರು‌‌..

ಆದರೆ ಈ ಸಂಬಂಧ ಪ್ರತಿಕ್ರಿಯಿಸಿರುವ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ, ಕಿರಿಯ ವೈದ್ಯರ ಮೇಲೆ ನಾವು ಹಲ್ಲೆ ಮಾಡಿಲ್ಲ..
ಕಣ್ಣು ಕಳೆದುಕೊಂಡವರಿಗೆ ನ್ಯಾಯ ಕೇಳಲು ಹೋದಾಗ ಕನ್ನಡ ಭಾಷೆ ಬಗ್ಗೆ ವೈದ್ಯೆ ತುಂಬಾ ಹಗುರವಾಗಿ ಮಾತನಾಡಿದ್ದಾರೆ.. ಕನ್ನಡ ಭಾಷೆ ಗೊತ್ತಿದ್ದರೂ ಯಾಕೆ ಉಡಾಫೆ ಅಂತ ಪ್ರಶ್ನಿಸಿದಾಗ, ನನ್ನಿಷ್ಟ ಎಂದು ಹಗುರವಾದ ಉತ್ತರ ನೀಡಿದ್ದಾರೆ..
ಇದಕ್ಕೆ ಕನ್ನಡ ಮಾತಾಡಿ ಅಂತ ವಿನಂತಿ ಮಾಡಿಕೊಂಡಿದ್ದೇವೆ ವಿನಃ ಹಲ್ಲೆ ಮಾಡಿಲ್ಲ ಅಂತ ನಟಿ ಕಂ ಕರವೇಯ ಅಶ್ವಿನಿ ಗೌಡ ಸ್ಪಷ್ಟ ಪಡಿಸಿದ್ದಾರೆ..

ಕಣ್ಣು ಕಳೆದುಕೊಂಡವರಿಗಾಗಿ ನಮ್ಮ ನಾಯ್ಯಯುತ ಹೋರಾಟ ನಡೆಯಲಿದೆ..
ಭಾಷೆ, ನೆಲ ಜಲದ ವಿಚಾರ ಬಂದಾಗ ಕರವೇ ಟೊಂಕ ಕಟ್ಟಿ ಅದರ ಉಳಿವಿಗೆ ನಿಲ್ಲುತ್ತದೆ..
ಹಲ್ಲೆಯೇ ಮಾಡದಿದ್ದಾಗ ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ.. ಕ್ಷಮೆ ಯಾವುದೇ ಕಾರಣಕ್ಕೂ ಕೇಳುವುದಿಲ್ಲ, ನಮ್ಮ ಹೋರಾಟ ಮುಂದುವರೆಸಲಿದ್ದೇವೆ ಅಂತ ತಿಳಿಸಿದ್ದರು..

KN_BNG_2_ASHWINGOWDA_REACTION_SCRIPT_7201801
Body:.Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.